RAO COLLECTIONS SONGS refer remember refresh render DEVARANAMA
ankita ಶ್ರೀಕರವಿಠಲ
ರಾಗ: ಬಿಲಾವಲ್ ತಾಳ: ಕೇರವ
ಬಾರೊ ಗುರುರಾಜ ಸುರಭೂಜ ಪ
ಸಂತತ ನಿನ್ನನು ಚಿಂತಿಪರಿಗೆ ಬಹು
ಚಿಂತೆ ಕಳೆವ ಪ್ರಭೊ ಮಂತ್ರಮಂದಿರದಿಂದ 1
ಕರೆದಲ್ಲಿಗೆ ಬರುವ ಘನ್ನ ಬಿರುದು ಕೇಳಿದೆ ನಿನ್ನ
ಕರುಣಾಕರ ತವಚರಣವ ನಂಬಿದೆ 2
ಶ್ರೀಕರವಿಠಲನೆ ತಾ ಖರೆ ಪರನೆಂದು
ಲೋಕದೊಳ್ ಸಾರಿದ ಹೇ ಕರುಣಾಕರ 3
***