ರಾಗ : ಕಲ್ಯಾಣಿ ತಾಳ : ಆದಿ
ಶ್ರೀಪಾದರಾಜರ ದಿವ್ಯ
ಶ್ರೀಪಾದವ ಭಜಿಸುವೆ ।। ಪಲ್ಲವಿ ।।
ವಾಗ್ವಜ್ರಗಳಿಂದ ಮಾಯಾ-
ವಾದಿಗಳೆಲ್ಲರ ಬಾಯ ।
ಬೀಗವನಿಕ್ಕಿ ಮುದ್ರಿಸಿದ
ಬಿಂಕಗಳ ಬಿಡಿಸುವ ।। ಚರಣ ।।
ವ್ಯಾಸರಾಯರಿಗೆ ವಿದ್ಯಾ-
ಭ್ಯಾಸವ ಮಾಡಿಸುವ ।
ದಾಸರ ನಾಮಗಳಿಂದ ಲೇಸು-
ಲೇಸೆಂದೆನಿಸಿಕೊಂಬ ।। ಚರಣ ।।
ಮಧ್ವ ಮತದಲ್ಲಿ ಪುಟ್ಟಿ ಮಾಯಾ-
ವಾದಿಗಳ ಕುಟ್ಟಿ ।
ಗೆದ್ದು ಮೆರೆದನು ದಿಟ್ಟ ಗುರು-
ರಾಯ ಜಗಜಟ್ಟಿ ।। ಚರಣ ।।
ಸುವರ್ಣವರ್ಣತೀರ್ಥರ
ಸುತ ಶ್ರೀಪಾದರಾಯರ ।
ಅವರ ನಾಮಗಳಿಂದ ಕಾವನಯ್ಯ
ಕರುಣಾನಿಧಿ ।। ಚರಣ ।।
ವರದ ವೆಂಕಟೇಶನನ -
ಒಲಿದು ಪೂಜಿಸುವನ ।
ಕರುಣದಿಂದ ಹಯವದನ ಸ-
ಲಹೋ ಯತಿರನ್ನನ ।। ಚರಣ ।।
*****
ಶ್ರೀವಾದಿರಾಜರು ಶ್ರೀಪಾದರಾಜರ ವರ್ಣನೆ ರೀತಿ:
ಶ್ರೀಪಾದರಾಯರ ದಿವ್ಯ ಶ್ರೀಪಾದವ ಭಜಿಸುವೆ|
ವಾಗ್ವಜ್ರಗಳಿಂದ ಮಾಯಾವಾದಿಗಳ ಬಾಯಿ ಬೀಗವಿಕ್ಕಿ ಮುದ್ರಿಸಿದ ಬಿಂಕಗಳ ಬಿಡಿಸುವ |
ವ್ಯಾಸರಾಯರಿಗೆ ವಿದ್ಯಾಭ್ಯಾಸವ ಮಾಡಿಸುವ ದಾಸರ ನಾಮಗಳಿಂದ
ಲೇಸುಲೇಸೆಂದೆನಿಸಿಕೊಂಬ |
ಮಧ್ವಮತದಲ್ಲಿ ಪುಟ್ಟಿ ಮಾಯಾವಾದಿಗಳ ಕುಟ್ಟಿ
ಗೆದ್ದು ಮೆರೆದನು ದಿಟ್ಟ ಗುರುರಾಯ ಜಗಜಟ್ಟಿ|
ಸುವರ್ಣವರ್ಣತೀರ್ಥರ ಸುತ ಶ್ರೀಪಾದರಾಯರು
ಅವರ ನಾಮಗಳಿಂದ ಕಾವನಯ್ಯ ಕರುಣಾನಿಧಿ
ವರದ ವೇಂಕಟೇಶನ್ನ ಒಲಿದು ಪೂಜಿಸುವನ ಕರುಣದಿಂದ ಹಯವದನ ಸಲಹೋ ಯತಿರತ್ನನ||
*****