ನಿಂಬಿಯ ಬನಾದ ಮ್ಯಾಗಳ ಚಂದ್ರಮ ಚೆಂಡಾಡಿದ, ನಿಂಬಿಯ ||
ಎದ್ದೋನೆ ನಿಮಗ್ಯಾನ ಏಳುತಲೇ ನಿಮಗ್ಯಾನ
ಸಿದ್ಧರ ಗ್ಯಾನ ಶಿವುಗ್ಯಾನ ನಿಂಬಿಯ
ಸಿದ್ದರನೇ ಗ್ಯಾನ ಶಿವುಗ್ಯಾನ ಮಾಶಿವನೆ
ನಿದ್ರೆಗಣ್ಣಾಗೆ ನಿಮಗ್ಯಾನ, ನಿಂಬಿಯ
ಆರೇಲೆ ಮಾವಿನ ಬೇರಾಗೆ ಇರುವೋಳೆ
ವಾಲ್ಗದ ಸದ್ಧಿಗೆ ಒದಗೋಳೆ, ನಿಂಬಿಯ
ವಾಲ್ಗದ ಸದ್ಧಿಗೆ ಒದಗೋಳೆ ಸರಸತಿಯೆ
ನಮ್ ನಾಲಿಗೆ ತೊಡರ ಬಿಡಿಸವ್ವ, ನಿಂಬಿಯ
ಎಂಟೆಲೆ ಮಾವಿನ ದಂಟಾಗೆ ಇರುವೋಳೆ
ಗಂಟೆ ಸದ್ಧಿಗೆ ಒದಗೋಳೆ, ನಿಂಬಿಯ
ಗಂಟೆಯ ಸದ್ಧಿಗೆ ಒದಗೋಳೆ ಸರಸತಿಯೆ
ನಮ್ ಗಂಟಲ ತೊಡರ ಬಿಡಿಸಮ್ಮ, ನಿಂಬಿಯ
ರಾಗಿ ಬೀಸೋ ಕಲ್ಲೆ ರಾಜನ ಒಡಿಗಲ್ಲೆ
ರಾಯ ಅಣ್ಣಯ್ಯನ ಅರಮನೆ, ನಿಂಬಿಯ
ರಾಯ ಅಣ್ಣಯ್ಯನ ಅರಮನೆ ರಾಗಿಕಲ್ಲೆ
ನೀ ರಾಜಬೀದಿಗೆ ದಣಿ ದೊರೆ, ನಿಂಬಿಯ
ಕಲ್ಲವ್ವ ಮಾತಾಯಿ ಮೆಲ್ಲವ್ವ ರಾಗಿಯ
ಜಲ್ಲ ಜಲ್ಲನೆ ಉದುರವ್ವ, ನಿಂಬಿಯ
ಜಲ್ಲನೆ ಗಲ್ಲನೆ ಉದುರವ್ವ ನಾ ನಿನಗೆ
ಬೆಲ್ಲದಾರತಿಯ ಬೆಳಗೇನು, ನಿಂಬಿಯ
***
nimbiya banAda myAgaLa
chandrAma chanDADida, nimbiya ||
eddOne nimagyAna ELutalE nimagyAna
siddhara gyAna shivu gyAna nimbiya
siddharanE gyAna shivu gyAna mAshivane
nidregaNNAge nimadyAna, nimbiya
ArEle mAvina bErAge iruvOLe
vAlgada saddhige odagOLe, nimbiya
vAlgada saddhige odagOLe sarasatiye
nam nAlige toDara biDisavva, nimbiya
enTele mAvina ganTAge iruvOLe
ganTe saddhige odagOLe, nimbiya
ganTeya saddhige odagOLe sarasatiye
nam ganTAla toDara biDisamma, nimbiya
rAgi beesO kalle rAjana oDigalle
rAya aNNAyyana aramane, nimbiya
rAya aNNAyyana aramaneya rAgikalle
nee rAja beedige daNi dore, nimbiya
kallavva mAtAyi mellavva rAgiya
jalla jallane uduravva, nimbiya
jallane gallane uduravva naa ninage
belladAratiya beLagEnu, nimbiya
***