Showing posts with label ಶ್ರೀಪುರಂದರದಾಸರು ಪರಮೇಷ್ಟಿ ಪಿತನಾಜ್ಞೆ ಬಂದ haridasa stutih ಹರಿದಾಸವೃಂದ ಸ್ತೋತ್ರ shyamasundara. Show all posts
Showing posts with label ಶ್ರೀಪುರಂದರದಾಸರು ಪರಮೇಷ್ಟಿ ಪಿತನಾಜ್ಞೆ ಬಂದ haridasa stutih ಹರಿದಾಸವೃಂದ ಸ್ತೋತ್ರ shyamasundara. Show all posts

Wednesday 1 September 2021

ಶ್ರೀಪುರಂದರದಾಸರು ಪರಮೇಷ್ಟಿ ಪಿತನಾಜ್ಞೆ ಬಂದ haridasa stutih ಹರಿದಾಸವೃಂದ ಸ್ತೋತ್ರ ankita shyamasundara

  ..

ಶ್ರೀ ಹರಿದಾಸವೃಂದ ಸ್ತೋತ್ರ

(ಕೋಲು ಪದ)

ಶ್ರೀ ಪುರಂದರದಾಸರು

ಪರಮೇಷ್ಟಿ ಪಿತನಾಜ್ಞೆ ಧರಿಸಿ ಬಂದ

ವರಸುರ ಮೌನಿಯವತಾರಿ ಕೋಲೆ |

ವರಸುರ ಮೌನಿಯವತಾರಿಯಾದ

ಪುರಂದರದಾಸರ ಬಲಗೊಂಬೆ ಕೋಲೆ 1

ಶ್ರೀ ವಿಜಯದಾಸರು

ಪುಟ್ಟ ಬದರಿಯಲ್ಲಿ ಪುಟ್ಟಿ ಪುರಂದರ

ಶ್ರೇಷ್ಟದಾಸರ ದಯಾಪಾತ್ರ ಕೋಲೆ |

ಶ್ರೇಷ್ಟದಾಸರ ದಯಪಾತ್ರರಾದ ವಿಜಯ

ವಿಠಲದಾಸರ ಬಲಗೊಂಬೆ ಕೋಲೆ 2

ಶ್ರೀ ಗೋಪಾಲದಾಸರು

ನಾಗಭೂಷಣಸುತ ನಾಗಾಶ್ಯವಂಶಜ

ಭಾಗವತಾಗ್ರಣಿ ಭಾಗಣ್ಣ ಕೋಲೆ |

ಭಾಗವತಾಗ್ರಣಿ ಭಾಗಣ್ಣದಾಸರಿಗೆ

ಬಾಗಿ ನಮಿಸಿ ಪ್ರಾರ್ಥಿಪೆ ಕೋಲೆ 3

ಶ್ರೀ ಜಗನ್ನಾಥ ದಾಸರು

ಹಿಂದೆ ಪ್ರಹ್ಲಾದನ ಹಿಂದೆ ಸಂಜಾತನಾಗಿ

ಬಂದ ಸಹ್ಲಾದನಂಶಜ ಕೋಲೆ |

ಬಂದ ಸಹ್ಲಾದನಂಶದ ಮಾನವಿ

ಮಂದಿರ ದಾಸರಿಗೆ ವಂದಿಪೆ ಕೋಲೆ 4

ಶ್ರೀ ಪ್ರಾಣೇಶದಾಸರು

ಶ್ರೀ ಗುರು ರಂಗವೊಲಿದ ಭಾಗವತರ ಛಾತ್ರ

ದಾಗಿ ಶ್ರೀ ಹರಿಯ ಬಣ್ಣಿಸಿ ಕೋಲೆ |

ಛಾತ್ರರಾಗಿ ಶ್ರೀಹರಿಯ ಬಣ್ಣಿಸಿದಂಥ ಲಿಂಗ

ಸೂಗೂರ ದಾಸರಿಗೆ ವಂದಿಪೆ ಕೋಲೆ 5

ಶ್ರೀ ಗುರುಪ್ರಾಣೇಶದಾಸರು

ಪ್ರಾಣೇದಾಸರ ಸೂನುವೆನಿಸಿದ

ಮಾನವಿ ರಾಯರ ಸೇವಿಸಿ ಕೋಲೆ |

ಮಾನವಿ ರಾಯರ ಸೇವಿಸಿದಂಥ ಗುರು

ಪ್ರಾಣೇಶದಾಸರ ಬಲಗೊಂಬೆ ಕೋಲೆ 6

ಶ್ರೀ ಶ್ರೀಶಪ್ರಾಣೇಶದಾಸರು

ಗಂಧದ ಕೊರಡು ಪೆಟ್ಟು ತಿಂದು ಮಾವಂದಿರಿಂದ

ಛಂದಾಗಿ ತತ್ವವರಿದಂಥ ಶ್ರೀ ರಘು |

ನಂದನ ದಾಸರಿಗೆ ವಂದಿಪೆ ಕೋಲೆ 7

ಶ್ರೀ ಶೇಷದಾಸರು

ಇಳೆಯೊಳು ಚಿಂತರವೇಲಿ ವಾನರೇಂದ್ರನ

ಸಲೆ ಸೇವಿಸುತ ವಲಿಸಿದ ಕೋಲೆ |

ಸಲೆ ಸೇವಿಸುತ ವಲಿಸಿದ ಗುರು ಪ್ರಥಮ

ಶಿಲೆ ಶೇಷದಾಸರ ಬಲಗೊಂಬೆ ಕೋಲೆ 8

ಪಾರ್ಥಿವ ವರ್ಷದಿ ಪಾರ್ಥಸಾರಥಿ ಭವ್ಯ

ಮೂರ್ತಿಯ ಮುದದಿ ಸ್ಥಾಪಿಸಿ ಕೋಲೆ |

ಮೂರ್ತಿಯ ಮುದದಿ ಸ್ಥಾಪಿಸಿದಂಥ

ಪೂರ್ವ ಪಾರ್ಥಾಹಿಪಾರ್ಯರ ಪ್ರಾರ್ಥಿಪೆ ಕೋಲೆ 9

ಪರಿವಾರ ಸಹಿತ ಚರಿಸುತ ಕೋಲೆ |

ಪರಿವಾರ ಸಹಿತ ಚರಿಸುತ ಅಸಿಘ್ಯಾಳು

ಪುರವಾಸ ದಾಸರಿಗೆ ಶರಣೆಂಬೆ ಕೋಲೆ 10

ಶ್ರೀ ಗುರು ಜಗನ್ನಾಥದಾಸರು

ಸ್ವಾಮಿರಾಯರ ವಲಿಸಿ ಸ್ವಾಮಿರಾಯನಿಗೊಲಿದು

ಸ್ವಾಮಿ ಶ್ರೀಹರಿಯ ಮಹಿಮೆಯ ಕೋಲೆ

ಸ್ವಾಮಿ ಹರಿಯ ಮಹಿಮೆ ಪೇಳಿದ ಕೋಸಿಗಿ

ಸ್ವಾಮಿರಾಯಾರ್ಯರ ಬಲಗೊಂಬೆ ಕೋಲೆ 11

ಶ್ರೀ ಇಂದಿರೇಶದಾಸರು

(ತಿರುಪತಿ ಶ್ರೀ ಹುಚ್ಚಾಚಾರ್ಯರು)

ಅಚ್ಭ ಸದ್ಭಕ್ತಿಯಲಿ ಅಚ್ಯುತಕೃಷ್ಣನ

ಅರ್ಚಿಸಿ ವಿಧ ವಿಧ ಮೆಚ್ಚಿಸಿ ಕೋಲೆ |

ಅರ್ಚಿಸಿ ವಿಧ ವಿಧ ಮೆಚ್ಚಿಸಿದಂಥ ಜ್ಞಾನಿ

ಹುಚ್ಚಾಚಾರ್ಯರನ ಬಲಗೊಂಬೆ ಕೋಲೆ 12

ಶ್ರೀ ಭೀಮಸೇನಾಚಾರ್ಯರು ಕೊಪ್ಪರ

ಶ್ರೀಮತ್ ಕಾರ್ಪರಕ್ಷೇತ್ರಧಾಮ ನರಸಿಂಹನ

ನೇಮ ಪೂರ್ವಕದಿ ಪೂಜಿಸಿ ಕೋಲೆ |

ನೇಮ ಪೂರ್ವಕದಿ ಪೂಜಿಸಿದಂಥ ಪೂಜ್ಯ

ಭೀಮಸೇನಾರ್ಯಋ ಬಲಗೊಂಬೆ ಕೋಲೆ 13

ಶ್ರೀ ರಾಘಪ್ಪದಾಸರು

ಮರುತನ ಪ್ರತ್ಯಕ್ಷಗೈದು ತನ್ನ

ಗುರುತು ತೋರದೆ ಚರಿಸಿದ ಕೋಲೆ |

ಗುರುತು ತೋರದೆ ಚರಿಸಿದ ರಘುಪತಿ

ಚರಣ ಕಿಂಕರಗೆ ಶರಣೆಂಬೆ ಕೋಲೆ 14

ನೂರಾರು ಶಿಷ್ಯಪರಿವಾರ ಸಹಿತರಾಗಿ

ಶೌರಿಕಥಾಮೃತ ಸವಿಯುತ ಕೋಲೆ |

ಶೌರಿಕಥಾಮೃತ ಸವಿದಂಥ ಶ್ರೀ ರಘುವೀರನ

ದಾಸರಿಗೆ ನಮಿಸುವೆ ಕೋಲೆ 15

ಗೋವಿಂದದಾಸರ ಭಾವಕ್ಕೆ ಮೆಚ್ಚಿ

ದೇವನ ಮಹಿಮೆ ತೋರಿದ ರಾಘವಾಖ್ಯ

ಕೋವಿದರಾಗ್ರಣಿಯ ಬಲಗೊಂಬೆ ಕೋಲೆ 16

ಶ್ರೀ ಗೋವಿಂಧದಾಸರು

ಎಳೆಯತನದಿ ವಿದ್ಯ ಕಲಿಯದೆ ಹರಿನಾಮ

ಬಲದಿಂದ ಜ್ಞಾನಿಗಳಿಸಿದ ಕೋಲೆ |

ಬಲದಿಂದ ಜ್ಞಾನಗಳಿಸಿ ಅಸಿಷ್ಯಾಳು

ನಿಲಯ ದಾಸರಿಗೆ ವಂದಿಪೆ ಕೋಲೆ 17

ಮಾವನ ವೈರಿಯಾದ ಮಾವರನ ಮನದಿ

ಮಾವನನಂತೆಂದು ಭಾವಿಸಿ ಕೋಲೆ |

ಮಾವನಂತೆಂದು ಭಾವಿಸಿ ಸ್ತನಿಸಿದ

ಗೋವಿಂದದಾಸರ ಬಲಗೊಂಬೆ ಕೋಲೆ 18

ಬಂದ ವಿಪ್ರರಿಗೆ ಸಂದರುಶನದಿಂದ

ವಂದಿಸಿ ಪರಮಾನಂದವ ಕೊಲೆ

ವಂದಿಸಿ ಪರಮಾನಂದವ ಬಡು ಗೋ

ವಂದಿಸಿ ದಾಸರಿಗೆ ವಂದಿಪೆ ಕೋಲೆ 19

ಲೇಸು ಭಕ್ತಿಯಿಂದ ದಾಸರ ಕವನ ಸುಧೆ

ಪ್ರಾಶನಗೈದು ಸಂತತ ಕೋಲೆ |

ಪ್ರಾಶನಗೈದು ಸಂತತ ಅಶಿಷ್ಯಾಳು

ವಾಸದಾಸರಿಗೆ ಶರಣೆಂಬೆ ಕೋಲೆ 20

ಹರಿವಾಸರುಪವಾಸ ಇರುಳು ಜಾಗರ ಶಿಷ್ಯ

ಶ್ರೀ ಐಕೂರಾಚಾರ್ಯರು

ಏಕಾಂತದಲಿ ಕುಳಿತು ಶ್ರೀಕಾಂತನ್ನ ವಲಿಸಿ

ಲೋಕಾಂತರದಲಿ ಚರಿಸಿದ ಕೋಲೆ |

ಲೋಕಾಂತರದಲಿ ಚರಿಸಿದ ನಮ್ಮಗುರು

ಐಕೂರಾಚಾರ್ಯರಿಗೆ ಶರಣೆಂಬೆ ಕೋಲೆ 21

ಹುಟ್ಟಿದು ಒಂದೂರು ಮೆಟ್ಟಿದ್ದು ಬಹು ಊರು

ಕಟ್ಟ ಕಡೆಯಲಿ ಹರಿಯೂರು ಕೋಲೆ |

ಕಟ್ಟ ಕಡೆಯಲ್ಲಿ ಹರಿ ಊರು ಸೇರಿದಂಥ

ಶ್ರೇಷ್ಟ ಸದ್ಗುರುಗಳ ಬಲಗೊಂಬೆ ಕೋಲೆ 22

ಶ್ರೀ ಮಾಧವೇಶಾಚಾರ್ಯರು

ಸಾಧಕರನ ಕರೆದು ಸಾದರದಲಿ ಮುಕ್ತಿ

ಹಾದಿ ಇದೆಂದು ಬೋಧಿಸಿದಂಥ ನಮ್ಮ

ಮಾಧವೇಶಾಚಾರ್ಯರ ಬಲಗೊಂಬೆ ಕೋಲೆ 23

ಚತುರ ವಿಂಶತಿ ವರನುಡಿಗಳಿಂದೆಸೆಯುವ

ರತುನ ಹಾರದ ಕೋಲುಪದ ಕೋಲೆ |

ರತುನ ಹಾರದ ಕೋಲುತದ ನಿತ್ಯಪರಿಸುವರಿಗೆ

ಶಾಮಸುಂದರವಿಠಲ ಮುದವೀವÀ ಕೋಲೆ 24

ನಿರುತ ಭಜಿಸಿರೋ ಘೋರ | ದುರಿತ ತ್ಯಜಿಸಿರೋ (incmplete?)

***