Showing posts with label ಶರಣು ಹೊಕ್ಕೆನು ಕಾಯೆ ಶ್ರೀ ತುಳಸಿ ತಾಯೆ kadarundalagihanumaiah. Show all posts
Showing posts with label ಶರಣು ಹೊಕ್ಕೆನು ಕಾಯೆ ಶ್ರೀ ತುಳಸಿ ತಾಯೆ kadarundalagihanumaiah. Show all posts

Tuesday, 3 August 2021

ಶರಣು ಹೊಕ್ಕೆನು ಕಾಯೆ ಶ್ರೀ ತುಳಸಿ ತಾಯೆ ankita kadarundalagihanumaiah

 ..

ಶರಣು ಹೊಕ್ಕೆನು ಕಾಯೆ ಶ್ರೀ ತುಳಸಿ ತಾಯೆ

ನಾರಾಯಣನ ಪ್ರೀಯೇ

ತರಣಿಕೋಟಿ ದಿವ್ಯ ಪ್ರಕಾಶ

ಹರಿಚರಣಕಮಲಕಾಭರಣಿಯೆನಿಪಳೆ ಪ


ಉದಧಿಯೊಳುದಿಸಿದಮೃತವ

ಮುದದಿಂದಲಿ ಶ್ರೀಧರನು ನೋಡಿ ಸ್ವೀಕಾರವನು ಮಾಡಿ ಆ-

ನಂದಲಾನಂದ ಬಾಷ್ಪಗಳು ಉದುರಲಕ್ಷಿಯೊಳು

ಉದುಭವಿಸಿದೆಯೆ ನೀನು ಪದುಮಮುಖಿಯೆ ನಿಮ್ಮ

ಅದುಭುತ ಮಹಿಮೆಯು ಪದ ಕವಿಗಳಿಗೆಲ್ಲ ಪೊಗಳಲಸಾಧ್ಯ 1


ನಿಮ್ಮ ಮೂಲ ಮಧ್ಯಾಗ್ರದಲಿ ಬ್ರಹ್ಮಾದಿ ಸುರರು

ಸುಮ್ಮನದಿಂದ ಒಲಿದಿಹರು

ಒಮ್ಮನದಿಂದ ಸ್ತುತಿಸಲು ಶುಭಗುಣವಂತೆ

ಧರ್ಮಾರ್ಥ ಕಾಮ ಮೋಕ್ಷಗಳ ಗಮ್ಮನೆ ಕೊಡುವ

ನಮ್ಮಮ್ಮಗೊಲಿದು ನಿನ್ನಮ್ಮಿದವರಿಗಾಧರ್ಮದ ನಿಧನೆ (?) 2


ನಿಷ್ಠೀಲಿ ನಿಮ್ಮ ಭಜಿಸುವ ಭಕುತರಿಗೆ ಬಂದ

ಕಷ್ಟವ ಕಳೆದು ಕೈವಿಡಿದು

ದುಷ್ಟ ಸಂಗವನೆ ಬಿಡಿಸಿ ಇಹಪರದಲ್ಲಿ ವಿಷ್ಣುಭಕ್ತರಿವರೆಂದೆನಿಸಿ

ಶ್ರೇಷ್ಟ ಕದುರುಂಡಲಗಿ ಹನುಮಯ್ಯನೊಡೆಯನು ಶ್ರೀ-

ಕೃಷ್ಣನ ಲೋಕದಿ ಸಂತುಷ್ಟಬಡಿಸುವಾ 3

****