by ಪ್ರಸನ್ನವೆಂಕಟದಾಸರು
ಕಡಲದಾಟಿದ ಬಲುಧೀರನೆ ಬಂದುಒಡಲ ಹೊಕ್ಕವರಿಗುದಾರನೆ ಪ.
ಬಿಡದೆ ಭಕ್ತರ ಕೈಯವಿಡಿದು ರಕ್ಷಿಸುವ ಎನ್ನೊಡೆಯ ಹನುಮರಾಯ ಅಡವಿಯನಿಲಯಅ.ಪ.
ದೃಢದಿಂದ ಲಂಕೆಯ ಪೊಕ್ಕನೆ ದೇವಮೃಡನಿಂದ ಪೂಜೆಗೆ ತಕ್ಕನೆಪೊಡವಿಯ ಮಗಳನು ಕಂಡನೆ ಕಿತ್ತುಗಿಡ ವನಗಳ ಫಲ ಉಂಡನೆಅಡಿಗಡಿಗೊದಗಿದ ಕಿಡಿಗೇಡಿ ರಕ್ಕಸರ್ಹೊಡೆದು ಪುರವನೆಲ್ಲ ಕಿಡಿಗಂಜಿಸಿದ ಧೀರ 1
ತಡೆಯದೆ ಸುದ್ದಿಯ ತಂದನೆ ಜಗದೊಡೆಯ ರಾಮನ ಮುಂದೆ ನಿಂದನೆಪಿಡಿದೆತ್ತಿ ತರುಗಿರಿ ಪೊತ್ತನೆ ಕಪಿಗಡಣಕ್ಕೆ ಒಬ್ಬನೆ ಕರ್ತನೆಜಡಧಿ ದಾರಿಯಕಟ್ಟಿನಡೆದು ರಾವಣನೆದೆಒಡೆಗುದ್ದಿಕಾಳಗಜಡಿದುಮಾಡಿಸಿದೆ2
ಪೆಡಕಿಲಾಸನವಿತ್ತು ದಾತಗೆತುಷ್ಟಿಬಡಿಸಿದೆ ಶ್ರೀರಘುನಾಥಗೆಕಡುವೇಗ ಸಂಜೀವ ಸಲಿಸಿದೆ ನೊಂದುಪುಡಿವಟ್ಟ ಕಟಕವ ನಿಲಿಸಿದೆಬಡವರಾಧಾರಿ ನಿನ್ನಡಿಗೆರಗುವೆ ಲೇಸಕೊಡು ಪ್ರಸನ್ವೆಂಕಟ ಒಡೆಯನನಿಲಯ3
********