Showing posts with label ಭೀಕರ ರೂಪವ ತೋರುವ sirigurutandevarada vittala satyabodha teertha stutih. Show all posts
Showing posts with label ಭೀಕರ ರೂಪವ ತೋರುವ sirigurutandevarada vittala satyabodha teertha stutih. Show all posts

Friday, 6 August 2021

ಭೀಕರ ರೂಪವ ತೋರುವ ankita sirigurutandevarada vittala satyabodha teertha stutih

 ..

Kruti by ಸಿರಿಗುರುತಂದೆವರದವಿಠಲರು sirigurutandevarada vittala 

ಶ್ರೀ ಸತ್ಯಬೋಧರು


ಭೀಕರ ರೂಪವ ತೋರುವ ಯತಿವರನ್ಯಾರೆ ಪೇಳಮ್ಮಯ್ಯ ಪ.


ನಾಕಲೋಕಪತಿ ಪಿತನ ಬಲದಿ ಯಮಪಾಶ ಗೆದ್ದ ಸತ್ಯಬೋಧಕಾಣಮ್ಮ ಅ.ಪ.


ಹರಿ ಆಚಾರ್ಯರ ಉದರದಿ ಜನಿಸಿದನ್ಯಾರೇ ಪೇಳಮ್ಮಯ್ಯಮಾರನ ಪೋಲುವ ರೂಪದಿಂದ್ಹೊಳಿಯುವ-ನ್ಯಾರೇ ಪೇಳಮ್ಮಯ್ಯಗುರುಮುಖದಿಮಂದಧ್ಯಯನ ಮಾಡುತಮನಮೋಹಗೊಳಿಪ ಬಾಲಕನಾರಮ್ಮ1


ಸುಂದರರೂಪನ ಸತಿಯನಾಮ ಕಳವರಿಸಿ-ನ್ಯಾರೆ ಪೇಳಮ್ಮಯ್ಯಮುದದಿಂದಲಿ ಸತ್ಪುತ್ರರ ಪಡೆದಿಹನ್ಯಾರೆ ಪೇಳಮ್ಮಯ್ಯಮಿಂದಸಂಸಾರದಿ ಇಂದಿರೇಶನ ಭಜಿಸುವಶ್ರೀರಾಮಾರ್ಯ ಕಾಣಮ್ಮ2


ಸತ್ಯಪ್ರೇಮರ ಪ್ರೀತಿಗೆ ಪಾತ್ರನುದಾರೆ ಪೇಳಮ್ಮಯ್ಯತಂತ್ರಿಣಿ ತಲದಲಿ ಆಶ್ರಯಗೊಂಡವನ್ಯಾರೆ ಪೇಳಮ್ಮಯ್ಯಮತ್ತೆ ಜಗದೊಳಿಹ ಮಿಥ್ಯವಾದಿಗಳೆಂಬಾಮತ್ತಗಜಗಳಂಕುಶನಿವನಮ್ಮಾ 3


ಶ್ರವಣಾಖ್ಯಪುರದಿ ಮಾಡಿಹನ್ಯಾರೆ ಪೇಳಮ್ಮಯ್ಯಶೇಷರೂಪದ ದುಷ್ಟದೈತ್ಯನ ಸುಟ್ಟವನ್ಯಾರೆ ಪೇಳಮ್ಮಯ್ಯಶೇಷಗತಿಯ ಮನ ಭೂಸುರ ವೃಂದಕೆನಿಶಿಯಲಿ ರವಿಯನು ತೋರಿದನಮ್ಮ 4


ತಪದ ಪ್ರಭಾವದಿ ಗಂಗೆಯನೊಲಿಸಿಹನ್ಯಾರೆ ಪೇಳಮ್ಮಯ್ಯಗೋಪಿಯ ಮಗನನು ತೀರ್ಥದ ದಡದಲಿ ನಿಲಿಸಿಹನ್ಯಾರೆ ಪೇಳಮ್ಮಯ್ಯಗೋಪರೊಡೆಯ ತಂದೆವರದವಿಠಲನನ್ನುಸತತ ಭಜಿಸುವ ಯತಿವರನೆ 5

***