..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಕಾಯೊ ಕಾಯೊ ಕಾಮಿತ ಫಲದ ಕಾಯೊ ಕಾಯೊ ಪ
ಕಾಯೊ ಕಾಯೊ ಎನ್ನ ಕಾಯಜನಯ್ಯನೆ
ಕಾಯದಿದ್ದರೆನ್ನ ಕಾವವರಾರೊ ಅ.ಪ
ಎಂದೆಂದಿನ ಕರ್ಮಗಳನೆಣಿಸುತಲಿ
ಕಂದಿಸಿ ಕುಂದಿಸಿ ಬಂಧಿಪರೇನೋ 1
ತಾಳಲಾರೆ ಈ ಕಾಲನ ಬಾಧೆಯು
ಬೇಳುವೆ ನಿನ್ನಯ ಕಾಲಿಗೆ ಸ್ವಾಮಿ 2
ಆಲಸ ಮಾಡದೆ ಆರ್ತಿಗಳೋಡಿಸಿ
ಪಾಲಿಪುದೆನ್ನನು ಪಾವನ ಮೂರ್ತೆ3
ಮಾಡಿದ ಪಾಪಗಳೋಡಿಸಿ ಸುಖದಿಂ
ದಾಡಿಸು ಕಣ್ಣಿಗೆ ಕಾಣಿಸಿಕೊಂಡು 4
ವಾಸುದೇವವಿಟ್ಠಲ ನೀ ಎನಗಿನ್ನು
ವಾಸಿ ಮಾಡಿಸಿ ಕೀರ್ತಿಯ ಪಡೆಯೊ 5
***