Showing posts with label ಶ್ರೀಮುಖ ಸಂವತ್ಸರದಿ ಈ ಮಹೀ ಸಜ್ಜನರು prasannashreenivasa. Show all posts
Showing posts with label ಶ್ರೀಮುಖ ಸಂವತ್ಸರದಿ ಈ ಮಹೀ ಸಜ್ಜನರು prasannashreenivasa. Show all posts

Thursday, 5 August 2021

ಶ್ರೀಮುಖ ಸಂವತ್ಸರದಿ ಈ ಮಹೀ ಸಜ್ಜನರು ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀಮುಖ ಸಂವತ್ಸರ ಸ್ತುತಿ 


ಶ್ರೀಮುಖ ಸಂವತ್ಸರದಿ ಈ ಮಹೀ ಸಜ್ಜನರು ಸರ್ವರನು ಕಷ್ಟ ಉಪಟಳ ಹಾವಳೀ ಯಾವುದೂ ಪೀಡಿಸದೆ ಸೌಖ್ಯದಲಿ ಇರಲಿಕ್ಕೆ ದಯಮಾಡಿ ಒದಗಲಿ ನಿರ್ದೋಷ ಸರ್ವೇಶ ರಮಾಪತಿಯು ಪ 


ಪೂರ್ಣ ಕಲ್ಯಾಣತಮ ಗುಣಗಣಾರ್ಣವ ಆನಘ ಶ್ರೀಮನ್ನಾರಾಯಣನು ಘನದಯದಿ ಅತ್ರಿ ಋಷಿಗೊಲಿದು ತನ್ನನ್ನು ತಾನೇವೆ ದತ್ತಮಾಡಿ ತಾ ದತ್ತನೆನೆಸಿಕೊಂಡ ಅನುಪಮ ಮಹಾಯೋಗ ಯೋಗೇಶ್ವರನು ಶ್ರೀಮುಖದಿ ಕಾಯಲಿ ಶರಣೆಂಬೆ 1 

ಶ್ರೀಮುಖ ಸಂವತ್ಸರ ಅನುಕೂಲ ಕಾಲವು ಯೋಗ್ಯ ಸುಜನರಿಗೆ ಶ್ರೀ ಮಹಾಮುನಿಕುವರನೆಂದು ಪ್ರಾದುರ್ಭವಿಸಿದ ದತ್ತಾತ್ರೇಯನ್ನ ಸುಮನಸೆ ವಾಕ್‍ಕಾಯದಿಂ ಸೇವಿಸುವವರಿಗೆ ಜ್ಞಾನಬಲ ಐಶ್ವರ್ಯವಿತ್ತು ರೋಗನಿವಾರಣ ಮಾಳ್ಪ ಕರುಣಾಳು ದತ್ತಘೃಣೀಬ್ರಹ್ಮವಾಯುಸೇವ್ಯ 2 

ಶ್ರೀಮುಖ ಸಂವತ್ಸರ ರಾಜಾ ಬುಧನು ಮಹಾಶ್ರೇಷ್ಠ ಬುದ್ಧಿಕುಶಲನು ಬ್ರಹ್ಮದೇವರಿಂದ ಕೃತ ಬುಧನಾಮ ಶ್ರೀ ನಾರಾಯಣ ಪ್ರಿಯನು ಸಂವತ್ಸರ ಸಚಿವಾದಿ ಉಪನಾಯಕ ಸಹ ಪಾಲಿಸಲಿ ಲೋಕ ಜನರನ್ನು ಬ್ರಹ್ಮದೇವರಪಿತ ಪ್ರಸನ್ನ ಶ್ರೀನಿವಾಸ ಶ್ರೀ ಕೃಷ್ಣನೊಲುಮೆಯಿಂದ 3 

***