Showing posts with label ಹರಿಸ್ವಾತಂತ್ರ ಪ್ರಮೇಯ ಸಾಧನ ಸುಳಾದಿ hayavadana ankita HARI SWATANTRA PRAMEYA SULADI. Show all posts
Showing posts with label ಹರಿಸ್ವಾತಂತ್ರ ಪ್ರಮೇಯ ಸಾಧನ ಸುಳಾದಿ hayavadana ankita HARI SWATANTRA PRAMEYA SULADI. Show all posts

Sunday, 8 December 2019

ಹರಿಸ್ವಾತಂತ್ರ ಪ್ರಮೇಯ ಸಾಧನ ಸುಳಾದಿ hayavadana ankita HARI SWATANTRA PRAMEYA SULADI

Audio by Mrs. Nandini Sripad

ಶ್ರೀ ವಾದಿರಾಜ ವಿರಚಿತ  ಶ್ರೀಹರಿ ಸ್ವಾತಂತ್ರ ಪ್ರಮೇಯ ಸಾಧನ ಸುಳಾದಿ 

 ರಾಗ ಕಾಂಬೋಧಿ 

 ಧ್ರುವತಾಳ 

ಹರಿ ಸ್ವಾತಂತ್ರ ಸರ್ವೇಶ 
ಸಿರಿ ವಿರಿಂಚಿ ಸಮೀರ
ಗರುಡ ಶಂಕರ ಶಕ್ರಾದ್ಯಮರರಿಗೆ
ಪರದೈವ ಸಾಕಾರ ಸಕಲ ಸದ್ಗುಣಪೂರ್ಣ
ನಿರುಪಮ ನಿರ್ದೋಷ ನಿತ್ಯತೃಪ್ತ
ವರ ಸುವರ್ಣ ವರ್ಣ ಅಖಿಳ ಜನ್ಮಾದಿ ಕಾರಣ
ಸ್ಥಿರ ಚರಾ ಜಗದ ಅತ್ಯಂತ ಭಿನ್ನ
ಅರಸಿ ಆತಗ ಲಕುಮಿ ಸುರರೆಲ್ಲ ಪರಿವಾರ
ತರತಮ್ಯ ಭಾವ ಜೀವರೊಳಿಪ್ಪದು
ಪರಮ ಮೋಕ್ಷ ವೆಂಬುದು ವೈಕುಂಠಾದಿಲೋಕ
ಪರಪಂಚ ಭೇದ ಪಂಚಕಾ ಭರಿತಾ
ಪರಮಾರ್ಥ ಸತ್ಯವಿದೆಲ್ಲ ಪುಶಿ ಅಲ್ಲವೆಂದು
ಕರುಣಾಕರ ಹಯವದನ ಬಲ್ಲ
ಹರಿ ಸ್ವಾತಂತ್ರ ಸರ್ವೇಶಾ ॥ 1 ॥

 ಮಠ್ಯತಾಳ 

ತ್ರಿವಿಧ ಜೀವರಿಹರು ಜಗದೊಳು
ಭವ ವಿಮೋಕ್ಷ ತಮವವರಗತಿ
ತ್ರಿವಿಧ ಸಾಧನಂಗಳಿಹವು ವಿಷ್ಣು
ಶ್ರವಣ ಮನನ ನಿಜ ಧ್ಯಾಸನಾ
ಭವಕೆ ಮಿಶ್ರ ಕರ್ಮ ತಮಕೆ 
 ಹಯವದನನ ದ್ವೇಷ ಕಾರಣ ॥ 2 ॥

 ರೂಪಕತಾಳ 

ನಾನಾವತಾರಗಳು ಜ್ಞಾನಾ ನಂದಾತ್ಮಕ
ಶೋಣಿತ ಶುಕ್ಲ ವಿಕಾರತೀ ದೂರ
ಆನಂದ ಸುತ ಮೂಲ ರೂಪದಿ ಬಂದ
ಕಾಣಳೆ ಮಗನ ಬಾಯೊಳು ತಾಯಿ ಜಗವ
ಆನಂದ ಸುತ ಮೂಲ ರೂಪದಿ ಬಂದ
ಶ್ರೀ ನಾರಸಿಂಹ ಹಯವದನಾದಿ ರೂಪಾ ನಿ -
ದಾನಿಸಿ ನೋಡೊ ಸಂಶಯ ನೀಡ್ಯಾಡೊ
ಆನಂದ ಸುತ ಮೂಲ ರೂಪದಿ ಬಂದಾ ॥ 3 ॥

 ಝಂಪೆತಾಳ 

ಲೀಲಾವತಾರದಲಿ ತದನು ಗುಣ ಕ್ರಿಯಗಳು
ಕೈಲಾಸಯಾತ್ರಿ ಧರ್ಮಜ ಯಾತ್ರಿಯಂತೆ ತಿಳಿ
ಮೂಲ ರೂಪದಿ ತೀರ್ಥಮೌಳಿ ಎನಿಸಿದ ಶಿವನು
ಶ್ರೀಲೋಲ ಏನು ಮಾಡಿದ ಪೇಳೊ ಮನುಜ
ಬಾಲಕತ್ವವ ಬಿಟ್ಟು ಹಯವದನ ಹರಿ ಜಗ -
ತ್ಪಾಲಕನೆಂದು ನಂಬೊ ನರ ನಟನೆ ಡಂಬೋ ॥ 4 ॥

 ತ್ರಿಪುಟತಾಳ 

ಪ್ರತ್ಯಕ್ಷ ಅನುಮಾನ ಆಗಮಗಳೆಂದು
ಶ್ರುತ್ಯರ್ಥವು ಸಮ ವೇದವೆ ಪೇಳಿತು
ಶ್ರುತ್ಯರ್ಥ ಪುರಾಣಗಳು ತ್ರಿವಿಧವೆಂದು
ಸತ್ಯವತಿ ಸೂನು ತಾನೆ ಪೇಳಿದನಾಗಿ
ಶ್ರುತ್ಯರ್ಥ ಪುರಾಣಗಳು ತ್ರಿವಿಧವೆಂದು
ತತ್ತನ್ಮತವ ಬಿಟ್ಟು ಶ್ರೀಹಯವದನ 
ಸರ್ವೋತ್ತಮನೆಂಬೊ ಮತವನೆ ನೆರೆನಂಬೊ ॥ 5 ॥

 ಧ್ರುವತಾಳ 

ಭೃಗು ಮುನಿಪನು ವಿಚಾರಿಸಿ 
ಕೃಷ್ಣಗೆ ಸಮಾಧಿಕರಿಲ್ಲ ವೆಂದು
ನಿಗಮಾರ್ಥ ಕೋವಿದ ಋಷಿಗಳಿಗೆ ಪೇಳ್ದ ತಾನಂದು
ಮುಗಿದ ಕರಗಳ ಬಾಷ್ಫಗಳ ತಂದು
ತೆಗಿ ಸಂದೇಹವ ಹಯವದನ ಪಾ -
ದಗಳ ನೆರೆನಂಬೊ ಮುಕ್ತಿ ಸುಖಕ್ಕಿಂಬೊ ॥ 6 ॥

 ಅಟ್ಟತಾಳ 

ಸತ್ಯಂಭಿದಾ ಶ್ರುತಿ ಮುಕ್ತಾನಾಂ
ಪರಮಾಂಗತಿ ಎಂಬ ಸ್ಮೃತಿ
ಮುಕ್ತಿ ಸಂಸಾರದೊಳು ಭೇದ ಪೇಳಿತು ಸರ್ವ
ಮಿಥ್ಯ ಐಕ್ಯವೆಂಬ ಮಾತು ಎಲ್ಲಿಹದೋ
ಉಕ್ತಿ ವಿಚಾರಿಸಿ ಯುಕ್ತಿಯಿಂದಲೆ ಹರಿ -
ಭಕ್ತರ ಕೇಳೋ ತಿಳಿಯದಿದ್ದರೆ
ಮತ್ತನಾಗದೆ ಹಯವದನನ ಭಜಿಸಿ ನೀ
ಮುಕ್ತನಾಗೋ ಭವ ಸಾಗರದಿಂದಲೀ ॥ 7 ॥

 ಆದಿತಾಳ 

ಅಪ್ರಾಕೃತ ಹರಿ ದಶೇಂದ್ರಿಯಂಗಳು
ಅಪ್ರಾಕೃತ ವಾತನ ದಿವ್ಯದೇಹ
ಅಪ್ರಾಕೃತ ವಾತನ ಸುಗುಣಂಗಳು
ಅಪ್ರಾಕೃತ ವಾತನ ದಿವ್ಯಲೀಲೆ
ಅಪ್ರಾಕೃತ ವಾತನ ಮೂರು ಮನೆಗಳು
ಅಪ್ರಾಕೃತ ವಾತನ ಅರ್ಧಾಂಗೀ
ಅಪ್ರಾಕೃತ ಹಯವದನನ ಕರುಣದಿಂದ
ಅಪ್ರಾಕೃತ ರಹರು ಮುಕ್ತಿಯೋಗ್ಯರು
ಅಪ್ರಾಕೃತಳಾತನ ಅರ್ಧಾಂಗೀ ॥ 8 ॥

 ಜತೆ 

ಇಂತು ಈ ಪರಿಜ್ಞಾನ ಉಳ್ಳ ಮಹಾತ್ಮರ
ಸಂತತ ಪೊರೆವ ಶ್ರೀಕಾಂತ ಹಯವದನಾ ॥
**************