Showing posts with label ಹಸೆಗೀಗ ಬಾರೆ ಸಖಿಯೆ ಶಶಿಬಿಂಬಪೋಲ್ವ ಮುಖಿಯೆ shyamasundara. Show all posts
Showing posts with label ಹಸೆಗೀಗ ಬಾರೆ ಸಖಿಯೆ ಶಶಿಬಿಂಬಪೋಲ್ವ ಮುಖಿಯೆ shyamasundara. Show all posts

Wednesday, 1 September 2021

ಹಸೆಗೀಗ ಬಾರೆ ಸಖಿಯೆ ಶಶಿಬಿಂಬಪೋಲ್ವ ಮುಖಿಯೆ ankita shyamasundara

 ..

ಹಸೆಗೀಗ ಬಾರೆ ಸಖಿಯೆ ಶಶಿಬಿಂಬಪೋಲ್ವ ಮುಖಿಯೆ ಪ

ಝಗ ಝಗಿಪ ವಸನ ಉಟ್ಟು |

ಸೊಗಸಾದ ಕಂಚುಕವ ತೋಟ್ಟು |

ಮೃಗಮದದ ಕಸ್ತೂರಿ ಬಿಟ್ಟು ಮೃಗನಯನೆ ಫಣಿಯೊಳಿಟ್ಟು 1

ರಮಣೇರು ಕೂಡಿ ನಿನ್ನ ಘಮಘÀಮಿಸು ಕರೆಯುತಿಹರೇ |

ಪ್ರಮದಾಮಣಿಯ ಶಿರದಿ ಸುಮಗಳ ಮುಡಿದು ಮುದದೀ 2

ಸಿರಿಯರಸ ಕಮಲನಯನ ವರಶಾಮಸುಂದರನಾ |

ಸ್ಮರಿಸುತ್ತ ಮನದಿ ಲಲನೆ ತಿರಸ್ಕರಿಸದೆ ಹಂಸಗಮನೆ 3

***