Thursday, 10 June 2021

ಹಸೆಗೆ ಬಾರಯ್ಯ ಹದಿನಾಲ್ಕು ಲೋಕದೊಡೆಯ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ 


ಹಸೆಗೆ ಬಾರಯ್ಯ ಹದಿನಾಲ್ಕು ಲೋಕದೊಡೆಯ  


ಕುಸುಮಾಸ್ತ್ರನೈಯ್ಯ ಕೋರಿ ಪ್ರಾರ್ಥಿಪೆ ಜೀಯಾ  ಅ.ಪ


ಪಕ್ಷಿಗಮನ ದುಷ್ಟ ರಾಕ್ಷಾಸಾಂತಕ ನೀನು-

ಪೇಕ್ಷೆಮಾಡದೆ ನಿರಪೇಕ್ಷ ಸೌಖ್ಯವೀಯಲು 

1

ಪದುಮೆಯೊಡನೆ ಹೃದಯಪದುಮ ಪೀಠದಿ ಕುಳಿತು

ಸದಮಲ ಜ್ಞಾನ ವದಗಿಸುವದಕೀಗ 

2

ಪ್ರೇಮಾದಿ ಸುಜನರಿಗೆ ಕಾಮಿತ ಫಲವೀವ

ಸ್ವಾಮಿ ನೀನೆ ಶ್ರೀಗುರುರಾಮ ವಿಠಲ ವಲಿದು 

3

***


No comments:

Post a Comment