Showing posts with label ವಾಸೂಕಿ ಶಯನ ಅಶೋಕ ಪರಾಕೂ pranesha vittala. Show all posts
Showing posts with label ವಾಸೂಕಿ ಶಯನ ಅಶೋಕ ಪರಾಕೂ pranesha vittala. Show all posts

Saturday, 16 November 2019

ವಾಸೂಕಿ ಶಯನ ಅಶೋಕ ಪರಾಕೂ ankita pranesha vittala

by ಪ್ರಾಣೇಶದಾಸರು
ವಾಸೂಕಿ ಶಯನ ಅಶೋಕ ಪರಾಕೂ |ವಾಸುದೇವಾನಿರುದ್ಧ ಶ್ರೀ ಕೃಷ್ಣ ಪರಾಕೂ ||ಸಾಸಿರನಾಮದ ಹರಿಯೆ ಪರಾಕೂ |ದೋಷರಹಿತ ರಘುಪತಿಯೆ ಪರಾಕೆಂದು ||ಮೀಸಲಾರುತಿಯಾ ಬೆಳಗೀರೆ ಪವೃಂದಾವನದೊಳಗಿಹನೆ ಪರಾಕೂ |ತಂದಿ ತಾಯ್ಗಳ ಬಿಡಿಸಿಹನೆ ಪರಾಕೂ ||ಸಿಂಧುರವರದ ಗೋಪಾಲ ಪರಾಕೂ ||ಸಿಂಧುಶಯನಪದ್ಮನಾಭಪರಾಕೆಂದು ||ಛಂದದಲಾರುತಿಯಾ ಬೆಳಗೀರೆ1

ಸತ್ಯಾಭಾಮಿ ರುಗ್ಮಿಣಿ ರಮಣಾ ಪರಾಕೂ |ಮುತ್ಯಗ ಪಟ್ಟಗಟ್ಟಿದವನೆ ಪರಾಕೂ ||ಭಕ್ತ ಪೋಷಕ ತ್ರಿವಿಕ್ರಮನೆ ಪರಾಕೂ |ಸತ್ಯಸಂಕಲ್ಪಹೃಷಿಕೇಶ ಪರಾಕೆಂದು ||ಮುತ್ತಿನಾರುತಿಯಾ ಬೆಳಗೀರೆ 2

ಮಾಧವಖರ ದೂಷಣಾರಿ ಪರಾಕೂ |ಬಾದರಾಯಣಪುರುಷೋತ್ತಮ ಪರಾಕೂ ||ಯಾದವರೊಳು ಪುಟ್ಟಿದನೆ ಪರಾಕೂ |ವೇದ ಉದ್ಧರ ಮತ್ಸ್ಯರೂಪಿ ಪರಾಕೆಂದು ||ಮೋದದಲಾರುತಿಯಾ ಬೆಳಗೀರೆ3

ಇಂದ್ರ ಬಲಿಯನುಂಡಾ ಧೀರ ಪರಕೂ |ಕಂದಗೊಲಿದ ನರಸಿಂಹ ಪರಾಕೂ ||ನಂದನಂದನಶೌರಿಪರಾಕೂ |ಮಂದರಪರ್ವತ ಧರನೆ ಪರಾಕೆಂದು ||ಕುಂದಣದಾರುತಿಯಾ ಬೆಳಗೀರೆ 4

ಜಟ್ಟೇರ ಹುಡಿಗುಟ್ಟೀದವನೆ ಪರಾಕೂ |ದುಷ್ಟ ಕಂಸನ ತರಿದವನೆ ಪರಾಕೂ ||ಕೆಟ್ಟಾಜಾಮಿಳಗೊಲಿದವನೆ ಪರಾಕೂ |ಅಷ್ಟು ಲೋಕವ ಸಲಹುವನೆ ಪರಾಕೆಂದು ||ತಟ್ಟಿಯೊಳಾರುತಿಯಾ ಬೆಳಗೀರೆ5

ಮಾರನಯ್ಯಾ ಪ್ರಾಣೇಶ ವಿಠಲ ಪರಾಕೂ |ನೀರಜಾಂಬಕ ಶ್ರೀನಿವಾಸ ಪರಾಕೂ ||ದ್ವಾರಕಿನಿಲಯಮುರಾರೆ ಪರಾಕೂ |ಕ್ಷೀರಾಬ್ಧಿ ಸುತಿಯ ವಲ್ಲಭನೆ ಪರಾಕೆಂದು ||ನಾರಿಯರಾರುತಿಯಾ ಬೆಳಗೀರೆ 6
*******