check almost similar under purandara vittala ankita
ದುರಿತಗಜ ಪಂಚಾನನ ನರ-
ಹರಿಯೆ ದೇವರ ದೇವ ಕಾಯೊ ಗೋವಿಂದ ||ಪ||
ಹೆಸರುಳ್ಳ ನದಿಗಳನೊಳಗೊಂಬ ಸಮುದ್ರನು
ಬಿಸುಡುವನೆ ಕಾಲುಹೊಳೆಗಳನು ಗೊವಿಂದ ||೧||
ಒಂದು ಮೊಲಕೆ ಆರು ಹುಲಿ ಬಂದು ಕವಿದಿವೆ
ಬಂಧನ ಬಿಡಿಸೆನ್ನ ತಂದೆ ಗೋವಿಂದ ||೨||
ಹೆತ್ತ ಮಕ್ಕಳು ಮರುಳಾದರೆ ತಾಯ್ತಂದೆ
ಎತ್ತದೆ ನೆಲಕೆ ಬಿಸುಡುವರೆ ಗೋವಿಂದ ||೩||
ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ
ನಿನ್ನನ್ನು ಓಲೈಸಲ್ಯಾಕೆ ಗೋವಿಂದ ||೪||
ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆ
ಶ್ರೀಪತಿ ಶರಣೆನ್ನಲ್ಯಾಕೆ ಗೋವಿಂದ ||೫||
ಅರಸು ಮುಟ್ಟಲು ದಾಸಿ ರಂಭೆಯಾದಳು ದೇವ
ಪರುಷ ಮುಟ್ಟಲು ಲೋಹ ಹೊನ್ನು ಗೋವಿಂದ ||೬||
ಮಾನಾಭಿಮಾನದೊಡೆಯ ರಂಗವಿಠಲ
ಜ್ಞಾನಿಗಳರಸನೆ ಕಾಯೋ ಗೋವಿಂದ ||೭||
***
ದುರಿತಗಜ ಪಂಚಾನನ || ಪ ||
ನರಹರಿಯೆ ದೇವರ ದೇವ ಕಾಯೊ ಗೋವಿಂದ ||ಅ. ಪ||
ಹೆಸರುಳ್ಳ ನದಿಗಳ ಒಳಗೊಂಬ ಸಮುದ್ರನು
ಬಿಸುಡುವನೆ ಕಾಲುಹೊಳೆಗಳ ಗೋವಿಂದ ||೧||
ಹೆತ್ತ ಮಕ್ಕಳು ಹುಚ್ಚರಾದರೆ ತಾಯ್ತಂದೆ
ಎತ್ತದೆ ನೆಲಕ್ಕೆ ಬಿಸುಡುವರೆ ಗೋವಿಂದ ||೨||
ಒಂದು ಮೊಲಕೆ ಆರು ಹುಲಿ ಬಂದು ಕವಿದಿದೆ
ಬಂಧನ ಬಿಡಿಸಯ್ಯ ತಂದೆ ಗೋವಿಂದ ||೩||
ಮುನ್ನ ಮಾಡಿದ ಕರ್ಮ ಬೆನ್ನಟ್ಟಿ ಬಂದರೆ
ನಿನ್ನನ್ನು ಓಲೈಸಲೇಕೋ ಗೋವಿಂದ ||೪||
ಆಪತ್ತು ತಾಪತ್ರಯ ಬೆನ್ನ ಬಿಡದಿದ್ದರೆ
ಶ್ರೀಪತಿ ಶರಣೆನ್ನಲೇಕೋ ಗೋವಿಂದ ||೫||
ಅರಸು ಮುಟ್ಟಲು ದಾಸಿ ರಂಭೆಯಾದಳೊ ದೇವ
ಪರಶು ಮುಟ್ಟಲು ಲೋಹ ಸ್ವರ್ಣ ಗೋವಿಂದ ||೬||
ಮಾನಾಭಿಮಾನದೊಡೆಯ ಶ್ರೀರಂಗವಿಠಲ
ಜ್ಞಾನಿಗಳರಸನೆ ನೀ ಕಾಯೋ ಗೋವಿಂದ ||೭||
***
Duritagaja pan̄cānana || pa ||
narahariye dēvara dēva kāyo gōvinda ||a. Pa||
hesaruḷḷa nadigaḷa oḷagomba samudranu
bisuḍuvane kāluhoḷegaḷa gōvinda ||1||
hetta makkaḷu huccarādare tāytande
ettade nelakke bisuḍuvare gōvinda ||2||
ondu molake āru huli bandu kavidide
bandhana biḍisayya tande gōvinda ||3||
munna māḍida karma bennaṭṭi bandare
ninnannu ōlaisalēkō gōvinda ||4||
āpattu tāpatraya benna biḍadiddare
śrīpati śaraṇennalēkō gōvinda ||5||
arasu muṭṭalu dāsi rambheyādaḷo dēva
paraśu muṭṭalu lōha svarṇa gōvinda ||6||
mānābhimānadoḍeya śrīraṅgaviṭhala
jñānigaḷarasane nī kāyō gōvinda ||7||
***
Duritagaja panchanana nara-
Hariye devara deva kayo govinda ||pa||
Hesarulla nadigalanolagomba samudranu
Bisuduvane kaluholegalanu govinda ||1||
Ondu molake Aru huli bandu kavidive
Bandhana bidisenna tande govinda ||2||
Hetta makkalu maruladare taytande
Ettade nelake bisuduvare govinda ||3||
Munna madida karma bennatti bandare
Ninnannu olaisalyake govinda ||4||
Apattu tapatraya benna bidadiddare
Sripati saranennalyake govinda ||5||
Arasu muttalu dasi rambeyadalu deva
Parusha muttalu loha honnu govinda ||6||
Manabimanadodeya rangavithala
J~janigalarasane kayo govinda ||7||
**
ದುರಿತ ಗಜ ಪಂಚಾನನಾ ನರಹರಿಯೆ ದೇ l
ವರದೇವ ಕಾಯೊ ಗೋವಿಂದಾ ll ಪ ll
ಆಪತ್ತು ತಾಪತ್ರಯ ಬಾರದಿದ್ದರೆ l
ಶ್ರೀಪತಿ ರಮಣನೆನಲ್ಯಾಕೆ ಗೋವಿಂದ ll 1 ll
ಹೆತ್ತಮಕ್ಕಳು ಹುಚ್ಚಾದರೆ ತಾಯಿತಂದಿ l
ಎತ್ತದೆ ನೆಲಕೆ ಬಿಷ್ಟುವರೆ ಗೋವಿಂದಾ ll 2 ll
ಅರಸು ಮುಟ್ಟಲು ದಾಸಿ ರಂಭೆ ಆಗೋಳು ದೇವ l
ಪರಶು ಮುಟ್ಟಲು ಲೋಹ ಸುವರ್ಣ ಗೋವಿಂದ ll 3 ll
ಪೆಸರುಳ್ಳ ನದಿಗಳ ವಳಕೊಂಬ ಸಮುದ್ರ l
ಬಿಸಟೋನೆ ಕಾಲಹೊಳೆಗಳ ಗೋವಿಂದ ll 4 ll
ಒಂದು ಮೊಲಕ್ಕ ಆರುಹುಲಿ ಬಂದು ಕವಿದರ l
ಬಂಧನ ಬಿಡಿಸೆನ್ನ ತಂದೆ ಗೋವಿಂದ ll 5 ll
ಮುನ್ನ ಮಾಡಿದು ಕರ್ಮ ಬೆನ್ನಬಿಡದಿದ್ದರೆ l
ನಿನ್ನನೋಲೈಸಲೇಕಯ್ಯಾ ಗೋವಿಂದ ll 6 ll
ಮಾನಾಭಿಮಾನದೊಡಿಯ ರಂಗವಿಠಲ l
ಜ್ಞಾನಿಗಳರಸೇ ನೀ ಕಾಯೊ ಗೋವಿಂದ ll 7 ll
***
ರಾಗ : ಕಾಂಬೋದಿ ತಾಳ : ಆದಿ (RAGA TALA MAY DIFFER IN AUDIO)