Showing posts with label ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳಶಶಿಮುಖಿ ಚೆಲುವಿಕೆಯ shree krishna. Show all posts
Showing posts with label ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳಶಶಿಮುಖಿ ಚೆಲುವಿಕೆಯ shree krishna. Show all posts

Wednesday, 1 September 2021

ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳಶಶಿಮುಖಿ ಚೆಲುವಿಕೆಯ ankita shree krishna

 ..

ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳಶಶಿಮುಖಿ ಚೆಲುವಿಕೆಯ ಪ


ಕುಸುಮನಾಭನ ಕೂಡೆನೆಂಬೋ ಭರದಿಂದಬಿಸಿ ಹಾಲನೆ ಹೊತ್ತಳು ಅ


ಹಾಲಕೊಂಡೀರೆಂದು ಸಾರಿದಡಾ ಬಾಲೆಕೇರಿ ಕೇರಿಯ ಒಳಗೆಹಾಲಿನ ಬೆಲೆಯನ್ನು ಹೇಳೆ ಮಾನಿನಿ ರನ್ನೆಕೇಳೀದ್ದು ಕೊಡುವೆನೆಂದ 1


ಕಮ್ಮನೆ ಕಾದಿಹ ಎಮ್ಮೆಯ ಹಾಲಿಗೆಒಮ್ಮನ ಹೊನ್ನೆಂದಳುಬೆಣ್ಣೆಗಳ್ಳ ಕೃಷ್ಣ ಕಣ್ಣು ಸನ್ನೆಯ ಮಾಡಿನಿನ್ನ ಮೋಹಿಪೆನೆನ್ನಲು 2


ಕೆಟ್ಟೆ ಕೆಟ್ಟೆನೊ ಕೃಷ್ಣ ಇತ್ತಲೇತಕೆ ಬಂದೆಅತ್ತೆ ಮಾವಂದಿರುಂಟುಥಟ್ಟನೆ ಕಂಡರೆ ಬಿಟ್ಟು ಬಿಡರು ನಿನ್ನಮುಟ್ಟದಿರೆಂದಳಾಕೆ3


ಎಂದ ಮಾತಿಗೆ ನಾನಂಜುವನಲ್ಲವೆಇಂದಿನ ದಿನದೊಳಗೆಮಂದಿರದೊಳಗಿದ್ದು ಮರುದಿನ ಪೋಗೆಂದುಮುಂಗೈಯ ಪಿಡಿದುಕೊಂಡ4


ಗಂಡನುಳ್ಳವಳ ಮುಂಗೈಯ ಪಿಡಿವಂಥಪುಂಡುತನವು ಸರಿಯೆಪುಂಡರೀಕಾಕ್ಷಿ ಕೇಳ್ ದುಂಡುಮಲ್ಲಿಗೆ ಹುವ್ವಕಂಡರೆ ಬಿಡುವರೇನೆ 5


ಬಾಳುವ ಹೆಣ್ಣಿನ ತೋಳನೆ ಪಿಡಿವುದುನ್ಯಾಯವೇನೋ ನಿನಗೆಫುಲ್ಲನಯನೆ ಕೇಳೆ ಆಯ್ದ ಮಲ್ಲಿಗೆ ಹುವ್ವಬಲ್ಲವರು ಬಿಡುವರೇನೆ6


ಬೈಗಾಯಿತು ಬೈದಾರು ಮನೆಯಲ್ಲಿಬಿಡು ಬಿಡು ಎಲೊ ಗೋವಳಐಗಾರ ನಾ ಕಾಣೆ ಜಗದಲ್ಲಿ ಜೀವರಹಿಡಿದು ಬಿಡುವನಲ್ಲವೆ 7


ಸಕ್ಕರೆ ಚಿಲಿಪಾಲು ಅರ್ಥಿ ಆಯಿತೆಂದುಎತ್ತಿಕೊಂಡು ಕುಡಿದಅಕ್ಕರೆಯಿಂದಲಿ ಬೇಡು ನೀ ಕೇಳಿದವಸ್ತುವ ಕೊಡುವೆನೆಂದ8


ವಸ್ತುವೇತಕೆ ಪರವಸ್ತುವೆ ನಾ ನಿನ್ನಮೆಚ್ಚಿ ಬಂದೇನೆಂದಳುಭಕ್ತರ ಸಿರಿಕೃಷ್ಣ ಕುಕ್ಷಿಯೊಳಗೆ ಇಟ್ಟುರಕ್ಷಿಸು ಎಂದಳಾಕೆ 9

***