..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಪ್ರಣವನಾರಾಯಣ ಕೃಷ್ಣ ಆಗಮನ ಸ್ತೋತ್ರ
ಬಾರೋ ಬಂದಿರೋ ಶ್ರೀಶ | ಶ್ರೀಧರಾ ಸಮೇತ ಬಂದಿರೋ ಈಶ ||
ವಿಭುವೇ ಗುಣಾರ್ಣವ ಅಮಿತ ಪೌರುಷ ಸ್ವವಶ | ಅಮಿತಾರ್ಕ ಕಾಶ ||
ಸರಸಿಜಾಸನ ಶಿವ ವಿಷಾದಿ ಅಮರವಂದ್ಯನೆ
ಪರಮ ಭಾಗವತೇಷ್ಟ ಚಿಂತಾಮಣಿಯೇ ಜಯ ಜಯ
ಶರಣು ಪಾಲಿಪ ಪ್ರಭುವೇ ನಾರಾಯಣನೇ ಕೃಷ್ಣನೇ || ಬಾರೋ|| ಪ
ಪ್ರಣವಾಷ್ಠಾಕ್ಷರ ದಿವ್ಯ | ಆರು ಅಕ್ಷರ ಮಂತ್ರ ಸುಪ್ರತಿಪಾದ್ಯ
ವಿಶ್ವಾದಿ ಎಂಟು ರೂಪಚಿನ್ಮಯ ಕಾಯ |
ಅರಿದರಧೃತ ಹಸ್ತ ಹಸ್ತವರದ ಅಭಯ | ಜಯ ಜಯತು ಜೀಯ
ಶ್ರೀಧರಾ ಸಮೇತನಾಗಿಹ ಪ್ರೋದ್ಯ ಪೂಷ ಸ್ವಕಾಂತಿ ತೇಜನೇ
ಕೃದ್ಧವೀರ ಮಹಾದ್ಯುಸಹಸ್ರ ಉಲ್ಕ ನಿಜ ಸಚ್ಛಕ್ತ ಲೀಲೆಯಿಂ
ಸರ್ವದಾ ಸರ್ವತ್ರ ಸರ್ವರೋಳ್ ಇದ್ದು ನಿಯಮಿಪ ವಿಭುವೇ ಪರತರ|
ಕೃಷ್ಣರಾಮ ನೃಸಿಂಹ ವರಹನೇ ವಿಷ್ಣುವೇ ಪರಂಜ್ಯೋತಿ ಪರಂಬ್ರಹ್ಮ |
ವಾಸುದೇವನೆ ಏಕದಶ ಶತಾನಂತ ರೂಪ ನಿರ್ದೋಷ ಗುಣನಿಧೇ |
ಎನ್ನ ಪಾಲಿಪ ಪ್ರಭುವೇ ಶ್ರೀಶನೇ ವೇದಹನುಮ
ಶಿವಾದಿ ವಂದ್ಯನೇ || ಬಾರೋ 1
ಪ್ರಚುರ ಅಮಿತ ಆನಂದ ಅವಿಕಾರ ಚಿನ್ಮಯ ಸರ್ವಚೇಷ್ಟಕ ಕರ್ತ
ಚೇತನಾಚರ ಸರ್ವವಶಿ ಜಗದ್ಭರ್ತಾ ಸೌಂದರ್ಯಸಾರನೆ
ಇಂದ್ರಮಣಿ ದ್ಯುತಿವಂತ ಸೌಭಾಗ್ಯದಾತ |
ಚಕ್ರಧರವರ ಅಭಯಹಸ್ತನೇ ಅಜಿತ ಅಜ ಜಗದೇಕವಂದ್ಯನೆ
ಉರುದಯಾನಿಧೆ ಭೈಷ್ಮೀ ಸತ್ಯಾರೊಡನೆ ಬಂದು ನಿಂತಿದ್ದಿಲ್ಲಿ
ಪರಮಲಾಭವು ಎನಗೆ ಸುಹೃದನೆ ಭೀಮದ್ರೌಪದಿ ಪಾಂಡವ ಪ್ರಿಯ
ವಿದುರಗೊಲಿದನೆ ದೇವಕೀಸುತ ಸರ್ವಾಭೀಷ್ಟಪ್ರದ ಉದಾರನೆ
ಉತ್ತರಾಸುಧಾಮ ಉದ್ಧವ ಗೋಪಿಜನ ಅಕ್ರೂರ ವರದನೇ
ಹಲಧರಾನುಜ ಸುಭದ್ರೆ ಅಣ್ಣ ಷಣ್ಮಹಿಷಿ
ರಮಣನೆ ಶರಣು ಸಂತತ || ಬಾರೋ 2
ಸ್ವಾಮಿವೇಂಕಟರಮಣ | ಕುಲದೇವ ಸರ್ವೋತ್ತಮನೆ ಭಕ್ತಪ್ರಸನ್ನ
ಪದ್ಮಾವತೀಶ ಕರುಣಿ ಪಾಲಿಸೋ ಎನ್ನ | ಶ್ರೀವತ್ಸ ಅರಿದರಾ
ಅಭಯವರಕರ ಘನ್ನ | ಅಮಲೇಂದು ವದನಂ ||
ಮುಗುಳುನಗೆ ಕಾರುಣ್ಯ ನೋಟವು ಜಗವನಳೆದ ತೀರ್ಥಪದಯುಗ
ತಿರುಮಲೇಶ ಮದ್ಗೇಹನಿಲಯನೆ ರಂಗ ವರದ | ಲಕ್ಷ್ಮೀನೃಸಿಂಹನೆ
ಪೂರ್ಣ ಪ್ರಮತಿಗಳಿಂದ ಪೂಜಿತ ಬೆಣ್ಣೆ ನರ್ತನ ಕೃಷ್ಣರಾಮನೇ
ಇನನಿಗಮಿತ ಸ್ವಕಾಂತಿ ತೇಜನೇ ಕರ್ಣಕುಂಡಲೋಜ್ವಲ ಕಿರೀಟಿಯೆ |
ಅನ್ನವಾಹನ ತಾತ ಪ್ರಸನ್ನ ಶ್ರೀನಿವಾಸನೆ ಪೂರ್ಣಕಾಮನೇ |
ಘನ ದಯಾಂಬುಧೇ ದೇವ ದೇವಶಿಖಾಮಣಿಯೆ ಬಾ ||
ಬಾರೋ ಬಂದಿರೋ ಶ್ರೀಶ|| 3
***