Showing posts with label ಬಾಣವದನ ಸಲಹೋ ನಾ ನಮಿಸುವೆ pranesha vittala. Show all posts
Showing posts with label ಬಾಣವದನ ಸಲಹೋ ನಾ ನಮಿಸುವೆ pranesha vittala. Show all posts

Thursday, 14 November 2019

ಬಾಣವದನ ಸಲಹೋ ನಾ ನಮಿಸುವೆ ankita pranesha vittala

by ಪ್ರಾಣೇಶದಾಸರು
ಬಾಣವದನ ಸಲಹೋ - ನಾ ನಮಿಸುವೆ |ಬಾಣವರದ ನಿನಗೆ | ಹರ ಹರ ಪ

ಕುಧ್ರೇಡ್ಜ ಮುಖ ಕಂದ-ರವಿಅಘ|ಅದ್ರಿಸಮೂಹ ಋಷಿಜಾ | ಹರಹರ ||ನಿದ್ರರಹಿತ ವಿಧಿಜಾ ಸತತ ಅ- |ಭದ್ರ ಭಕ್ತರಿಗೆ ಕುಜ 1

ಗಜಋಷಿ ಅಂಬಕನೆಪಶುಪತಿ|ತ್ರಿಜಗದಿ ಪೂಜಿತನೆ | ಹರಹರ ||ಅಜಿನಾಂಬರ ಧರನೇ ಕರುಣಿಸೊ |ವಿಜಯೇಕ್ಷಣ ಶಿವನೆ | ಹರಹರ 2

ಕಾಮಾದಿ ಮುಖ ಜನಕ ಧೂರ್ಜಟ |ಭೂಮಿಜವೈರಿಸಖಾ | ಹರಹರ ||ಸಾಮಜರಿಪುಧನಿಕ ಮಿತ್ರನೆ |ಕಾಮಿತ ಫಲದಾಯಕ | ಹರಹರ 3

ಧರಣಿಜೆ ರಮಣ ನಾಮಾ ಸರ್ವದಾ |ಸ್ಮರಿಸುವೆನತಪ್ರೇಮಾ || ಹರಹರ ||ಗರಳನಾಶನ ಭೀಮವಿಕ್ರಮ|ಸರೋಜ ಧ್ವಜ ವಿರಾಮ | ಹರಹರ 4

ಘನನಿಭ ಪ್ರಾಣೇಶ ವಿಠ್ಠಲ |ನನುಗನೆನಿಪುದನಿಶ | ಹರಹರ ||ಘನಮಹಿಮನೆ ಈಶಕುಧರ| ಸ-ದನನಾಕಜಪೋಷ | ಹರಹರ 5
*********