Showing posts with label ಮಂಗಳಂ ಜಯ ಮಂಗಳಂ ಕೂರ್ಮಾಸನದೊಳಗೆ indiresha. Show all posts
Showing posts with label ಮಂಗಳಂ ಜಯ ಮಂಗಳಂ ಕೂರ್ಮಾಸನದೊಳಗೆ indiresha. Show all posts

Monday, 6 September 2021

ಮಂಗಳಂ ಜಯ ಮಂಗಳಂ ಕೂರ್ಮಾಸನದೊಳಗೆ ankita indiresha

 ರಾಗ: [ಸೌರಾಷ್ಟ್ರ] ತಾಳ: [ಆದಿ]

ಮಂಗಳಂ ಜಯ ಮಂಗಳಂ


ಕೂರ್ಮಾಸನದೊಳಗೆ ಕೂತವಗೆ 

ನಾರದ ಮುಖವನು ನೋಡುವವಗೆ

ನಾರಸಿಂಹನ ಪಾದವಾರಿಜವನು ನಿಜ

ಚಾರು ಶರೀರದೊಳಿಟ್ಟಾರಾಧಿಪಗೆ 1

ದಂಡ ಕಮಂಡಲ ಭೂಷಿತಗೆ

ಪಂಡಿತಾಗ್ರಣಿ ಯತೀಂದ್ರನಿಗೆ

ಹಿಂಡು ಶಿಷ್ಯರ ಮಧ್ಯ ಕುಳಿತು ಜಯೇಶ್ವರ ಅ-

ಖಂಡಬೋಧರ ಶಾಸ್ತ್ರ ಪೇಳುವಗೆ 2

ಮಂದಗಮನೆ ಪದಕೇಳಿದವಗೆ

ತಂದ ಮಂತ್ರಾಕ್ಷತೆ ಕೊಟ್ಟವಗೆ

ಇಂದಿರೇಶನ ಪದ ಪಾಡುವರನೆ ಕಂಡು

ಬಂದು ಮೋದಿಪ ಯತಿರಾಯಗೆ 3

****