..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ಗುರುಸ್ತುತಿ
ಗುರುಗಳ ಕರುಣವಿದು
ಇರುಳು ಹಗಲು ಹರಿಸ್ಮರಣೆಯೊಳಿರುವದು ಪ
ಕಲಿಯುಗ ಒದಗಿತಲ್ಲ | ವಿಷಯದಿ
ಚಲಿಸಿತು ಮನವೆಲ್ಲ
ಇಳೆಯೊಳು ಹಿರಿಯರಿಲ್ಲ
ನೆರೆಜನ ಖಳರು ಸಜ್ಜನರಲ್ಲ 1
ವೇದ ಓದುಗಳಿಲ್ಲ ಸುಮ್ಮನೆ
ಕಾದಿ ಕಳೆವರು ಕಂಡ್ಹಾಗೆ
ಮೋದತೀರ್ಥರ ಮತ ಇದರೊಳು
ಓದಿ ಪೇಳುವರಿಲ್ಲ 2
ಮೋಸ ಪೋಗದ ಹಾಗೆ ಹರಿಪದ
ದಾಸ್ಯವ ಬಿಡದಾಗೆ
ವಾಸುದೇವವಿಠಲನ್ನೆ ಕರುಣದಿ
ವಾಸರ ಕಳೆಯುವನೋ | ನಮ್ಮ 3
***