.
ಹಿರಿಯ ಅತ್ತಿಗೆಯರ ಗರವು ಕಂಡೆವೆಮೇರುಗಿರಿಗಿಂತ ಕೋಟಿ ಅಧಿಕವೆ ಸಖಿಯೆನಾ ಹ್ಯಾಂಗೆಸುಮ್ಮನಿರಲಿ ಪ.
ಓಡಿ ಬಂದವಳು ಒಳಗೆ ಸೇರಿಮಾತಾಡಳು ನೋಡಳು ನಮ್ಮ ಅಣ್ಣನ ಮಡದಿಯುನೋಡಳು ನಮ್ಮ ಅಣ್ಣನು ಮಡದಿಗೆಮಾಡಿದ ಮೋಹ ತಲೆಗೇರಿ1
ಹೆಣ್ಣು ರುಕ್ಮಿಣಿ ತಮ್ಮ ಅಣ್ಣನವಂಚಿಸಿಓಡಿ ಬಂದು ಕಣ್ಣಿಲೆನೋಡಿ ಕರೆಯಳುಕಣ್ಣಿಲೆ ನೋಡಿ ಕರೆಯಳು ಇವಳು ನಮ್ಮಅಣ್ಣನ ಬಲವ ಹಿಡಕೊಂಡು2
ಮಂದಗಮನೆಯರ ವಾರ್ತೆ ಇಂದು ರುಕ್ಮಿಣಿ ತಿಳಿದು ಬಂದಳು ಭಾಳೆ ವಿನಯದಿಬಂದಳು ಭಾಳೆ ವಿನಯದಿ ದ್ರೌಪತಿಯಆಲಿಂಗನವÀ ಮಾಡಿ ಕರೆದಳು 3
ಬಾರವ್ವ ಸುಭದ್ರೆ ಏರವ್ವ ಸೋಪಾನ ತೋರವ್ವ ನಿನ್ನ ವಚನವತೋರವ್ವ ನಿನ್ನ ವಚನವ ಎನುತಲಿ ದ್ವಾರದಿ ಕೈಯ್ಯ ಹಿಡಕೊಂಡು4
ಬಂದ ಬೀಗಿತ್ತಿಯರು ಚಂದದಿಂದ ಇದುರುಗೊಂಡು ಮಂದಹಾಸದಲೆ ನುಡಿಸುತಮಂದ ಹಾಸದಲೆ ನುಡಿಸುತ ರುಕ್ಮಿಣಿ ಬಂದವರು ಯಾರು ಮನೆಯೊಳು 5
ಸೊಂಡಿಲನಗರದ ಪಾಂಡು ಭೂಪನ ಸೊಸೆಗಂಡುಗಲಿ ಪಾರ್ಥನ ಆರ್ಧಾಂಗಿಗಂಡುಗಲಿ ಪಾರ್ಥನ ಆರ್ಧಾಂಗಿ ಸುಭದ್ರಾಮುಯ್ಯವ ಕೈಕೊಂಡು ಬ್ಯಾಗ ತಿರುಗಿಸು 6
ಹರದಿ ರುಕ್ಮಿಣಿ ದೇವಿ ಸೆರಗ ಹಿಡಿದು ದ್ರೌಪದಿಯದೊರೆಗಳ ಹೆಸರು ನಮಗ್ಹೇಳೆ ದೊರೆಗಳ ಹೆಸರು ನಮಗ್ಹೇಳೆ ರಾಮೇಶನ ಪರಮಭಕ್ತರಿಗೆ ನುಡಿದಳು 7
****