ಶ್ರೀ ಗುರುರಾಮವಿಠಲ ದಾಸರ ರಚನೆ
ಹಸೆಗೆ ಬಾರಯ್ಯ ಹದಿನಾಲ್ಕು ಲೋಕದೊಡೆಯ ಪ
ಕುಸುಮಾಸ್ತ್ರನೈಯ್ಯ ಕೋರಿ ಪ್ರಾರ್ಥಿಪೆ ಜೀಯಾ ಅ.ಪ
ಪಕ್ಷಿಗಮನ ದುಷ್ಟ ರಾಕ್ಷಾಸಾಂತಕ ನೀನು-
ಪೇಕ್ಷೆಮಾಡದೆ ನಿರಪೇಕ್ಷ ಸೌಖ್ಯವೀಯಲು
1
ಪದುಮೆಯೊಡನೆ ಹೃದಯಪದುಮ ಪೀಠದಿ ಕುಳಿತು
ಸದಮಲ ಜ್ಞಾನ ವದಗಿಸುವದಕೀಗ
2
ಪ್ರೇಮಾದಿ ಸುಜನರಿಗೆ ಕಾಮಿತ ಫಲವೀವ
ಸ್ವಾಮಿ ನೀನೆ ಶ್ರೀಗುರುರಾಮ ವಿಠಲ ವಲಿದು
3
***