ಚನ್ನಪಟ್ಟಣದ ಅಹೋಬಲದಾಸರು
ಇಂದಿರಾಪತಿ ನಿನ್ನ ಸುಂದರ ಚರಣವ ನಾ ನೆಂದೆಗೆ ಕಾಣುವೆನೋ ಶ್ರೀಮಂದರೋದ್ಧರನೇ ಪ
ಹಿಂದೆ ಸುಜನರೂ ಪದವಿಹೊಂದಲಿಲ್ಲವೇ ಇದ ಕ್ಕೊಂದುಪಾಯವೇನೊ ನಿನ್ನ ಕಂದನಲ್ಲವೇ 1
ಪರಿ ನಾನೊಂದಿಪೆನೆಲೊ ನೀ ಬಂದು ಮುಖವ ತೋರಲು ಎನಗೊಂದೆ ಸಾಕೆಲೊ 2
ಸುಜನರೊಡನೆಯೇ ಕೂಡಿಭಜನೆ ಮಾಡಿದೇ ನೀ ನಿಜ ಕಲ್ಯಾಣಪುರದ ಒಡೆಯನೆಂದು ಬೇಡಿದೇ3
ದಾಸದಾಸನು ಶೇಷಾದ್ರಿವಾಸನೇ ನನ್ನ ದೋಷರಹಿತಗುರುವು ತುಲಸೀರಾಮದಾಸನೇ 4
***