ನೀ ದಯ ಮಾಳ್ಪನು ನಿರ್ದಯನಾದರೆ ಯಾರಿಗೆ ಮೊರೆಯಿಡಲಿ ||ಪ||
ಧೀರನು ನೀನು ಉದಾರನು ನೀನು
ತಾರಕ ಪರಬ್ರಹ್ಮ ||
ಬಾರಿ ಬಾರಿಗೂ ನಿನ್ನ ಕೋರಿ ಭಜಿಸುವೆನು |
ಪಾರುಗಾಣಿಸೋ ಅಪಾರ ಮಹಿಮ ದೊರೆ ||೧||
ಎನ್ನನುದ್ಧರಿಸುವ ಘನ್ನ ಮಹಿಮನು ಪ್ರ-
ಸನ್ನ ವದನ ನೀನೇ |
ನಿನ್ನ ಚಿತ್ತದಲಿನ್ನು ತೋರದಿದ್ದರೆ ಸರಿ |
ಎನ್ನ ದೌರ್ಭಾಗ್ಯವಿದು ಪನ್ನಂಗ ಶಯನನೇ ||೨||
ಪಂಕಜನಯನ ಮೀನಾಂಕ ಜನಕ
ಓಂಕಾರ ಮೂರ್ತಿ ನೀನೇ |
ಕಿಂಕರರಿಗೆ ಬಂದ ಸಂಕಟ ಕಳೆಯೈ |
ಶಂಕರ ವಿನುತ ಶ್ರೀ ವೇಂಕಟ ವಿಠಲ ||೩||
***
nI daya mALpanu nirdayanAdare yArige moreyiDali ||pa||
dhIranu nInu udAranu nInu
tAraka parabrahma ||
bAri bArigU ninna kOri Bajisuvenu |
pArugANisO apAra mahima dore ||1||
ennanuddharisuva Ganna mahimanu pra-
sanna vadana nInE |
ninna cittadalinnu tOradiddare sari |
enna daurBAgyavidu pannaMga SayananE ||2||
paMkajanayana mInAMka janaka
OMkAra mUrti nInE |
kiMkararige baMda saMkaTa kaLeyai |
SaMkara vinuta SrI vEMkaTa viThala ||3||
***