Showing posts with label ಶ್ರೀರಮೆಯನಾಥ ನಿನ್ನಂಘ್ರಿಗಳ ಸೇರಿದನ devapura lakshmikanta. Show all posts
Showing posts with label ಶ್ರೀರಮೆಯನಾಥ ನಿನ್ನಂಘ್ರಿಗಳ ಸೇರಿದನ devapura lakshmikanta. Show all posts

Monday, 2 August 2021

ಶ್ರೀರಮೆಯನಾಥ ನಿನ್ನಂಘ್ರಿಗಳ ಸೇರಿದನ ankita devapura lakshmikanta

ಶ್ರೀರಮೆಯನಾಥ ನಿನ್ನಂಘ್ರಿಗಳ ಸೇರಿದನ

ದೂರ ಮಾಡಿರುವುದುಚಿತವೆ ಪ


ವಾರಿಜಾಂಬಕ ಎನ್ನ ಕ್ರೂರಚಿಂತೆಯ ಹರಿಸಿ

ಬೇಡಿದುಪ್ಪವನೀವುದೂ ಅ.ಪ


ವ್ರತಶೀಲನಾಗಿ ಭೂಪತಿ ಅಂಬರೀಷನ

ಅತಿಶಯದಿ ಪೊಗಳುತಿರಲೂ

ಯತಿರಾಜ ದೂರ್ವಾಸನಡೆತಂದು ದ್ವಾದಶಿಯ

ತಿಥಿಯೊಳನ್ನವ ಬೇಡಲು

ಪೃಥಿವೀಶ ಕೊಟ್ಟನೆನೆ ದ್ವಾದಶಿಯ ಪಾರಣೆಯ

ಮಿತಿ ಮೀರಿ ಪೋಗುತಿರಲೂ

ಕಥನದಿಂ ಶ್ರೀತುಳಸಿಯನು ಭುಂಜಿಸಲು ಕೋಪಿಸಲಾಗ

ನತಜನಾಶ್ರಯ ನೀನು ಪೊರೆದೆ ಅಹುದು 1


ಮುಂದನರಿಯದೆ ಯಮನಂದನಂ ದ್ಯೂತಮಂ

ಅಂದು ಕೌರವನೊಳಾಡೆ

ಮಂದಮತಿಯಾಗಿ ಸೋಲಲು ನಾರಿಯನು ಆ ಸಭೆಗೆ

ತಂದು ಮಾನಭಂಗವನೆ ಮಾಡೆ

ಇಂದುಮುಖಿಯುಟ್ಟ ಸೀರೆ ಅಕ್ಷಯ

ವೆಂದು ನಂದಕುಮಾರ ಸಲಹೇ 2


ಎನ್ನಳವೆ ನಿನ್ನಯ ಮಹಿಮೆಯನು ಪೊಗಳುವಡೆ ಯ

ಪರ್ಣವಾಹನರೊಡನೇ

ಮನ್ಮಥನ ಶತಕೋಟಿ ಲಾವಣ್ಯ ಯದುಕುಲಾಮ

ರಾರ್ಣವಕೆ ಚಂದ್ರ ನೀನೇ

ಸನ್ನುತನಾದೆ ಸುರಪುರದ ಲಕ್ಷ್ಮೀವರನೆ

ಮನ್ನಿಪುದು ಶರಣಪ್ರಿಯನೆ

ಭಿನ್ನವಿಲ್ಲದೆ ನೀಂ ದಾಸಾನುದಾಸರನು ಪ್ರ

ಸನ್ನನಾಗಿಯೆ ಸಲಹು ಇಂದು ಬಂದು3

****