Showing posts with label ಗುರುವಿಜಯವಿಠಲ ನಿನ್ನ ಚರಣಯುಗಳಿಗೆ gopala vittala GURU VIJAYA VITTALA NINNA CHARANAYUGALIGE VIJAYADASA STUTIH. Show all posts
Showing posts with label ಗುರುವಿಜಯವಿಠಲ ನಿನ್ನ ಚರಣಯುಗಳಿಗೆ gopala vittala GURU VIJAYA VITTALA NINNA CHARANAYUGALIGE VIJAYADASA STUTIH. Show all posts

Thursday 4 November 2021

ಗುರು ವಿಜಯವಿಠಲ ನಿನ್ನ ಚರಣಯುಗಳಿಗೆ ankita gopala vittala GURU VIJAYA VITTALA NINNA CHARANAYUGALIGE VIJAYADASA STUTIH

 ರಾಗ ಕಾಂಬೋಧಿ  ತಿಶ್ರನಡೆ 
Audio by Vidwan Sumukh Moudgalya


ಶ್ರೀ ಗೋಪಾಲದಾಸಾರ್ಯ ವಿರಚಿತ 

 ಶ್ರೀ ವಿಜಯರಾಯರ ಮಹಿಮಾ ಸ್ತೋತ್ರ - ಐತಿಹಾಸಿಕ 


ಗುರುವಿಜಯವಿಠಲ ನಿನ್ನ ಚರಣ ಯುಗಳಿಗೆ 
ಎರಗಿ ನಮೋನಮೋ ಎಂದೆನೋ
ಹರುಷದಲಿ ನೀ ನಮ್ಮ ಗುರು ವಿಜಯದಾಸರನು 
ಕರುಣಿಸಿ ತಂದು ತೋರೋ ಬಾರೋ॥ಪ॥

ಹಿಂದೆ ನೀನವರ ಪುರಂದರದಾಸರ
ಮಂದಿರದಲ್ಲಿ ಸೃಜಿಸಿ
ಛಂದ ಛಂದದ ಪರತತ್ವ ಕವನಗಳನ್ನು
ಕುಂದುಯಿಲ್ಲದಲೆನುಡಿಸಿ
ಸಂದರುಶನವಿತ್ತು ಸಲಹಿ ಆಗಾಮಿಯನು
ಮಂದ ಸಂಚಿತವನಳಿಸಿ
ನಿಂದ ಪ್ರಾರಬ್ಧ ಉಣ ತಂದಿಟ್ಟು ಈ ಧರಿಗೆ
ಮಂದಜನರನ್ನು ಪೊರಿಯೋ ಪಿರಿಯೋ॥೧॥

ಆರು ಮೂರೆರಡೊಂದು ಜನರು ಇವರಿಂದ
ಉದ್ಧಾರಗತಿಯನು ಚಿಂತಿಸಿ
ಮೂರು ಜನ್ಮಗಳಲ್ಲಿ ಬಿಡದೆ ಮೂಲವು ಕೆಡದೆ
ಸೇರಿ ಮತ್ತಿವರ ಬಳಿಯಾ
ಶ್ರೀರಮಣ ನಿನ್ನ ವಿಚಾರವನು ಮಾಡುತಾ
ಸಾರಿ ಸಾರಿ ವರವ ಪಡೆದು
ಕಾರಣರು ನಮಗಿವರು ಕರ್ಮ ಮೂಲವ ಕೆಡಿಸಿ
ನಾರಾಯಣ ನಿನ್ನ ಪರನೆಂದು ತೋರಿದ॥೨॥

ನೀನು ನಡೆಯಲು ನಡೆದು ನೀನು ನುಡಿಯಲು ನುಡಿದು
ನೀನು ಪಿಡಿಯಲು ಪಿಡಿದು
ನೀನು ಮಾಡಿಸೆ ಮಾಡಿ ನೀನು ನೋಡಿಸೆ ನೋಡಿ
ನೀನು ಕುಡಿಸಲು ಕುಡಿವೆನೋ
ಏನೇನು ಪರಿಪರಿಯಾ ಮಾಡಿದ ಕರ್ಮ ಶ್ರೀನಾಥ
ನಿನಗರ್ಪಿಸಿ ನಾನಾ ಪರಿಯಲಿ
ನಮ್ಮನ್ನ ಕೂಡಿ ಕೊಂಡಿನ್ನು ಜ್ಞಾನ ಬೋಧಿಸಿ
ನಿನ್ನ ಧ್ಯಾನದೋಳಿಪ್ಪಂಥ॥೩॥

ನಿನ್ನಂತ ಸೃಷ್ಟ್ಯಾದಿ ಅಷ್ಟ ಕರ್ತೃತ್ವಗಳು
ಚನ್ನಾಗಿ ಮನದಿತಿಳಿದು
ನಿನ್ನ ವ್ಯಾಪ್ತತ್ವವನು ಇನ್ನು ಹುಡುಕುತ ತಮ್ಮ
ಮನ್ನ ಬಂದಂತೆ ನಡೆದು
ಪುಣ್ಯ ಪಾಪಂಗಳಿಗೆ ಹಿಗ್ಗಿ ಕುಗ್ಗದೆ ನೋಡಿ
ನಿನ್ನ ಪ್ರೀತಿಯೆಂದರಿದು
ಸನ್ಮತಿಯಿಂದ ಸಕಲ ಸಜ್ಜನರ ಸಮ್ಮತಿಸಿ
ನಿನ್ನ ತುತಿಸುತ ಮೆರೆದ ಘನ್ನ ದಯಾನಿಧಿಯೆ॥೪॥

ಆವದಿನ ನೀನವರ ಸೇವೆ ದೊರಕಿಸಿ ಎನಗೆ
ಸಾವಸದಲ್ಲಿಯಿತ್ತು
ಕಾವು ಘನವಾಗಿ ಪ್ರತಿಕ್ಷಣಕೆ ಸ್ಮರಣೆಗೆ ಅನು
ಭವಕೆ ತಂದು ಕೊಳುತಾ
ಜೀವಿಸುತ ನಮ್ಮನಾ ಪೊರದು ರಕ್ಷಿಸಿ ಬಿಡದೆ
ಪಾವನದ ದಾರಿತೋರಿ
ಈ ವಿಧದಲಿ ನಿನ್ನಯಿರವ ತೋರುತ ಜಗದಿ
ಧೀರರನು ಮಾಡಿ ನೀ ಅಲ್ಲಿ ಪೂಜೆಯಗೊಂಬ॥೫॥

ಎಂದಿನಂತದಿ ನಿನ್ನ ಯೋಚಿಸುತ ಬಪ್ಪರೊಳು
ಇಂದು ಎನಗೊಂದು ಪರಿಯೂ
ಸಂದೇಹವನು ತೋರಲಾಗಿ ಮನದೊಳು ಎನಗೆ
ನಿಂದಿರದು ಏಕ ಸ್ಥಳದಿ
ನೊಂದ ದಣುವಿಕೆಯನು ನೀನು ಬಲ್ಲಿಯೋ,ಮನಕೆ
ತಂದು ಅನುಭವಕೆ ತೋರು
ಛಂದ ತೊರದು ಅವರ ಬಿಡಿಸಿ ಎನ್ನಿಡುವದು
ನಂದ ನಂದನ್ನ ಕಂದ ಮುಕುಂದ॥೬॥

ಎಲ್ಲಿ ನೀನುಂಟು ಮತ್ತಲ್ಲಿ ಅವರುಂಟೆಂಬ
ದೆಲ್ಲ ಬಲ್ಲರು ಸರಿಯೇ
ಅಲ್ಲಿದ್ದು ನೀನು ನಮಗಿನ್ನು ತಿಳಿಸುವ ಕರ್ಮ
ಇಲ್ಲಿ ಈಗಾಗರಿಯದು
ಎಲ್ಲ ಸಕಲವು ಕರ್ಮ ಅಲ್ಲಿ ವಪ್ಪಿಸಿದೆವೈ
ಬಲ್ಲದ್ದು ಮಾಡು ಧೊರಿಯೇ
ಎಲ್ಲ ನಾಮಕ ನೀನೆ ಗೋಪಾಲವಿಠ್ಠಲ 
ಅಲ್ಲಲ್ಲಿ ಯೇನಯ್ಯ ಎಲ್ಲ ಭಕುತರೊಡಿಯ॥೫॥
***

Guru vijayavithala ninna caranayugalige
Eragi namo namo emdeno harushadali ni namma
Guru vijayadasarana karunisi tamdu toru baro || pa ||

Hinde ninivara purandaradasara mandiradali srujisi
Cenda cendada paratatva kavanagalannu
Kunduyilladale nudisi sandarusanavittu salahi agamiyanu
Mandasancitavanalisi ninda prarabdha una
Tandittu I dharege mandajanaranna poriyo pariya || 1 ||

Arumureradondu janaru ivarinda u-
Ddhara gatiyanu cimtisi muru janmagalali
Bidade mulava kedade seri mattivara baliya
Sriramana ninna vicaravanu maduta
Sarisari varavapididu karanaru namagi
Varu karmamulava kedisi narayanane ninna paranendu toruva || 2 ||

Ninu nadeyalu nadedu ninu nudiyalu nudidu
Ninu pidiyalu pididu ninu madise madi
Ninu nodise nodi ninu kudisalu kudiye
Ninu paripari Enu madida karma srinatha
Ninagarpisi nanapariyali nammannu kudikondinnu
J~jana bodhisi ninna dhyanadolippantha || 3 ||

Ninna srushtiyadi ashtakatartvagalu cennagi
Manadi tilidu ninna vaptatvavanu
Innu hudukuta tamma manabandante nadedu
Punya papangalige higgikuggade nodi
Ninna pritidendaridu sanmatiyinda sakala sa-
Jjanara sammati ninna tutisuta mereva Ganna dayanidhiya || 4 ||

Avadina ninivara seve dorakisi enage savasadalli ittu
Kavu ganavagi pratikshanake smaranege anu-
Bavake tandukoluta jivisuta nammana poredu rakshisi bidade
Pavanada daritori I vidhadali ninna i-
Rava toruta jagadi dhirarana madi ni alli pujyanemba || 5 ||

Endinamtadi ninna yocisuta bapparolu indu ena
Gondu pariya samdehavanu toralagi
Manadali enage nimdiradu ekasthaladi
Nonda danivikeyeno ninu balleyo manake
Tamdu anubavake tori cendatoradu avara
Bidisi enniduvudu nandanandannakamda mukunda || 6||

Elli ninuntu mattalli avaruntembudella
Ballaru sariye alliddu ninu namaginnu
Tilisuva karma illi igagariyadu
Elli sakalavu karma alle oppisiddeve
Balliddu mado doreye ella namakanu nine gopalavithala
Allalli Enayya ella bakutarodeya || 7 ||
***

ಗುರು ವಿಜಯವಿಠಲ ನಿನ್ನ ಚರಣಯುಗಳಿಗೆ
ಎರಗಿ ನಮೋ ನಮೋ ಎಂದೆನೊ ಹರುಷದಲಿ ನೀ ನಮ್ಮ
ಗುರು ವಿಜಯದಾಸರನ ಕರುಣಿಸಿ ತಂದು ತೋರು ಬಾರೊ || ಪ ||

ಹಿಂದೆ ನೀನಿವರ ಪುರಂದರದಾಸರ ಮಂದಿರದಲಿ ಸೃಜಿಸಿ
ಚೆಂದ ಚೆಂದದ ಪರತತ್ವ ಕವನಗಳನ್ನು
ಕುಂದುಯಿಲ್ಲದಲೆ ನುಡಿಸಿ ಸಂದರುಶನವಿತ್ತು ಸಲಹಿ ಆಗಾಮಿಯನು
ಮಂದಸಂಚಿತವನಳಿಸಿ ನಿಂದ ಪ್ರಾರಬ್ಧ ಉಣ
ತಂದಿಟ್ಟು ಈ ಧರೆಗೆ ಮಂದಜನರನ್ನ ಪೊರಿಯೊ ಪರಿಯ || 1 ||

ಆರುಮೂರೆರಡೊಂದು ಜನರು ಇವರಿಂದ ಉ-
ದ್ಧಾರ ಗತಿಯನು ಚಿಂತಿಸಿ ಮೂರು ಜನ್ಮಗಳಲಿ
ಬಿಡದೆ ಮೂಲವ ಕೆಡದೆ ಸೇರಿ ಮತ್ತಿವರ ಬಳಿಯ
ಶ್ರೀರಮಣ ನಿನ್ನ ವಿಚಾರವನು ಮಾಡುತ
ಸಾರಿಸಾರಿ ವರವಪಿಡಿದು ಕಾರಣರು ನಮಗಿ
ವರು ಕರ್ಮಮೂಲವ ಕೆಡಿಸಿ ನಾರಾಯಣನೆ ನಿನ್ನ ಪರನೆಂದು ತೋರುವ || 2 ||

ನೀನು ನಡೆಯಲು ನಡೆದು ನೀನು ನುಡಿಯಲು ನುಡಿದು
ನೀನು ಪಿಡಿಯಲು ಪಿಡಿದು ನೀನು ಮಾಡಿಸೆ ಮಾಡಿ
ನೀನು ನೋಡಿಸೆ ನೋಡಿ ನೀನು ಕೂಡಿಸಲು ಕೂಡಿಯೆ
ನೀನು ಪರಿಪರಿ ಏನು ಮಾಡಿದ ಕರ್ಮ ಶ್ರೀನಾಥ
ನಿನಗರ್ಪಿಸಿ ನಾನಾಪರಿಯಲಿ ನಮ್ಮನ್ನು ಕೂಡಿಕೊಂಡಿನ್ನು
ಜ್ಞಾನ ಬೋಧಿಸಿ ನಿನ್ನ ಧ್ಯಾನದೊಳಿಪ್ಪಂಥ || 3 ||

ನಿನ್ನ ಸೃಷ್ಟಿಯಾದಿ ಅಷ್ಟಕತರ್ೃತ್ವಗಳು ಚೆನ್ನಾಗಿ
ಮನದಿ ತಿಳಿದು ನಿನ್ನ ವಾಪ್ತತ್ವವನು
ಇನ್ನು ಹುಡುಕುತ ತಮ್ಮ ಮನಬಂದಂತೆ ನಡೆದು
ಪುಣ್ಯ ಪಾಪಂಗಳಿಗೆ ಹಿಗ್ಗಿಕುಗ್ಗದೆ ನೋಡಿ
ನಿನ್ನ ಪ್ರೀತಿದೆಂದರಿದು ಸನ್ಮತಿಯಿಂದ ಸಕಲ ಸ-
ಜ್ಜನರ ಸಮ್ಮತಿ ನಿನ್ನ ತುತಿಸುತ ಮೆರೆವ ಘನ್ನ ದಯಾನಿಧಿಯ || 4 ||

ಆವದಿನ ನೀನಿವರ ಸೇವೆ ದೊರಕಿಸಿ ಎನಗೆ ಸಾವಾಸದಲ್ಲಿ ಇತ್ತು
ಕಾವು ಘನವಾಗಿ ಪ್ರತಿಕ್ಷಣಕೆ ಸ್ಮರಣೆಗೆ ಅನು-
ಭವಕೆ ತಂದುಕೊಳುತ ಜೀವಿಸುತ ನಮ್ಮನ ಪೊರೆದು ರಕ್ಷಿಸಿ ಬಿಡದೆ
ಪಾವನದ ದಾರಿತೋರಿ ಈ ವಿಧದಲಿ ನಿನ್ನ ಇ-
ರವ ತೋರುತ ಜಗದಿ ಧೀರರನ ಮಾಡಿ ನೀ ಅಲ್ಲಿ ಪೂಜ್ಯನೆಂಬಾ || 5 ||

ಎಂದಿನಂತಾಡಿ ನಿನ್ನ ಯೋಚಿಸುತ ಬಪ್ಪರೊಳು ಇಂದು ಎನ
ಗೊಂದು ಪರಿಯ ಸಂದೇಹವನು ತೋರಲಾಗಿ
ಮನದಲಿ ಎನಗೆ ನಿಂದಿರದು ಏಕಸ್ಥಳದಿ
ನೊಂದ ದಣಿವಿಕೆಯೇನೊ ನೀನು ಬಲ್ಲೆಯೊ ಮನಕೆ
ತಂದು ಅನುಭವಕೆ ತೋರಿ ಚೆಂದತೋರದು ಅವರ
ಬಿಡಿಸಿ ಎನ್ನಿಡುವುದು ನಂದನಂದನ್ನಕಂದ ಮುಕುಂದ || 6||

ಎಲ್ಲಿ ನೀನುಂಟು ಮತ್ತಲ್ಲಿ ಆವರುಂಟೆಂಬುದೆಲ್ಲ
ಬಲ್ಲರು ಸರಿಯೆ ಅಲ್ಲಿದ್ದು ನೀನು ನಮಗಿನ್ನು
ತಿಳಿಸುವ ಕರ್ಮ ಇಲ್ಲಿ ಈಗಾಗರಿಯದು
ಎಲ್ಲಿ ಸಕಲವು ಕರ್ಮ ಅಲ್ಲೆ ಒಪ್ಪಿಸಿದ್ದೇವೆ
ಬಲ್ಲಿದ್ದು ಮಾಡೊ ದೊರೆಯೆ ಎಲ್ಲ ನಾಮಕನು ನೀನೆ ಗೋಪಾಲವಿಠಲ
ಅಲ್ಲಲ್ಲಿ ಏನಯ್ಯ ಎಲ್ಲ ಭಕುತರೊಡೆಯ || 7 ||

****