Showing posts with label ಎಂತಲೊ ನಿನ್ನ ಮಹಿಮೆ ಯಶೋದೆಕಂದ prasannavenkata. Show all posts
Showing posts with label ಎಂತಲೊ ನಿನ್ನ ಮಹಿಮೆ ಯಶೋದೆಕಂದ prasannavenkata. Show all posts

Friday, 8 November 2019

ಎಂತಲೊ ನಿನ್ನ ಮಹಿಮೆ ಯಶೋದೆಕಂದ ankita prasannavenkata

by ಪ್ರಸನ್ನವೆಂಕಟದಾಸರು
ಎಂತಲೊ ನಿನ್ನ ಮಹಿಮೆ ಯಶೋದೆಕಂದ ಪ.

ದೇವರದೇವನೆನಿಸಿ ಆ ವೈಕುಂಠವಿರೆನಿತ್ಯಪಾವಿನೊಳು ನಿದ್ರೆಗೈವದಾವ ಚಂದವೊ ಮುಕುಂದ 1

ಸರಸಿಜಭವೇಶಾದಿ ಸುರಮುನಿಪೂಜೆಗಿಂದಪಿರಿದು ಸುಖವೆ ವಿದುರನ ಕುಡಿಕೆಪಾಲೌತಣ 2

ಪಾಲಗಡಲ ನಿವಾಸ ಮೂಲೋಕದುದರನಾಗಿಬಾಲಕತನದ ಲೀಲೆ ಸಲುವದೆ ನಳಿನಾಕ್ಷ 3

ಪಕ್ಷಿವರನೇರಿ ವಾಮ ಲಕ್ಷ್ಮಿಯಿರಲು ಯಜÕಭಿಕ್ಷವ ಬಯಸಿ ನಿನ್ನಕುಕ್ಷಿರಕ್ಷಿಸಿದೆಯಯ್ಯ4

ಅನ್ಯಚಿಂತೆಯನು ಬಿಟ್ಟು ನಿನ್ನ ಚಿಂತೇಲಿಹರಜನ್ಮದ ಲತೆಯಹರಿಪ್ರಸನ್ನವೆಂಕಟೇಶ ತಂದೆ5
********