" ಶ್ರೀಮನ್ಮೂಲರಘುಪತಿ ಸ್ತೋತ್ರ - ( ಬಾಲ ಭಾಷೆಯಲ್ಲಿ ) "....
ರಚನೆ : ಆಚಾರ್ಯ ನಾಗರಾಜು ಹಾವೇರಿ
ಮುದ್ರಿಕೆ : ವೇಂಕಟನಾಥ
ಮೂಲಪ್ರಕೃತಿ ರಮಣ
ರಾಘವೇಂದ್ರ ಪ್ರಿಯ ಮೂಲರಾಮಾ ।
ಮೂಲೇಶನ ಸುಬು-
ಧೇಂದ್ರ ಪೂಜಿತ ಮೂರ್ಲೋಕ ಧೊರೆಯೇ ।। ಪಲ್ಲವಿ ।।
ಆದಿ ಮೂಲ ಆದಿ ವೈದ್ಯ
ಆದಿ ದೈವ ನಾರಾಯಣ ।
ಆದಿ ನಾರಾಯಣ
ಪಾಲಿಸಯ್ಯಾ ।। ಚರಣ ।।
ಆನಂದ ಮುನಿ
ವರದ ನಾರಸಿಂಹಾ ।
ಆನಂದ ಹೃದಯ ವಿಹಾರಿ
ದಿಗ್ವಿಜಯರಾಮಾ ।। ಚರಣ ।।
ಸೋಮ ಸನ್ನಿಭ ಸಖನೇ ।
ಸೋಮಸೂರ್ಯನಯನಾ ।
ಸೋಮ ಸೋದರಿ ವಲ್ಲಭ ।
ಸೋಮಹಾಸನೆ
ಜಯರಾಮಾ ।। ಚರಣ ।।
ಹಂಸಪರಮ ಜ್ಞಾನವ
ಕೊಡೋ ಕೃಷ್ಣಯ್ಯಾ ।
ಹಂಸರೊಂದಿತ
ಹಂಸಲೋಚನ
ವಾಸುದೇವಾ ।। ಚರಣ ।।
ಹಂಸವಾಹನ ಪಿತನೆ
ಹಂಸಮೂರುತಿ ವೇದವ್ಯಾಸ ।
ಹಂಸ ಸಂಕುಲ ಪ್ರಿಯನೇ
ವೇಂಕಟನಾಥ ।। ಚರಣ ।।
*****
ವಿವರಣೆ :
" ಮೂಲ ಪ್ರಕೃತಿ ರಮಣ "
ಸೂಕ್ಷ್ಮ ರೂಪದ ಶ್ರೀ ಮಹಾಲಕ್ಷ್ಮೀದೇವಿಯರು
ಮೂಲೇಶ = ಹೃದಯ ಕಮಲ ನಾಳಸ್ಥ ಶ್ರೀಮನ್ನಾರಾಯಣ
ಆದಿ ಮೂಲ = ಅನಾದಿ
ಆದಿ ವೈದ್ಯ = ಶ್ರೀ ಧನ್ವಂತರೀ
" ಸೋಮ ಸನ್ನಿಭ ಸಖನೇ "
ಶಿವನನ್ನು ಶಿರದಲ್ಲಿ ಧರಿಸಿದ ಶ್ರೀ ಮಹಾರುದ್ರದೇವರ ಸಖನು
" ಸೋಮ ಸೂರ್ಯ ನಯನ "
ಚಂದ್ರ ಸೂರ್ಯರನ್ನು ಕಣ್ಣುಗಳನ್ನಾಗಿವುಳ್ಳ ಶ್ರೀ ಹರಿ
" ಸೋಮ ಸೋದರಿ "
ಚಂದ್ರ ಸಹೋದರಿ ಶ್ರೀ ಮಹಾಲಕ್ಷ್ಮೀದೇವಿಯರು
ಹಂಸಪರಮ = ಜೀವಾತ್ಮ, ಪರಮಾತ್ಮ
" ಹಂಸರೊಂದಿತ "
ಜ್ಞಾನಿಗಳಿಂದ ವಂದಿತನಾದ ಶ್ರೀಮನ್ನಾರಾಯಣ
" ಹಂಸಲೋಚನ "
ಸೂರ್ಯ ಚಂದ್ರರನ್ನು ಕಣ್ಣುಗಳಾಗಿ ಉಳ್ಳವನು - ಶ್ರೀ ಹರಿ
ಹಂಸವಾಹನ = ಶ್ರೀ ಚತುರ್ಮುಖ ಬ್ರಹ್ಮದೇವರು
ಹಂಸಮೂರುತಿ = ಬಿಂಬರೂಪಿ ಪರಮಾತ್ಮ
ಹಂಸ ಸಂಕುಲ = ಯತಿಗಳ ಸಮೂಹ
ಗುರು ವಿಜಯ ಪ್ರತಿಷ್ಠಾನ
*****