ಆಚಾರ್ಯ ನಾಗರಾಜು ಹಾವೇರಿ....
ಶ್ಯಾಮಸುಂದರ ದಾಸರ್ಗೆ -
ನಮೋ ನಮೋ ।
ಶ್ಯಾಮಾರ್ಯ ಕೋಪ್ರಮ್ಮರ -
ಪುತ್ರರ್ಗೆ ನಮೋ ನಮೋ ।। ಪಲ್ಲವಿ ।।
ಶೌರಿ ಕಥಾಮೃತ ರಚಿಸಿದ -
ದೇವ ಗುರುವಿನಂಶ ।
ಧೀರ ಮಾನವಿ ಮುನಿಪುಂಗವರ -
ಸೂನುವಾದ ।। ಚರಣ ।।
ಹರಿಕಥಾಮೃತಸಾರ -
ಸಿದ್ಧಿ ಪಡೆದು ।
ವರಕವಿ ಶ್ಯಾಮಸುಂದರ-
ಯೆಂದು ಖ್ಯಾತರಾದ ।। ಚರಣ ।।
ಗುರುಸಾರ್ವಭೌಮರಲಿ -
ಪರಮ ಭಕುತಿ ಮಾಡಿ ।
ಹರಿವಾಯುಗುರುದಾಸರ -
ಮೇಲೆ ಪದ ರಚಿಸಿದ ।। ಚರಣ ।।
ಗುರು ಜಗನ್ನಾಥದಾಸರ -
ಕರುಣೆಲಿ ಮಾತನಾಡಿ ।
ವರ ಕವಿಯೆಂದು ಕೀರ್ತಿ -
ಗಳಿಸಿದ ।। ಚರಣ ।।
ಐಕೂರು ನರಸಿಂಹಾರ್ಯ-
ರಲಿ ಶಿಷ್ಯತ್ವ ವಹಿಸಿ ।
ಅಸ್ಕಿಹಾಳ ಗೋವಿಂದಾರ್ಯರ -
ಅನುಗ್ರಹ ಪಡೆದ ।। ಚರಣ ।।
ಕುರುಡಿ ರಾಘವೇಂದ್ರಾಚಾರ್ಯ -
ರಿತ್ತಿ ಸುಶೀಲೇಂದ್ರಾ - ।
ರ್ಯರಿಗೆ ಲಕುಮೀಶ ಗುರುಶ್ಯಾಮ -
ಸುಂದರಯೆಂದು ಅಂಕಿತವಿತ್ತ ।। ಚರಣ ।।
ಅಂಬುಧಿಜಾ ವಲ್ಲಭ ವೇಂಕಟನಾಥೋsಭಿನ್ನ ।
ಅಂಬುದಶ್ಯಾಮನ ಪಾದ -
ಪದುಮ ಮಧುಪಾ ।। ಚರಣ ।।
*****