Showing posts with label ಹರಿಯೇಕಾಯೋ ಶರಧಿಶಯನನೇ ಸಿರಿದೇವಿಯರಸ ಪರಮಾತ್ಮ ಪರಾತ್ಪ್ಪರನೇ gururama vittala. Show all posts
Showing posts with label ಹರಿಯೇಕಾಯೋ ಶರಧಿಶಯನನೇ ಸಿರಿದೇವಿಯರಸ ಪರಮಾತ್ಮ ಪರಾತ್ಪ್ಪರನೇ gururama vittala. Show all posts

Thursday, 10 June 2021

ಹರಿಯೇಕಾಯೋ ಶರಧಿಶಯನನೇ ಸಿರಿದೇವಿಯರಸ ಪರಮಾತ್ಮ ಪರಾತ್ಪ್ಪರನೇ ankita gururama vittala

 ಶ್ರೀ ಗುರುರಾಮವಿಠಲ ದಾಸರ ರಚನೆ 


ಹರಿಯೇಕಾಯೋ ಶರಧಿಶಯನನೇ

ಸಿರಿದೇವಿಯರಸ ಪರಮಾತ್ಮ ಪರಾತ್ಪ್ಪರನೇ  


ನಿರುತ ನಿನ್ನ ಸ್ಮರಿಸುವ ಸ | ಜ್ಜನರಘಗಳ ಪರಿಹರಿಸುವ

ಬಿರುದ ಧರಿಸಿ ಮೆರೆಯವೆ ನೀ ಧರೆಯೊಳು ಶುಭಚರಿತನೆ  ಅ.ಪ


ವರರುಕ್ಮಾಂಗದ ಪ್ರಹ್ಲಾದರು ದ್ರೌಪದಿ ವಿಭೀಷಣಶ-

ಬರಿಧೃವಮುಖರೆಲ್ಲರು ನಿನ ಸಿರಿ ನಾಮದ ಮಹಿಮೆಯು 

1

ಬುದ್ಧಿವಂತರೆಲ್ಲ ಮನವ ತಿದ್ದಿಕೊಳುತಲಹರ್ನಿಶಿಯಲಿ

ವುದ್ಧವಪ್ರಿಯ ನಿನ್ನಪಾದ ಪದ್ಮಮಧುಪರೆನಿಪರು 

2

ಧೃಹಿಣನುಮಗ ಮೊಮ್ಮಗ ನಿನಗಹಿಭೂಷಣ ನಿನ್ನ ಮಹಿಮೆ

ಗಹನವಳವಡುವಡಲ್ಲವು ಮಹಿಯೊಳು ಪಾಮರರಿಗೆ 

3

ಸಕಲಕು ನೀನೆ ಗತಿಯೆಂದ ಕುಟಿಲರು ನಿರಂತರ ಪರ

ಸುಖವನು ತಾವ್ಕೋರದೆ ಸದ್ಭಕುತಿಯಿಂದ ಸೇವಿಪರು 

4

ಅರಿಯದ ದುರ್ಜನರೀದುಸ್ತರ ಸಂಸಾರದಿ ಮುಳುಗುತ

ಹೊರಳಿ ಹೊರಳಿ ನೋಯ್ವರು ಶ್ರೀ ಗುರುರಾಮ ವಿಠಲನೇ 

5

***