..
kruti: tandevaradagopala vittala (ಪ್ರಹ್ಲಾದಗೌಡರು)
ಚಲಿಸದಂದದಿ ಮಾಡು ಎನ್ನನು ಶೈಲೇಂದ್ರವರ್ಯಾ ಪ
ನಿನ್ನಾಣೆ ನಿನ್ನಾಣೆ ಸಹಿಸಲಾರದೆ ನಿನ್ನ ಶರಣು ಬಂದೆನೊರಾಯಾ ಅ.ಪ.
ಕಾಲವನು ತಿಳಿಯದಲೆ ಕಾಲಿಗೆರುವೆನೆಂದರೂಬಿಡದೆ ಕರಕರೆಯ ಬಿಡಿಸಿದಳುಅರಿತು ವಿಚಾರಿಸೋ ನಿನ್ನ ಮರಿಯಾದ ಬಳಿಕ ಈ ಪರಿ ನಗುತಿಪ್ಪುದು ಥರವೇ 1
ಸರಸಾದ ಬೇಟಿಯು ಕರಬಿಟ್ಟು ಪೋಗಲು ನೋಟಗಾರರಿಗೆ ನೀಟವೇಸೂತ್ರವಿಹುದು.....ಗ್ರಹದಲಿ ಸೂತ್ರ ಏನು ಸರಿಯಾದ ಕಾಲದಲಿ ಹರಿಯಲು ಸರಿದೋರುವುದೇ ರಸಿಕರಿಗೆ2
ಯೇನಾದರಾಗಲಿ ಅಪರಾಧ ಶತಕೋಟಿವಿದ್ದರೂ ಸರಿ ಶೀಘ್ರದಿಂ ಪಾಲಿಸಯ್ಯ ಸಾಲದಾ ಭಾರ ತಾಳೆನೊಬೇಗ ಬರುವಂತೆ ಮಾಡಿ ಪಾಂಡುರಂಗ ಪ್ರಾಯ ಗುರುಕೃಷ್ಣತಂದೆವರದಗೋಪಾಲವಿಠ್ಠಲನಾಣೆ ಪೊರೆಯದಿರೆ 3
***