ಪುರಂದರದಾಸರು
ಏನ ಮಾಡಿದರೆನ್ನ ಭವಹಿಂಗದು |ದಾನವಾಂತಕ ನಿನ್ನ ದಯವಾಗದನಕ ಪ
ಅರುಣೋದಯಲೆದ್ದು ಅತಿಸ್ನಾನಗಳ ಮಾಡಿ |ಬೆರಳನೆಣಿಸುತ ಸ್ಮರಿಸಿ ನಿಜವರಿಯದೆ ||ಶರಣು ಸಾಷ್ಟಾಂಗವನು ಹಾಕಿದೆನು ಶತಸಹಸ್ರ |ಹರಿನಿನ್ನ ಕರುಣಾ ಕಟಾಕ್ಷವಿರದನಕ1
ಶೃತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ |ಅತಿ ಶೀಲಗಳನೆಲ್ಲ ಮಾಡಿ ದಣಿದೆ ||ಗತಿಯ ಪಡೆಯುವೆನೆಂದು ಗಯೆ ಕಾಶಿಯ ಮಾಡಿದೆನು |ರತಿಪತಿಯ ಪಿತ ನಿನ್ನ ದಯವಾಗದನಕ 2
ದಾನವನು ಮಾಡಿದೆನು ಮೌನವನು ತಾಳಿದೆನು |ಙ್ಞÕನ ಪುರುಷಾರ್ಥಕ್ಕೆ ಮನವೀಯದೆ ||ಶ್ರೀನಾಥ ದಯಪೂರ್ಣ ಪುರಂದರವಿಠಲನ |ಧ್ಯಾನಿಸುವರೊಡನಾಡಿ ನೆಲೆಗೊಳ್ಳದನಕ 3
**********