Showing posts with label ಏನಾಯಿತೀ ಜನಕೆ ಮೌನವದು ಕವಿದಂತೆ purandara vittala ENAAYITEE JANAKE MAUNAVADU KAVIDANTE. Show all posts
Showing posts with label ಏನಾಯಿತೀ ಜನಕೆ ಮೌನವದು ಕವಿದಂತೆ purandara vittala ENAAYITEE JANAKE MAUNAVADU KAVIDANTE. Show all posts

Wednesday 8 December 2021

ಏನಾಯಿತೀ ಜನಕೆ ಮೌನವದು ಕವಿದಂತೆ purandara vittala ENAAYITEE JANAKE MAUNAVADU KAVIDANTE



ಪುರಂದರದಾಸರು
ಏನಾಯಿತೀ ಜನಕೆ ಮೌನವದು ಕವಿದಂತೆ |
ಮಾನುಷ್ಯರಾಗಿ ಮರೆತರು ಹರಿಯನು ಪ.

ನಾಲಗೆಗೆ ಮುರಿಯಿತೆ ನೆಗ್ಗಿಲ ಕೊನೆಮುಳ್ಳು |ಬಾಲತನದಲಿ ಭೂತ ಹೊಡೆಯಿತೆ - ಕೆಳಗು - |ಮೇಲಿನ ತುಟಿ ಎರಡು ಒಂದಾಯಿತೇ -ಅವರ - |ಕಾಲಮೃತ್ಯು ಬಂದು ಕಂಗೆಡಿಸಿತೆ ? 1

ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೆ |ಕಟಗರಿಸಿ ನಾಲಗೆ ಕಡಿದು ಹೋಯಿತೆ ? ||ಹಟ ಹಿಡಿದ ಹೊಲೆಮನಸುಹರಿ ಎನ್ನಲಾರದೆ |ಕುಟಿಲ ಚಂಚಲ ಬುಧ್ಧಿ ಕಂಗೆಡಿಸಿತೆ ? 2

ಹರಿಯೆಂದರವರ ಶಿರ ಹರಿದು ಬೀಳುವುದೆ |ಪರಬ್ರಹ್ಮ ಪಣೆಯಲ್ಲಿ ಬರೆದಿಲ್ಲವೆ ||ಸಿರಿದೇವಿಗೊಲಿದ ಶ್ರೀ ಪುರಂದರವಿಠಲನ |ಸ್ಮರಿಸಿದರೆ ಸಿಡಿಲೆರಗಿ ಸುಟ್ಟು ಕೊಲ್ಲುವುದೆ ? 3
***

pallavi

EnAyitO I janake maunavanu hiDidu maretaru hariya

caraNam 1

nAlige muridito neggina kone muLLu bAlakatanadali bhUta hiDiyido
mEle kaugina tuTi eraDu ondAyito kAla mrtyuvu bandu gangeDisido

caraNam 2

ghaTa sarpa kacci viSa ghanavAgi EritO kaTakarisi nAlige kaDidhOyitO
haTadalli hariyannu neneyade iruvantha kuTila cancala manasu kUDi bAdhisito

caraNam 3

hariyendarivara shira haridu tA bILuvude harinAma haNeyalli baredillave
varada purandara viTTalarAyanna smarisidare siDileragi kolluvude
***

ರಾಗ ಬಿಲಹರಿ. ಅಟ ತಾಳ (raga, taala may differ in audio)

ಏನಾಯಿತೋ ಈ ಜನಕೆ
ಮೌನವನು ಹಿಡಿದು ಮರೆತರು ಹರಿಯ ||ಪ||

ನಾಲಿಗೆ ಮುರಿದಿತೊ ನೆಗ್ಗಿಲ ಕೊನೆಮುಳ್ಳು
ಬಾಲಕತನದಲಿ ಭೂತ ಹಿಡಿಯಿತೊ
ಮೇಲೆ ಕೆಳಗಿನ ತುಟಿ ಎರಡು ಒಂದಾಯಿತೊ
ಕಾಲ ಮೃತ್ಯುವು ಬಂದು ಕಂಗೆಡಿಸಿತೊ ||

ಘಟಸರ್ಪ ಕಚ್ಚಿ ವಿಷ ಘನವಾಗಿ ಏರಿತೋ
ಕಟಕರಿಸಿ ನಾಲಿಗೆ ಕಡಿದ್ಹೋಯಿತೋ
ಹಟದಲ್ಲಿ ಹರಿಯನ್ನು ನೆನೆಯದೆ ಇರುವಂಥ
ಕುಟಿಲ ಚಂಚಲ ಮನಸು ಕೂಡಿ ಬಾಧಿಸಿತೊ ||

ಹರಿಯೆಂದರಿವರ ಶಿರ ಹರಿದು ತಾ ಬೀಳುವುದೆ
ಹರಿನಾಮ ಹಣೆಯಲ್ಲಿ ಬರೆದಿಲ್ಲವೆ
ವರದ ಪುರಂದರವಿಠಲರಾಯನ್ನ
ಸ್ಮರಿಸಿದರೆ ಸಿಡಿಲೆರಗಿ ಕೊಲ್ಲುವುದೆ ||
*********