Showing posts with label ಕರುಣಿಸೆನಗೆ ಶಂಭೋ ಕರುಣಿಸಯ್ಯಾ govinda. Show all posts
Showing posts with label ಕರುಣಿಸೆನಗೆ ಶಂಭೋ ಕರುಣಿಸಯ್ಯಾ govinda. Show all posts

Monday, 11 November 2019

ಕರುಣಿಸೆನಗೆ ಶಂಭೋ ಕರುಣಿಸಯ್ಯಾ ankita govinda

by ಗೋವಿಂದದಾಸ
ಕರುಣಿಸೆನಗೆ ಶಂಭೋ ಕರುಣಿಸಯ್ಯಾಶರಣಾರಂದದಿ ನಿನ್ನ ಮನದಿರವರಿಯೆನುಕರವಜೋಡಿಸಿ ದೇವಾ ಚರಣಕೊಂದಿಪೆನು ಪ

ಕ್ಷೋಣಿಯೊಳ್ ಮಾರ್ಕಾಂಡೆಯಂತೆ ಪೂಜಿಸಲಾರೆಮೀನಾಕ್ಷಿಯಂತೆ ಕಾದಿ ಪರಿಸಲಾನರಿಯೇಬಾಣಾಸುರನಂತೆ ತಪಗೈಯ್ಯಲಾರೆ ನಾನುರಾವಣನಂತೆ ಸಾಮಗಾನವನರಿಯೇ 1

ಶಿರದಿ ಚಂದಿರನಂತೆ ಶೋಭಿಸಲಾರೆ ಭಕ್ತಿಸ್ಥಿರವರಿಯೆನು ಭೀಮಸೇನನಂತೆಉರಗನಂದದಿ ಕೊರಳಾಭರಣವಾಗಿರಲಾರೆಗಿರಿಜೆಯಂದದಿ ನೆರೆದು ಮುದ್ದಿಸಲರಿಯೆ 2

ಮಂದಾಕಿನಿಯಂತೆ ಜಡೆಯಾಲಂಕರಿಸೆನುನಂದೀಶನಂತೆ ಪೊತ್ತು ತಿರುಗಾಡಲರಿಯೆಇಂದ್ರನಂದನನಂತೆ ಭರದಿ ಮೆಚ್ಚಿಸಲಾರೆಬಂದೆನ್ನ ಸಲಹೋ ಗೋವಿಂದನ ಸಖನೆ 3
*******