Showing posts with label ಇನ್ನು ಭ್ರಾಂತಿಯ ಮಾಡುವರೆ ನನ್ನದೆಂದು ಆಡುವರೆ jnanabodha. Show all posts
Showing posts with label ಇನ್ನು ಭ್ರಾಂತಿಯ ಮಾಡುವರೆ ನನ್ನದೆಂದು ಆಡುವರೆ jnanabodha. Show all posts

Thursday, 5 August 2021

ಇನ್ನು ಭ್ರಾಂತಿಯ ಮಾಡುವರೆ ನನ್ನದೆಂದು ಆಡುವರೆ ankita jnanabodha

..

ಇನ್ನೂ ಭ್ರಾಂತಿಯ ಮಾಡುವರೆ | ನನ್ನದೆಂದು ಆಡುವರೆ |ತನ್ನ ತಾ ತಿಳಿಯದೆ | ಅನ್ಯರ ಗುಣದೋಷ ನೋಡುವರೆ ಪ


ಸ್ತುತಿಸುತ ಬಂದರೇನು | ಮತ್ತೆ ಜಲವ ಮಿಂದರೇನು | ಎತ್ತ ಹೋದರೂ ದಣಿವಿಕೆಯಿಲ್ಲದೆ | ನಿತ್ಯಾನಿತ್ಯ ವಿವರಿಸಲಿಲ್ಲ 1

ಮಾತಿನ ಬಣವಿಯನೊಟ್ಟಿ | ಸ್ವಂತ ವಿಷಯಂಗಳ ಮುಟ್ಟಿ |ಯಾತಕೆ ವೈರಾಗ್ಯದ ಮಾತು | ಮಾತಿನಂತೆ ನಡೆದರಾಯಿತು 2

ನಾನು ದೊಡ್ಡವ ನನ್ನವರೆಂದು |ಜ್ಞಾನ ಗರ್ವದ ಮನೆಗೆ ಬಂದು | ಜ್ಞಾನಬೋಧನ ಪ್ರಭುವ ಕೂಡದೆ ದೀನನಾಗಿ ಬಳಲುವದೇನೊ 3

***