..
ತೋರಿಸೋ ಶ್ರೀಹರಿ ನಿನ್ನ ತೋರಿಸೋ ಪ
ತೋರಿಸೋ ಹರಿ ವಿಶ್ವಮಯ ನಿನ್ನರೂಪವ
ತಾರಿಸೋ ಭವಸಾಗರದಿಂದಲೆನ್ನನು ಅ.ಪ
ಜಲ ಭೂ ಖೇಚರ ಪ್ರಾಣಿವರ್ಗಗಳೊಳು
ನೆಲಸಿ ಅವ್ಯಕ್ತನಾಗಿಹ ನಿನ್ನ ರೂಪವ 1
ತೃಣ ಲತೆ ತರು ವನಸ್ಪತಿ ವರ್ಗಗಳೊಳು
ಅಣಗಿ ಅವ್ಯಕ್ತನಾಗಿಹ ನಿನ್ನ ಮೂರ್ತಿಯ2
ಪಂಚಭೂತ ತನ್ಮಾತ್ರಂಗಳೊಳಡಗಿ ಪ್ರ
ಪಂಚಕವ್ಯಕ್ತನಾಗಿಹ ನಿನ್ನ ಮೂರ್ತಿಯ 3
ಭೂತಜಾಲದ ಹೃತ್ಪೀಠದಿ ಮಂಡಿಸಿ
ರಥಿಕನಾಗಿ ದೇಹರಥವ ಚಾಲಿಪ ನಿನ್ನ 4
ತಾರಾಗಣದಿ ಚಂದ್ರ ಸೂರ್ಯಾದಿಗ್ರಹ ಪರಿ
ವಾರದೊಳಡಗಿ ಜ್ಯೋತಿರ್ಮಯನಹ ನಿನ್ನ 5
ತಳಿರೆಲೆ ಹೂ ಹೀಚು ಕಾಯಿ ಧಾನ್ಯಂಗಳ
ಬೆಳೆಸಿ ಶೋಭಿಪ ದಿವ್ಯ ವಿವಿಧರೂಪಂಗಳ 6
ಅಂಗ ಪ್ರತ್ಯಂಗ ಕರಣಗಳೊಳಡಗಿಹ
ಮಂಗಳಮಯ ಚತುರ್ಮೂರ್ತಿಗಳಿರವನು 7
ಅಜಭವ ಸುರಮುಖ್ಯ ದೇವಗಣದೊಳಿಪ್ಪ
ಸುಜನರಂತರ್ಯಾಮಿ ಚರಪ್ರತಿಮೆಗಳನ್ನು 8
ಅಂಬುಜಾಂಬಕಿ ಜಗದಂಬೆ ಸಿತಾಪತಿ
ಬಿಂಬಮೂರುತಿ ರಘುರಾಮವಿಠಲ ನಿನ್ನ9
***
****