Showing posts with label ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ಯದುಪತಿ rangavittala VIDHIGE DAYAVILLAVAKKA EMMA MYAALE YADUPATI. Show all posts
Showing posts with label ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ಯದುಪತಿ rangavittala VIDHIGE DAYAVILLAVAKKA EMMA MYAALE YADUPATI. Show all posts

Wednesday, 11 December 2019

ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ಯದುಪತಿ ankita rangavittala VIDHIGE DAYAVILLAVAKKA EMMA MYAALE YADUPATI



ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ||ಪ||
ಯದುಪತಿಯನಗಲಿಸಿದ ಒಮ್ಮಿಂದಲೊಮ್ಮೆ ||ಅ.ಪ||

ಎವೆಯ ಮರೆಯ ಮಾಡಿ ಪೋದ ಯಾಕೋ ವಿಧಿಯೇ
ಸುಳಿಗುರುಳು ಕಡೆಗಣ್ಣ ನೋಟದಿಂದಲಿ
ಕವಕವಿಸಿ ನಗುವ ಮುದ್ದು ಮುಖವನು
ತವಕದಿಂದಲಿ ಮರಳಿ ಮರಳಿ ನೋಡಿದ್ಹೋದೆವೆ ||೧||

ಹಕ್ಕಿಯ ಮ್ಯಾಲುಳ್ಳ ದಯ ನಮ್ಮ ಮ್ಯಾಲೆ
ಇಕ್ಕದೇಕೆ ಹೋದ್ಯೋ ವಿಧಿಯೇ
ರೆಕ್ಕೆ ಎರಡುಳ್ಳರೆ ಮಧುರೆಗೆ ಪೋಗಿ
ಘಕ್ಕನೆ ಶ್ರೀ ಹರಿಯೊಡನೆ ಕೂಡುತಿದ್ದೆವಲ್ಲ ||೨||

ತಂಗೀ ನಮ್ಮೆದೆಯು ಕಲ್ಲಾಗಿ ಇದ್ದೇವೆ
ಹಿಂಗುವರೆ ಸಖಿಯರು ಒಮ್ಮಿಂದಲೊಮ್ಮೆ
ರಂಗವಿಠಲನ್ನ ಅಂಗಸಂಗವ ಬಿಟ್ಟು ಇಂಥ
ಭಂಗಜೀವ ಸುಡಸುಡಲ್ಯಾತಕೋ ||೩||
***
ತೋಡಿ ರಾಗ ಛಾಪುತಾಳ (raga tala may differ in audio)