ಕೃತಿ ಕಾಖಂಡಕಿ ಕೃಷ್ಣದಾಸರು
ಇಂತುಯನ್ನಾ ಬಯಕೆ ಕೈಗೂಡಿಸೋ ದೇವಾ ಅಂತರ, ಗಲಿದೇ ಹಂಬಲಿಸುತಿದೇ ಜೀವಾ ಪ ನಿನ್ನ ಸಿರಿಪದಾ ಸಖಚಂದಿರದಲಿ ಎನ್ನ ಕಂಗಳು ಚಕೋರಾಗಿ ನೋಡಲಿ ನಿನ್ನ ಕಥೆಯಾ ಘನ ಗರ್ಜನೆಯಲಿ ಘನ್ನ ಶ್ರವಣ ಮಯವಾಗಿ ನಲಿಯಲಿ 1
ನಿನ್ನ ನಾಮಾ ಮೃತ ಫಲ ಸೇವಿಸಲಿ ಎನ್ನ ನಾಲಿಗೆ ಶುಕವಾಗಿರಲಿ ನಿನ್ನ ಚರಣಾರ್ಪಿತ ತುಲಸಿ ಕುಸುಮದಲಿ ಎನ್ನ ಪ್ರಾಣವು ಮಧುಪಾಗಿ ಕೂಡಲಿ 2
ನಿನ್ನ ಮನೆಯಾಶೆಯಾ ಊಳಿಗದಲಿ ಎನ್ನಂಗ ನಿರುತ ಮಾರಿಸಿ ಕೊಳ್ಳಲಿ ಘನ್ನ ಗರು ಮಹಿಪತಿ ಪ್ರಭು ಯಚ್ಚರದಲಿ ನಿನ್ನಂಕಿತದಾ ಜನ್ಮಗಳೇ ಬರಲಿ 3
***