Showing posts with label ಗುರುವೆ ನಿಮ್ಮನು ನಾ ಮೊರೆಹೊಕ್ಕೆನಲ್ಲದೆ gopalakrishna vittala. Show all posts
Showing posts with label ಗುರುವೆ ನಿಮ್ಮನು ನಾ ಮೊರೆಹೊಕ್ಕೆನಲ್ಲದೆ gopalakrishna vittala. Show all posts

Sunday, 1 August 2021

ಗುರುವೆ ನಿಮ್ಮನು ನಾ ಮೊರೆಹೊಕ್ಕೆನಲ್ಲದೆ ankita gopalakrishna vittala

ಗುರುವೆ ನಿಮ್ಮನು ನಾ ಮೊರೆಹೊಕ್ಕೆನಲ್ಲದೆ

ಅರಿಯೆ ಅನ್ಯರನಿನ್ನು ಪೊರೆಯಿರೀಗ ಪ.


ಸಿರಿಯರಸನ ತೋರಿ ಗುರುವೆ ಕರುಣಿಸಿರಿ

ತರತಮ್ಯ ತಿಳಿಸುತ ಹರಿಸಿರಿ ಭವದುಃಖಅ.ಪ.

ಬಂದೆನು ಭವದೊಳು ನಿಂದೆನು ತಾಪದಿ

ಹಿಂದು ಮುಂದರಿಯದೆ ಕುಂದಿದೆನು

ಬಂದು ಕರುಣದಿ ಆನಂದವ ನೀಡುತ

ನಂದಕಂದನ ಲೀಲೆಯಿಂದ ರಕ್ಷಿಸಿದಿರಿ1

ಮುಸುಕಿದ ಅe್ಞÁನ ಹಸನಾಗಿ ತೊಲಗಿಸಿ

ಕುಶಲದ ಮತಿಯಿತ್ತು ಪಾಲಿಸುತ

ಬಿಸಜಾಕ್ಷನು ದಯ ಎಸೆವ ಕರುಣದಿಯಿತ್ತು

ಘಸಣೆಗೊಳಿಸದಲೆ ವಸುಮತಿಯೊಳು ಪೊರೆವ 2

ಕಷ್ಟವಪಡಲಾರೆ ಸೃಷ್ಟಿಯೊಳಗಿನ್ನು

ತಟ್ಟದೆ ಎನ್ನ ಮೊರೆ ಮನಸಿಗೀಗ

ಕೊಟ್ಟು ಅಭಯವನು ಘಟ್ಯಾಗಿ ಪೊರೆಯಿರಿ

ಕೆಟ್ಟ ಕಲ್ಮಷ ಕಳೆದು ಸೃಷ್ಟಿಗೊಡೆಯನ ತೋರಿ 3

ತಲ್ಲಣಿಸುತಿಹೆ ಕ್ಷುಲ್ಲ ದೇಹದಿ ಬಂದು

ಒಲ್ಲೆನು ಈ ದುಃಖಭವ

ಎಲ್ಲ ಮನಸು ನಿಮ್ಮ ಪಾದದಲಿರುವುದು

ತಲ್ಲಣಗೊಳಿಸದೆ ಪೊರೆಯಿರಿ ಗುರುದೇವ 4

ತಂದೆ ಮುದ್ದುಮೋಹನವಿಠ್ಠಲನೆಂಬೊ

ಇಂದಿರೇಶನ ಅಂಕಿತದಿ ಮೆರೆವೊ

ಸುಂದರ ಗೋಪಾಲಕೃಷ್ಣವಿಠ್ಠಲನ

ಎಂದೆಂದಿಗೂ ಮನಮಂದಿರದಲಿ ಕಾಂಬ 5

****