ರಾಗ - : ತಾಳ -
ಹರಿ ಕೈಪಿಡಿಯೋ ಕೃಪಾವಿರಿಸೋ ದಾಸನಲಿ ll ಪ ll
ಸ್ಮರಿಸುವೆನನುದಿನ ಪರತರ ಪರಶಕ್ತಿ
ಸುರವರನೀನಲ್ಲವಿರುವರೆ ಪೊರೆವರು ll ೧ ll
ಶಿರಿಧರೆ ಸುರನರ ನೆರೆ ಓಲೈಸುತ
ಪರಮಪುರುಷ ನಿನ್ನ ಸ್ಮರಿಪರು ನಿರುತದಿ ll ೨ ll
ಹನುಮ ಭೀಮ ಮಧ್ವ ಮನಮುಟ್ಟಿ ಭಜಿಸುತ
ಘನನೀಲ ದೇವನೆ ನೆನೆವರ ಮನದಲಿ ll ೩ ll
ಹರಿ ನಿನ್ನ ಧ್ಯಾನವು ಹರಿವುದು ದುರಿತವ
ನರಸಿಂಹ ದೊರೆ ನಿನ್ನ ಮರೆವೆನೆ ll ೪ ll
**