Showing posts with label ಶ್ರೀರಘುಪ್ರೇಮ ಗುರುವರ್ಯರ ಪದ ankita lakumeesha SRI RAGHUPREMA GURUVARYARA PADA RAGHUPREMA TEERTHA STUTIH. Show all posts
Showing posts with label ಶ್ರೀರಘುಪ್ರೇಮ ಗುರುವರ್ಯರ ಪದ ankita lakumeesha SRI RAGHUPREMA GURUVARYARA PADA RAGHUPREMA TEERTHA STUTIH. Show all posts

Monday, 6 September 2021

ಶ್ರೀರಘುಪ್ರೇಮ ಗುರುವರ್ಯರ ಪದ ankita lakumeesha SRI RAGHUPREMA GURUVARYARA PADA RAGHUPREMA TEERTHA STUTIH



ಶ್ರೀ ರಘುಪ್ರೇಮತೀರ್ಥರ ಸ್ಮರಣೆ bidi sanyasi sripadaraja mutt
ಶ್ರೀ ಲಕುಮೀಶಾಂಕಿತ ಶ್ರೀ ಕುರಡಿ ರಾಘವೇಂದ್ರಾಚಾರ್ಯರು 


ಶ್ರೀ ರಘುಪ್ರೇಮ ಗುರುವರ್ಯರ ಪದ ।
ವಾರಿಜಗಳ ಭಜಿಸೋ ಸಂತತ ಸುಖಿಸೋ ।। ಪಲ್ಲವಿ ।।

ಆರರ ಬಾಧೆಗಳ್ದೂರೋಡಿಸಿ ಬಲು ।
ಘೋರ ದುರಿತಗಳ್ತರಿವಾ ಸುಖ ಈತ ಗರೆವಾ ।। ಅ ಪ ।।

ರಾಯಚೂಟಿಲಿ ಜನಿಸಿ ತ್ವರಿತದಿ ।
ತಾಯಿಹೀನ ನೆನಿಸಿ ।
ಮಾಯಗಾತಿ ಸಾಕು ತಾಯಿಯು ಗೋಳಿಡೆ ।।
ಕಾಯ ಕ್ಲೇಶ ಪಟ್ಟಾ ಹರಿ ಮೊರೆಯಿಟ್ಟಾ ।। ಚರಣ ।।

ವೆಂಕಟೇಶನೊರದಿ ಜನ್ಮತಾಳಿ ।
ವೆಂಕಟ ನಾಮದೀ ।
ಸಂಕಟ ನಾನಾ ಕಂಟಕದಲಿ । ವೈ ।
ಕುಂಠನ ಕೃಪೆ ಪಡೆದಾ ವ್ರತಧಾರಿಯಾದ ।। ಚರಣ ।।

ಸಕಲ ಕ್ಷೇತ್ರ ಚರಿಸೀ ತೀರ್ಥಾದೀ ।
ಬಕವೈರಿ ಶಾಸ್ತ್ರ ಗ್ರಹಿಸೀ ।
ಮುಕುತಿಯ ಶಾಶ್ವತ ಸುಖಕೇ ಸೇವಿಸೇ ।
ಅಖಿಲ ಜೀವೇಶನೊಲಿದಾ ಹಂಪೆಲಿ ನಲಿದಾ ।। ಚರಣ ।।

ಹತ್ತಿಬೆಳೆಗಲ್ಗೆ ಬಂದೂ ಅರಳೀಕಟ್ಟೀ ।
ಉತ್ತಮಾರ್ಯರಲಿ ನಿಂದೂ ।
ಭಕ್ತಿಲಿ ಇವರ ನಿತ್ಯವೂ ಸೇವಿಸೇ ।
ನಿತ್ಯ ತೃಪ್ತನೊಲಿದಾ ಯದುಗಿರಿಗೆ ಬಂದಾ ।। ಚರಣ ।।

ತೋಷದಿ ಪತ್ನಿಯ ಕೂಡೀ ಸಂತತ ।
ಭಾಸುರ ವ್ರತ ನೇಮ ಮಾಡಿ ।
ಭಾಸುರರಿಗೆ ದಿವ್ಯ ವಾಸಕೆ ಗೃಹ ವಸ್ತು ।
ರಾಶಿ ಸರ್ವಸ್ವ ನೀಡ್ದಾ ಹರಿಕೃಪೆ ಪಡೆದಾ ।। ಚರಣ ।।

ಆದವಾನಿಯಲ್ಲಿ ಸೀತಾರಾಮರ ।
ಮೋದದಿ ಸ್ಥಾಪಿಸಿಲ್ಲೀ ।
ಸಾಧುವರ್ಯ ರಘುದಾಂತತೀರ್ಥರಿಂದಾ ।
ಅದಕರೋದ್ಭವನೀತಾ ಮಳಖೇಡದೀತಾ ।। ಚರಣ ।।

ಸಕಲ ಸುಖವ ಗರೆವಾ ಇವರನು ನಂಬಲು ।
ಲಕುಮೀಶನೇ ಒಲಿವಾ ।
ಮುಕುತಿಯ ಪಥ ತೋರಿ ವಿಕಸಿತ ಮನವಿತ್ತು ।
ಯುಕುತಿ ಧ್ಯಾನವೀವ ಭಕುತರ ಪೊರೆವಾ ।। ಚರಣ ।।
****

ರಾಗ : ಹಂಸಾನಂದಿ ತಾಳ : ಆದಿ - raga in audio may differ