Showing posts with label ತೆರಳಿ ಬಾರಯ್ಯ ಭವ ಶರಧಿ ತಾರಕನೇ ನಾಕರವಾ ಮುಗಿವೆ mohana vittala. Show all posts
Showing posts with label ತೆರಳಿ ಬಾರಯ್ಯ ಭವ ಶರಧಿ ತಾರಕನೇ ನಾಕರವಾ ಮುಗಿವೆ mohana vittala. Show all posts

Sunday, 1 August 2021

ತೆರಳಿ ಬಾರಯ್ಯ ಭವ ಶರಧಿ ತಾರಕನೇ ನಾಕರವಾ ಮುಗಿವೆ ankita mohana vittala

 ..

ತೆರಳಿ ಬಾರಯ್ಯ ಭವ ಶರಧಿ ತಾರಕನೇ - ನಾಕರವಾ ಮುಗಿವೆ - ಎನ್ನ ಕರುಣದಲ್ಲಿ ನೋಡೋ ಪ


ಎರಡು ಭಾಗದಿ ಶ್ರೀ ಧರಣೇರಿಂದೊಪ್ಪುತತ್ವರಿತದಿ ದಯಮಾಡು ಉರಗಾಗಿರಿ ವೆಂಕಟ ಅ.ಪ.


ತೇರಿನೊಳಿಪ್ಪ ಶೃಂಗಾರ ಪುರುಷನೆ ಬಂ-ಗಾರ ಮಾಣಿಕದಲಂಕಾರವ ಧರಿಸಿದಮಾರಮಣನೆ ವನಜಾರಿವದನ ಬಲು-ಶೂರ ಸಮರಧೀರ ನಾರಾಯಣ ಕಂಸಾರೇ ||ನರ ಕಂಠೀರವ ಕಮಲನಾಭನಾರದ ಮುನಿ ಪ್ರಿಯ ಚಾರು-ಚರಿತ ಪನ್ನಗಾರಿಗಮನ ಮದ-ನಾರಿಯ ಸಲಹಿದ ಧೀರ ಮುರಾರಿ 1

ನಿಂದರೆ ಬಪ್ಪುದು ಸಿಂಧುಶಯನ ದಯ-ದಿಂದ ಎನ್ನನು ನೋಡು-ಕಣ್ದೆರೆದೀಕ್ಷಿಸಿ |ಕಂದಗೊಲಿದು ಕಂಬದಿಂದ ಬಂದಸುರನಕೊಂದು ಕರುಳಹಾರ ಕಂಧರದಿ ತಾಳಿದೇ ||ಮಂದಮತಿವನೆಂದಲೇ ಗೋ-ವಿಂದ ಗೋವಳ ವೃಂದದೊಡನೆ ಕಾ-ಳಿಂದಿಯ ಧುಮುಕಿ-ಫಣೀಂದ್ರನ ಶಿರದಲಿಧಿಂ ಧಿಮಿ ಧಿಮಿಕೆಂದು ಕುಣಿದ ಹರಿ 2

ಜಲದೊಳ ಪೊಕ್ಕು ಆ ಇಳೆಯ ತಸ್ಕರನು ದುಂ-ಬಲಗೊಂಡು ಮಡುಹಿ ನಂಬಿದ ಪ್ರಹ್ಲಾದ ಹಂ-ಬಲಿಸೆ ಧರ್ಮದಿ ಕಾಯ್ದೆ ಸಲೆ ಕ್ಷತ್ರಿಯಕುಲವನಳಿದೆ-ನಿನ್ನೊಳು ನೀನೇ ಕಾಯ್ದೆ ||ಮಲೆತ ಮಾವನ ಕೊಂದೆ ಸಲೆಖಳ ತ್ರಿಪುರನ ಗೆದ್ದು ಕಲಿಯ ಸಂಹರಿಸಿದೆಸುಲಭ ಮೂರುತಿ ಮೋಹನವಿಠ್ಠಲಚೆಲುವ ತಿರುವೇಂಗಳ 3

***