Showing posts with label ಭಕುತರಪರಾಧವ ಬಗೆಯನೀ ದೇವಭಕುತರು ತಪ್ಪಿದರೆ ಬಲು ಭಯವೀವ hayavadana. Show all posts
Showing posts with label ಭಕುತರಪರಾಧವ ಬಗೆಯನೀ ದೇವಭಕುತರು ತಪ್ಪಿದರೆ ಬಲು ಭಯವೀವ hayavadana. Show all posts

Wednesday, 1 September 2021

ಭಕುತರಪರಾಧವ ಬಗೆಯನೀ ದೇವಭಕುತರು ತಪ್ಪಿದರೆ ಬಲು ಭಯವೀವ ankita hayavadana

 ..


ಭಜನಾ ಮಂಡಳಿಯವರಿಂದ


ಭಕುತರಪರಾಧವ ಬಗೆಯನೀ ದೇವ l

ಭಕುತರು ತಪ್ಪಿದರೆ ಬಲು ಭಯವೀವ ll ಪ ll


ಇಟ್ಟುಣಿಸಿದ ಬಲಿ ಕಟ್ಟಿದ ಯಶೋದೆಗೆ l

ಇಷ್ಟಾರ್ಥಗಳನಂದು ಕೊಟ್ಟು ಕಾಯನೆ l

ದುಷ್ಟತನದಿ ಧೃತರಾಷ್ಟ್ರತನಯ ತನ್ನ l

ಕಟ್ಟಲು ಹವಣಿಸೆ ಕಷ್ಟವನುಣಿಸನೆ ll 1 ll


ಕಾಲಲಿ ತನ್ನ ಅಂಗವನೊದ್ದ ಮುನಿಪನ l

ಮೂಲೋಕವರಿಯೆ ಮುದ್ದಿಸಿ ಮೆರೆಯನೆ l

ತಾಳದೆ ನೃಪತಿಯ ತಾನೆಂದು ತಿಳಿಯಲು l

ಕಾಲಯವನ ಬಂದು ಕಾಳು ಮಾಡಿಸನೆ ll 2 ll


ಪರವಶಚಿತ್ತನಾಗಿ ಫಲುಗುಣ ಜರೆಯಲು l

ಹರಿ ದೂರಾಗದೆ ಹರಣವ ಕಾಯನೆ l

ಅರಸೆಂಬ ಗರ್ವದಿಂದ ಅರಿಭಟ ಪೌಂಡ್ರಕನ l

ಧುರಕೆ ಗುರಿಯ ಮಾಡಿ ಧುರದಿ ಕೊಲಿಸನೆ ll 3 ll


ಶರಕೆ ಗುರಿಯ ಮಾಡಿ ಸಮರದೊಳೊಡ್ಡಿದ l

ಸುರವ್ರತಗಂದು ಶುಭವನೀಯನೆ l

ಹರನ ಮೆಚ್ಚಿಸಿ ತನ್ನ ಗೆಲುವ ಬಿಲ್ಲ ಬೇಡಿದ l

ಶರೀರಸಂಬಂಧಿಯ ಕೊಲ್ಲಿಸನೆ ll 4 ll


ಮಕುಟವ ಕದ್ದೊಯ್ಯಲು ಮಹಾಬಲಿಯ ಬಾಗಿಲ l

ಆಕಳಂಕನಂದು ಕಾವುದ ಬಿಟ್ಟನೆ l

ಈ ಕೃಷ್ಣ ಹಯವದನನಿಂದುಡುಪಿನ ಜನಕೆ l

ಶೋಕವಿತ್ತ ಕಳ್ಳನಿಗೆ ಶೂಲಗತಿಯೀಯನೆ ll 5 ll

***


ಭಕುತರಪರಾಧವ ಬಗೆಯನೀ ದೇವಭಕುತರು ತಪ್ಪಿದರೆ ಬಲು ಭಯವೀವ ಪ .


ಇಟ್ಟುಣಿಸಿದ ಬಲಿ ಕಟ್ಟಿದ ಯಶೋದೆಗೆಇಷ್ಟಾರ್ಥಗಳನಂದು ಕೊಟ್ಟು ಕಾಯನೆದುಷ್ಟತನದಿ ಧೃತರಾಷ್ಟ್ರತನಯ ತನ್ನಕಟ್ಟಲು ಹವಣಿಸೆ ಕಷ್ಟವನುಣಿಸನೆ 1


ಕಾಲಲಿ ತನ್ನ ಅಂಗವನೊದ್ದ ಮುನಿಪನಮೂಲೋಕವರಿಯೆ ಮುದ್ದಿಸಿ ಮೆರೆಯನೆತಾಳದೆ ನೃಪತಿಯ ತಾನೆಂದು ತಿಳಿಯನುಕಾಲಯವನ ಬಂದು ಕಾಳು ಮಾಡಿಸನೆ 2


ಪರವಶಚಿತ್ತನಾಗಿಫಲುಗುಣ ಜರೆಯಲುಹರಿ ದೂರಾಗದೆ ಹರಣವ ಕಾಯನೆಅರಸೆಂಬ ಗರ್ವದಿಂದ ಅರಿಭಟ ಪೌಂಡ್ರಕನಧುರಕೆ ಗುರಿಯ ಮಾಡಿ ಧುರದಿ ಕೊಲಿಸನೆ3


ಶರಕೆ ಗುರಿಯ ಮಾಡಿ ಸಮರದೊಳೊಡ್ಡಿದಸುರವ್ರತÀಗಂದು ಶುಭವನೀಯನೆಹರನ ಮೆಚ್ಚಿಸಿ ತನ್ನ ಗೆಲುವ ಬಿಲ್ಲ ಬೇಡಿದಶರೀರ ಸಂಬಂಧಿಯ ಕೊಲಿಸನೆ 4


ಮಕುಟವ ಕದ್ದೊಯ್ಯಲು ಮಹಾಬಲಿಯ ಬಾಗಿಲಅಕಳಂಕನಂದು ಕಾವುದ ಬಿಟ್ಟನೆಈ ಕೃಷ್ಣ ಹಯವದನನಿಂದುಡುಪಿನ ಜನಕೆಶೋಕವಿತ್ತ ಕಳ್ಳನಿಗೆ ಶೂಲಗತಿಯೀಯನೆ5

***