Showing posts with label ಯಾತಕೆ ಹೋದೆವು ದುರುಳನ ಮನೆಗೆ ಪಾತಕಿ ಇವನು ಛೇ ಛೇ ಛೇ kadarundalageesha. Show all posts
Showing posts with label ಯಾತಕೆ ಹೋದೆವು ದುರುಳನ ಮನೆಗೆ ಪಾತಕಿ ಇವನು ಛೇ ಛೇ ಛೇ kadarundalageesha. Show all posts

Monday, 2 August 2021

ಯಾತಕೆ ಹೋದೆವು ದುರುಳನ ಮನೆಗೆ ಪಾತಕಿ ಇವನು ಛೇ ಛೇ ಛೇ ankita kadarundalageesha

ಲೌಕಿಕ ಸಂದರ್ಭದ ಹಾಡು

ಯಾತಕೆ ಹೋದೆವು ದುರುಳನ ಮನೆಗೆ

ಪಾತಕಿ ಇವನು ಛೇ ಛೇ ಛೇ ಪ

ಏಳು ಬಿಲ್ಲಿಯ ಕೊಡಲಿಕ್ಕೆ ಬಂದ

ಖೂಳನಿವನು ಈ ಮನೆಯೊಳಗೆ

ತಾಳಲಾರದೆ ಬೀಸಾಟಿ ಬಂದೆನು

ಶ್ರೀಲತಾಂಗಿಯ ರಮಣ ಗೋವಿಂದಾ 1

ಗುಂಡಪ್ಪನು ಯಾಗುಂಡಪ್ಪನು ರುಬು

ಗುಂಡಪ್ಪನು ನಾನಿವನರಿಯೆ

ಮಂಡರಂತೆ ದಿನಗಳಿವುತಲಿ ನಮ

ಕಂಡು ಮಾನ್ಯ ಮಾಡದೆ ಹೋದನು 2

ಹರಿಸರ್ವೋತ್ತಮನೆಂದು ಝಾಂUಟಿ

ಬಾರಿಪ ದಾಸರು ನಾವ್ ಹೌದು

ವರ ಕದರುಂಡಲುಗೀಶನ ಒಡೆಯ ನಮ್ಮ ಪಾಂ-

ಡುರಂಗನ ದಾಸನೆಂದು ತಿಳಿಯದಲೆ 3

***