Showing posts with label ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಸೊ vijaya vittala suladi ಸುಳಾದಿ. Show all posts
Showing posts with label ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಸೊ vijaya vittala suladi ಸುಳಾದಿ. Show all posts

Monday, 9 December 2019

ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಸೊ vijaya vittala suladi ಸುಳಾದಿ

vijaya dasa sulaadi ವಿಜಯದಾಸರ ಸುಳಾದಿ
by shamasundara dasa

ಧ್ರುವತಾಳ
ನಿಷ್ಟೆಯಿಂದಲಿ ಮನ | ಮುಟ್ಟಿ ಭಜಿಸೊ ವಿಜಯ ||
ವಿಠಲದಾಸರ ಮನವೆ ನಿತ್ಯ ||
ಎಷ್ಟು ಹೇಳಲಿ ಇವರ ಉತ್ಕøಷ್ಟ ಮಹಿಮೆ ಕೃಪಾ |
ದೃಷ್ಟಿಯಿಂದಲಿ ನೋಡಿದಾಕ್ಷಣದಿ ||
ಭ್ರಷ್ಟ ಮನಸಿಲಿಂದ | ಬಿಟ್ಟು ಧರ್ಮಾಚರಣೆ
ಧೃಷ್ಟ ಕೃತ್ಯವಗೈದು ದೋಷದಿಂದ |
ತಪ್ಪಿದ ದುರಿತೌಷ | ಮೊಟ್ಟೆಗಳೆಲ್ಲವು |
ಸುಟ್ಟು ಭಸ್ಮೀ ಭೂತವಾದ ಬಳಿಕ
ಪುಟ್ಟ ಸುಜ್ಞಾನ ಭಕ್ತಿ ವೈರಾಗ್ಯ ಭರಿತರಾಗಿ
ಮೆಟ್ಟುವರೋ ಕೈವಲ್ಯ ಪಥವಾ ||
ಸೃಷ್ಟಿ ಸಂಹಾರಕರ್ತರಿದ್ದಲ್ಲಿ ಪೋಗಿ |
ಸಿಟ್ಟಿನಿಂದಲಿ ಕೊಟ್ಟು ಶಾಪವನ್ನು
ಥಟ್ಟನೆ ವೈಕುಂಟ ಪಟ್ಟಣಕ್ಕೆ ತೆರಳಿ
ಪಟ್ಟದರಸಿಯಾದ ಲಕುಮಿ ಸಹಿತಾ
ಸೃಷ್ಟ್ಯಾಂಡ ಭಾರ ಶಿರದಿ ಇಟ್ಟಂಥಾ ಫಣಿ ಪತಿಯಾ
ಪಟ್ಟಿ ಪರ್ಯಂಕದಲ್ಲಿ ಪವಡಿಸಿಪ್ಪಾ
ಧಿಟ್ಟ ಮೂರುತಿ ಶಾಮಸುಂದರವಿಠಲಗೆ
ಪೆಟ್ಟು ಹಾಕಿದ ಪರಮ ಘಟ್ಟಿಗರಿವರು ||1||

ಮಟ್ಟತಾಳ
ಎರಡನೆಯುಗದಲ್ಲಿ ಸುರಲೀಲನು ಎಂಬ
ತರುಚರ ರೂಪದಲಿ ತರು\ಣಿಕುಲೋದ್ಭವನಾ
ಚರಣವ ಸೇವಿಸಿ ಕರುಣ ಸಂಪಾದಿಸಿದಾ
ಮರಳಿ ನಿಕಂಪಾ ನಾಮದಲಿ | ದ್ವಾ
ಪರದಲಿ ಪುಟ್ಟ ಯಾದವನೆನಿಸಿದಾ
ಅರುಹಲೇನು ಮತ್ತೆ ಚರಣಜಕುಲದಲ್ಲಿ
ಧರಿಸುತ ಜನ್ಮವನು ಕರುಣಾಕರ
ಶಾಮಸುಂದರನಂಘ್ರಿಗೆ ಶರಧನುವಿಗೆ ಹೂಡಿ
ಗುರಿ ನೋಡಿ ಎಸೆದಾ ||2||

ತ್ರಿವಿಡತಾಳ
ಪುನಃ ಕಲಿಯುಗದಲ್ಲಿ ಅನುಪಮ ಸನ್ಮಹಿಮ
ಅನಿಮಿಷನಾಥಾಖ್ಯ ದಾಸಾರ್ಯರಾ
ಮನೆಯಲ್ಲಿ ಗೋವತ್ಸನೆನಿಸಿ ವಾಸಿಸಿ ಹರಿಯಾ
ಗುಣನಾಮಕೀರ್ತನೆ ಶ್ರವಣಗೈದಾ
ಘÀನಪುಣ್ಯದಿಂ ಪಶುತನವು ಪೋಗಾಡುತ್ತ
ತನಯರಾಗಿ ಅವರ ಬಳಿಯಲಿದ್ದು
ಮುನಿಮಧ್ವಪತಿ ಎಂಬೊ ಪೆಸರಿನಿಂದಲಿ ಸದಾ
ಮಿನುಗುವರೊಡಗೂಡಿ ಕವನದಿಂದಾ
ಅನನುತ ಶ್ರೀ ಶಾಮಸುಂದರವಿಠಲನ್ನ
ಮನದಿ ಕೊಂಡಾಡುತ್ತ ಅನುಗ್ರಹ ಪಡೆದರೂ ||3||

ಅಟ್ಟತಾಳ
ಕ್ಷಿತಿಯೊಳು ಮಾನವಿ ಸೀಮಗೆ ಸೇರಿದ
ಕ್ಷಿತಿಧರ ದೇವನೆ ಸುತೆಯ ಸುತೀರದಿ
ಕ್ಷಿತಿರುಹವರ ನರಹರಿ ಸಾನ್ನಿಧ್ಯದಿ
ಅತಿ ಪುಣ್ಯಕರ ಪುಟ್ಟ ಬದರಿ ಸುಕ್ಷೇತ್ರದಿ
ಸತಿ ಶಿರೋಮಣಿಯಾದ ಕೂಸಮ್ಮನುದರದಿ
ಸುತನಾಗಿ ಪ್ರತಿದಿನ ಶಶಿಯಂತೆ ಬೆಳೆಯುತ್ತ
ಅತಿಶಯ ದಾರಿದ್ತ್ಯ ವ್ಯಥೆಯು ಆವರಿಸಲು
ಖತಿ ಲೇಶವಾಗದೆ ಸಹಿಸುತ್ತ ಶಾಂತದಿ
ಮತಿಯಿಂದ ಮನದೊಳು ಯೋಚಿಸಿ ಮುಂದಣ
ಗತಿಗಾಗಿ ತಾ ಪೋಗಿ ವಾರಣಾಶಿಯಲ್ಲಿ
ಪತಿತರುದ್ಧರಿಸುವ ಸುರನದಿಯಲಿ ಮಿಂದು
ಶಿತಮನದವರಾಗಿ ಇರುತಿರಲೊಂದಿನ
ಸ್ತುತಿಸುತ್ತ ಹರಿಪಾದ ಮಲಗಿರೆ ಸ್ವಪ್ನದಿ
ಶತಧೃತಿನಂದನ ಕರೆದೊಯ್ದಾಚೆಗೆ ಇಪ್ಪ
ಕ್ರತುಭುಜ ತತಿಯಿಂದ ಸುತನಾದ ಶ್ರೀ ಶುಕ
ಪಿತನಂಘ್ರಿ ಕಮಲಕ್ಕೆ ನುತಿಸಿ ಬಿನ್ನೈಸಿದಾ
ಹಿತದಿ ಸಹೋದರ ಇವನ ರಕ್ಷಿಸೆನೆ
ಶೃತಿಗೆ ಸಮ್ಮತ ಮಧ್ವಮತದ ರಹಸ್ಯದ
ಕೃತಿಗಳ ರಚಿಸಿ ಪ್ರಾಕೃತ ಸುಭಾಷೆಯಲ್ಲಿ
ಸತತ ಶ್ರವಣದಿಂದಾ ಮತಿಮಂದ ಜನರು ಉ
ಧೃತರಾಗುವಂದದಿ ಕಥಿಸುತಗರೆದ ಸಂ
ಕೀರ್ತನವನು ಕೃಪೆಯಿಂದಾ ಯತಿಗಳ ಮನೋಹರ
ಕೃತಿದೇವಿ ಪತಿ ಶಾಮಸುಂದರವಿಠಲಾ ||4||

ಆದಿತಾಳ
ಮೌನಿ ಸನ್ಮೌನಿ ಸುe್ಞÁನಿವರ್ಯರಾದ ಇವರ ಅ
ಮಾನುಷ ಕೃತಿಗಳು ಭಾನುವಿನ ಕಿರಣದಂತೆ
ಕ್ಷೋಣಿಯೊಳು ತುಂಬಿರಲು ಹೀನಮತಿ
ಮನುಜನಾದ ನಾನೆಂತು ಪೇಳ್ವೆನೈಯಾ
ನೀನೇವೆ ಗತಿಯೆಂದು ಮೊರೆಹೊಕ್ಕ ದೀನರಿಗೆ
ಸಾನುರಾಗದಿ ಒಲಿದು ಪ್ರಾಣವನ್ನು
ಜ್ಞಾನ ವನ್ನು ದಾನವನ್ನು ಮಾಡಿದರು
ವೇಣುಧೇನುಪಾಲ ತುರಗಾನನ ಮೋಹನ
ಜಾಣ ಜಗನ್ನಾಥಧಾಸ ಶ್ರೇಣಿಯ ಸಾಕ್ಷಿಕೇಳು
ಈ ನುಡಿ ನಿಜವೆಂದು ಮಾನಸದೊಳಗನುಮಾನವಿಲ್ಲದೆ ಸದಾ
ಮಾಣದೆ ಇವರ ಪದ ಧ್ಯಾನಿಪರಿಗೆ ಪವ
ಮಾನ ಜನಕ ಶಾಮಸುಂದರವಿಠಲನು
ಪಾಣಿ ಪಿಡಿದು ಪರಿಪಾಲಿಸುವ ಸತತಾ||5||

ಜೊತೆ
ಚಿಪ್ಪಶೈಲದೊಳಿಪ್ಪಾ ಅಪ್ಪನ್ನ ಭಜಿಪರಾ
ತಪ್ಪು ಮನ್ನಿಸಿ ಕಾಯ್ವ ಶಾಮಸುಂದರವಿಠಲಾ||6||

*********