Showing posts with label ಎಂತು ರಕ್ಷಿಪೆ ಎನಗೆಂತು ಶಿಕ್ಷಕರಿಲ್ಲ vasudeva vittala. Show all posts
Showing posts with label ಎಂತು ರಕ್ಷಿಪೆ ಎನಗೆಂತು ಶಿಕ್ಷಕರಿಲ್ಲ vasudeva vittala. Show all posts

Wednesday 1 September 2021

ಎಂತು ರಕ್ಷಿಪೆ ಎನಗೆಂತು ಶಿಕ್ಷಕರಿಲ್ಲ ankita vasudeva vittala

 ,,

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 


ಎಂತು ರಕ್ಷಿಪೆ ಎನಗೆಂತು ಶಿಕ್ಷಕರಿಲ್ಲ ಪ


ಸಕಳ ಸಂಶಯಗಳ ವಿಕಳವ ಮಾಡಿಸಿ

ಅಕಳಂಕ ಮತಿ ಸೋಮ ಸುಕಳ ಮಾಡುವರಿಲ್ಲ 1


ಸಂತತ ನಿನಗೇನು ಅಂತರ ಸ್ಥಿತಿಯೆಂದು

ಚಿಂತಿಪ ಬಂಧು ಆದ ಸಂತ ಜನರ ಕಾಣೆ 2


ಪರಿಪರಿ ಬಗೆಯಿಂದ ಪರತತ್ವಗಳನು

ಅರಿದು ತಿಳಿಪದ್ಯಚ್ಚರಿಪರು ಎನಗಿಲ್ಲ3


ತುತಿ ಮಾಡಿ ಕೆಲರು ಸನ್ಮತಿಯಾಗೊಡಿಸುವರು

ಕ್ಷಿತಿಯೊಳಗೆನಗುಪಕೃತಿಯ ಮಾಡುವರಿಲ್ಲ 4


ಹಲವು ಪರಿಯಲೆನ್ನ ಸಲಹುವ ಗುರುದೈವ

ಕುಲಪ ವಾಸುದೇವವಿಠಲ ನೀ ಕರುಣಿಸೊ 5

***