Showing posts with label ಮಂಗಲಂ ಜಯ ಜಯ ಮಾಧವ ದೇವಗೆ ಅಂಗಜನಯ್ಯಪಾಂಡುರಂಗ lakshuminarayana. Show all posts
Showing posts with label ಮಂಗಲಂ ಜಯ ಜಯ ಮಾಧವ ದೇವಗೆ ಅಂಗಜನಯ್ಯಪಾಂಡುರಂಗ lakshuminarayana. Show all posts

Sunday, 5 September 2021

ಮಂಗಲಂ ಜಯ ಜಯ ಮಾಧವ ದೇವಗೆ ಅಂಗಜನಯ್ಯಪಾಂಡುರಂಗ ankita lakshuminarayana

ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ  ankita lakshuminarayana

ಮಂಗಲಂ ಜಯಜಯಮಾಧವದೇವಗೆಅಂಗಜನಯ್ಯಪಾಂಡುರಂಗ ವಿಠಲನಿಗೆ ಪ.


ಪುಂಡರೀಕವರಗೆ ಪೂರ್ಣಾತ್ಪೂರ್ಣಗೆಪಂಡರಿಪುರವರ ಪುಂಡರೀಕಾಕ್ಷಗೆ 1

ನಾಮದೇವಾದಿ ಸಂತಸ್ತೋಮ ಪರಿಣಾಮ ಶ್ರೀ-ರಾಮದಾಸನ ಪ್ರಿಯ ಶ್ರೀರಾಮಗೆ 2

ಏಕನಾಥನಾಲಯ ಚಾಕರನಾದವಗೆಗೋಕುಲಪಾಲಗೆ ಗೋಮಿನಿಲೋಲಗೆ 3

ಮಂದರಧಾರಗೆ ಮಥುರಾನಾಥಗೆಕಂದರ್ಪಶತಕೋಟಿ ಸುಂದರರೂಪಗೆ4

ರುಕುಮಿಣಿಕಾಂತಗೆ ರುಜುಗಣಾಧೀಶಗೆಭಕ್ತವತ್ಸಲನಿಗೆ ಲಕ್ಷುಮಿನಾರಾಯಣಗೆ 5

***

check by ಪಾವಂಜೆ ಶ್ರೀ ಲಕ್ಷ್ಮೀ ನಾರಾಯಣ ಆಚಾರ್ಯರು

ಚೆಕ್ ತುಪಾಕಿ ವೆಂಕಟರಮಣಾಚಾರ್ಯ