ಎನ್ನೊಡನೆ (ಎನ್ನೊಡಯನೆ) ಹುಟ್ಟಿದ ಹರಿಯೆ ಪಾಹಿ ಪ
ಅನ್ನಂತ ಗುಣವನಧಿ ಎನ್ನಂತೆ ನಟಿಸುವಿ ಅ.ಪ
ಸೃಷ್ಟಿಕಾಲದ ಮೊದಲು ಇಷ್ಟು ಪರಿಯಂತರದಿ
ಅಷ್ಟು ಕಾಲವು ನಿನ್ನ ನಾಮ ಧರಿಸೆ
ತುಷ್ಟಿ ಪೂರ್ಣನೆ ನೀನು ಮಂದಿ ಮೋಹಿಸಿ ಎನ್ನ
ಕಷ್ಟಕೆ ಗುರಿಮಾಳ್ಪುದುಚಿತವೇ ನಿನಗೆ 1
ಒಳಗಿದ್ದು ಎನ್ನಲ್ಲಿ ಎಂತೆಂತು ನೀನಾದೆ
ತಲೆ ಮಣಿದು ನಾನಂತು ಮಾಡಬೇಕೊ
ಮಲಗುವುದು ನಿಲ್ಲುವುದು ನಿದ್ದೆಗೈವುದು ಮತ್ತೆ
ತಿಳಿವುದು ತಿನ್ನುವುದು ನಿನ್ನ ಶ್ರೀಯವೊ ದೇವ 2
ಬಿಂಬನೀ ಪ್ರತಿಬಿಂಬ ನಾ ನಿನಗೆ ಎಂದೆಂದು
ಸಿಂಧು ಸದನ ಜಯೇಶವಿಠಲರಾಯ
ಡಿಂಬದಲಿ ನಡೆದ ಶ್ರೇಯ ನಿನ್ನದೆಂಬೊe್ಞÁನ
ಬೆಂಬಿಡÀದೆ ಪಾಲಿಸಿ ಬಿಂಬ ದರುಶನ ನೀಡೊ 3
***