Showing posts with label ನೋಡಿದೆನೊ ಮನದಣಿಯ ನಳಿನಭವಾದ್ಯರ vijaya vittala. Show all posts
Showing posts with label ನೋಡಿದೆನೊ ಮನದಣಿಯ ನಳಿನಭವಾದ್ಯರ vijaya vittala. Show all posts

Wednesday, 16 October 2019

ನೋಡಿದೆನೊ ಮನದಣಿಯ ನಳಿನಭವಾದ್ಯರ ankita vijaya vittala

ವಿಜಯದಾಸ
ನೋಡಿದೆನೊ ಮನದಣಿಯ ನಳಿನಭವಾದ್ಯರ
ಕ್ರೀಡಾಮೃಗವನೆ ಮಾಡಿ
ಆಡಿಸುವ ವಿಚಿತ್ರ ಮಹಿಮ ಗೋಪಾಲಗ
ಈಡುಗಾಣೆನೊ ಎಲ್ಲೆಲ್ಲಿ ಆವಲ್ಲಿ ಪ

ಕಾಲಲಂದಿಗೆ ಗೆಜ್ಜೆ ಸರಪಳಿ ಉಡುದಾರ
ಮೇಲು ಕಿರಿಗೆಜ್ಜೆ ಘಂಟೆ
ತೋಳು ರಕ್ಷಾಮಣಿ ನಾಗ ಮುರಿಗೆ ಬಂದಿ
ಸಾಲು ತಾಯಿತ ಕಟ್ಟಿರೆ
ವಜ್ರ ಉಂಗುರದ ಬೆರಳು ಸು
ಫಾಲದಲಿಯಿಟ್ಟ ತಿಲಕಾ
ಲಾಲಿಸುವ ಬಾಲಕರೂಪದಿಂದಲಿ ಪ್ರಾತಃ
ಇಂದು 1

ಮುಂಗೈ ಮುರಾರಿ ಪವಳದ ಬುಲಿಗೆಜ್ಜೆ
ಬಂಗಾರ ಕೊರಳಲ್ಲಿ ಹಾ
ರಂಗಳನು ಶೋಭಿಸುವ ಮಾಗಾಯಿ ಕರ್ಣದಲಿ
ಉರ ಕೌಸ್ತಭ
ಕಂಗೊಳಿಪ ಎಣೆನೂಲು ಹುಲಿಯುಗುರು ತಾಳಿಸರ
ಹಿಂಗದಲೆ ಪಚ್ಚೆ ಪದಕಾ
ಶೃಂಗಾರದರಳೆಲೆ ಶಿರದಿ ಜಾವಳ ಜಡೆ
ಇಂದು 2

ಮಕರ ಕಡಗೋಲ
ನೇಣನ್ನೆ ಕರದಲಿ ಪಿಡಿದು
ಉರ ಪಾಣಿಗಳು
ಬೆಣ್ಣೆ ಮೊಸರಿಲಿ ತೋದಿರೆ
ಚನ್ನನಾಸಾ ಮಣಿತೂಗೆ ಅದರ ಭಾಗ್ಯ
ಬಣ್ಣಿಪಲರಿದು ತಿಳಿದು
ಚಿನ್ಮಯ ವಿಜಯವಿಠ್ಠಲ ವಿಶ್ವರೂಪ ಪಾ
ಇಂದು 3
**********