Showing posts with label ಶ್ರೀಮದಾನಂದ ತೀರ್ಥರೆಂಬ ಅರ್ಥಿಯ ಪೆಸರುಳ್ಳ gurupranesha vittala SRIMADANANDA TEERTHAREMBA ARTHIYA PESARULLA. Show all posts
Showing posts with label ಶ್ರೀಮದಾನಂದ ತೀರ್ಥರೆಂಬ ಅರ್ಥಿಯ ಪೆಸರುಳ್ಳ gurupranesha vittala SRIMADANANDA TEERTHAREMBA ARTHIYA PESARULLA. Show all posts

Saturday, 20 February 2021

ಶ್ರೀಮದಾನಂದ ತೀರ್ಥರೆಂಬ ಅರ್ಥಿಯ ಪೆಸರುಳ್ಳ ankita gurupranesha vittala ANANDATEERTHAREMBA ARTHIYA PESARULLA



ಶ್ರೀಮದಾನಂದ ತೀರ್ಥರೆಂಬ |ಅರ್ಥೀಯ ಪೆಸರುಳ್ಳ |ಗುರುಮಧ್ವಮುನಿರಾಯ
|ಏನೆಂಬೆ ನಾನಿನ್ನ ಕರುಣಕೆ ಎಣೆಗಾಣೆ ಪ||

ಬ್ಯಾಸರದೆ ಸರ್ವರಲ್ಲಿ |ಶ್ವಾಸ ಜಪಗಳ ಮಾಡಿಗುಂ |
ಶ್ರೀಶಗರ್ಪಿಸುತ ಹರಿ |ದಾಸರನ್ನು ಪಾಲಿಸಿದೆ ||

ಅಂದು ಹನುಮಂತನಾಗಿಬಂದು ಸುಗ್ರೀವಗೆ ಗುರುಂ |
ಅಂದವಾದ ಪದವಿತ್ತಾ |ನಂದವನು ಬಡಿಸಿದೆ ಗುರುಂ ||

ಕುಂತಿಯ ಕುಮಾರನಾಗಿ |ಹಂತ ಕೌರವರನ ಕೊಂದಿ ಗುರುಂ |
ಅಂತು ಪುಣ್ಯವ ಶ್ರೀ |ಕಂತು ಪಿತಗರ್ಪಿಸಿದೆಯೋ ||

ಅದ್ವೈತರನು ಕಾದಿ |ಗೆದ್ದು ನಿನ ಭಕ್ತರಿಗೆ ಗುರುಮಧ್ವಮುನಿರಾಯ |
ಶುದ್ಧ ತಾತ್ಪರ್ಯ ವಾಕ್ಯ |ಪದ್ಧತಿಯ ತಿಳಿಸಿದಿ ಗುರುಂ ||

ಗುರುಪ್ರಾಣೇಶ ವಿಠಲಾಪರನೆಂದು ಡಂಗುರವ ಗುರುಂ |
ಸಾರಿಸಿ ಸಜ್ಜನರನ್ನು |ಹರಿಲೋಕ ಸೇರಿಸಿದಿ ಗುರುಂ ||
****

ಶ್ರೀ ವಾಯುದೇವರ ಸ್ತುತಿ
ಶ್ರೀಮದಾನಂದ ತೀರ್ಥರೆಂಬ |ಅರ್ಥೀಯ ಪೆಸರುಳ್ಳ |ಗುರುಮಧ್ವಮುನಿರಾಯ |ಏನೆಂಬೆ ನಾನಿನ್ನ ಕರುಣಕೆ ಎಣೆಗಾಣೆ ಪ
ಬ್ಯಾಸರದೆ ಸರ್ವರಲ್ಲಿ |ಶ್ವಾಸ ಜಪಗಳ ಮಾಡಿಗುಂ ||ಶ್ರೀಶಗರ್ಪಿಸುತ ಹರಿ |ದಾಸರನ್ನು ಪಾಲಿಸಿದೆ 1
ಅಂದು ಹನುಮಂತನಾಗಿಬಂದು ಸುಗ್ರೀವಗೆ ಗುರುಂ ||ಅಂದವಾದ ಪದವಿತ್ತಾ |ನಂದವನು ಬಡಿಸಿದೆ ಗುರುಂ 2
ಕುಂತಿಯ ಕುಮಾರನಾಗಿ |ಹಂತ ಕೌರವರನ ಕೊಂದಿ ಗುರುಂ ||ಅಂತು ಪುಣ್ಯವ ಶ್ರೀ |ಕಂತು ಪಿತಗರ್ಪಿಸಿದೆಯೋ 3
ಅದ್ವೈತರನು ಕಾದಿ |ಗೆದ್ದು ನಿನ ಭಕ್ತರಿಗೆ ಗುರುಮಧ್ವಮುನಿರಾಯ ||ಶುದ್ಧ ತಾತ್ಪರ್ಯ ವಾಕ್ಯ |ಪದ್ಧತಿಯ ತಿಳಿಸಿದಿ ಗುರುಂ 4
ಗುರುಪ್ರಾಣೇಶ ವಿಠಲಾಪರನೆಂದು ಡಂಗುರವ ಗುರುಂ ||ಸಾರಿಸಿ ಸಜ್ಜನರನ್ನು |ಹರಿಲೋಕ ಸೇರಿಸಿದಿ ಗುರುಂ 5
*****