Showing posts with label ಯಂತ್ರೋದ್ಧಾರಕ ಹನುಮಾ vijaya vittala ankita suladi ಯಂತ್ರೋದ್ಧಾರಕ ಸುಳಾದಿ YANTRODDHARAKA HANUMAA YANTRODDHARAKA SULADI. Show all posts
Showing posts with label ಯಂತ್ರೋದ್ಧಾರಕ ಹನುಮಾ vijaya vittala ankita suladi ಯಂತ್ರೋದ್ಧಾರಕ ಸುಳಾದಿ YANTRODDHARAKA HANUMAA YANTRODDHARAKA SULADI. Show all posts

Monday 9 December 2019

ಯಂತ್ರೋದ್ಧಾರಕ ಹನುಮಾ vijaya vittala ankita suladi ಯಂತ್ರೋದ್ಧಾರಕ ಸುಳಾದಿ YANTRODDHARAKA HANUMAA YANTRODDHARAKA SULADI



ರಾಗ ಸಿಂಧುಭೈರವಿ 
1st Audio by Mrs. Nandini Sripad





ಉಗಾಭೋಗ WAY


ಶ್ರೀ ವಿಜಯದಾಸಾರ್ಯ ವಿರಚಿತ 

 ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಸುಳಾದಿ 

 ಧ್ರುವತಾಳ 

ಯಂತ್ರೋದ್ಧಾರಕ ಹನುಮಾ ಸುರಸಾರ್ವಭೌಮಾ 
ಮಂತ್ರಧಾರಕ ಎನಗೆ ಮನಸಿನೊಳಗೆ 
ಯಂತ್ರವಾಹಕನ ಪೂರ್ಣದಯದಿಂದ ಸಕ - 
ಲಾಂತರಿಯಾಮಿಯಾಗಿ ಚರಾಚರದಲ್ಲೀಯ
ತಂತ್ರವನು ನಡೆಸುವ ಮಂತ್ರಿ ಈತನು ಕಾಣೊ ಸ್ವಾ - 
ತಂತ್ರ ಪುರುಷ ವಿಜಯವಿಟ್ಠಲನ್ನ ನಿಜಭಕ್ತ 
ಅಂತ್ರವಿಲ್ಲದ ತನ್ನ ಸ್ತುತಿಪರನ್ನ ಪೊರೆವ ॥ 1 ॥ 

 ಮಟ್ಟತಾಳ 

ವ್ಯಾಸರಾಯರು ತಮ್ಮ ಮೀಸಲ ಮನದಲ್ಲಿ ನಿಜ -
ಧ್ಯಾಸನ ಧ್ಯಾನದಲಿ ಶ್ರೀಶನ ಪೂಜಿಸಲು 
ಆ ಸಮಯದೊಳು ನೀ ಸುಳಿದು ನಿಂದು 
ಈ ಶಿಲೆಯೊಳಗೆ ಪ್ರಕಾಶಮಾನವಾಗೆ 
ತ್ರೀಸಾಮಾ ವಿಜಯವಿಟ್ಠಲನ ಸೇವೆ ಹಾ - 
ರೈಸಿ ಇಲ್ಲೆ ಮೆರೆದೆ ದಾಸರನ ಪೊರೆದೆ  ॥ 2 ॥ 

 ತ್ರಿವಿಡಿತಾಳ 

ಮೂರುಕೋಟಿ ಬೀಜಾಕಾರ ಮಂತ್ರವ ಜಪಿಸಿ 
ಧಾರಿಯನು ಎರದು ನಿನ್ನಯ ಸುಂದರ 
ಮೂರುತಿಯನು ನಿರ್ಮಾಣವನು ಮಾಡಿದರು 
ಆರುಕೋಣಿ ವಲಯಾಕಾರಾ ವಾನರಬದ್ಧ 
ಚಾರು ಶೋಭಿತ ತುಂಗಾತೀರದಲ್ಲಿ ವಾಸ 
ವೀರಾ ವಿಜಯವಿಟ್ಠಲನ್ನ 
ಕಾರುಣ್ಯದಲಿಗನುಗುಣ್ಯವಾಗಿ ನಿಂದೆ ॥ 3 ॥ 

 ಅಟ್ಟತಾಳ 

ಒಂದು ಕೋಟಿ ಬೀಜ ಮಂತ್ರ-
ದಿಂದ ಸುತ್ತ ಯಂತ್ರವ ಬರಿಸಿ 
ಅಂದು ಪ್ರಾಣ ಪ್ರತಿಷ್ಠೆಯ ಮಾಡಿ 
ನಿಂದಿರಿಸಿದರು ನಿನ್ನ ಮಂದಹಾಸದಿ ವ್ಯಾಸಮುನಿಗಳು 
ಒಂದು ಕರದಲಿ ಜಪದಮಾಲೆ 
ಒಂದು ಕರಾ ನಾಭಿ ಕೆಳಗೆ 
ಚಂದದಿಂದ ಪದುಮಾಸನ -
ದಿಂದ ಕುಳಿತು ನಿತ್ಯ ನಿತ್ಯಾ - 
ನಂದ ವಿಜಯವಿಟ್ಠಲನ್ನ 
ವಂದಿಸಿ ವರಗಳ ಕೊಡುತ 
ಬಂದ ನರರ ಪಾಲಿಸುತ್ತ ॥ 4 ॥ 

 ಆದಿತಾಳ 

ಭೂತ ಪ್ರೇತ ಪಿಶಾಚ ಪೀಡೆ 
ವಾತ ಶೀತ ಜ್ವರ ಮಿಕ್ಕಾದ 
ಯಾತನೆ ನಾನಾ ಕಠಿಣ ಭೀತಿ ಮತ್ತೆ 
ಯಾತರ್ಯಾತರರ್ಥಪೇಕ್ಷಿತ ತೆರದಲೆ 
ಆತುರದಿಂದಲೆ ಕೊಟ್ಟು ಪಾತಕವ ಹರಿಸಿ 
ಭೂತಭೃತೆ ವಿಜಯವಿಟ್ಠಲನ 
ದೂತರೊಳು ಶ್ರೇಷ್ಠನೀತಾ ॥ 5 ॥ 

 ಜತೆ 

ವ್ಯಾಸಮುನಿ ಪೂಜಿಪ ಯಂತ್ರೋದ್ಧಾರಕ ಹನುಮಾ 
ಈಶಾನಾ ವಿಜಯವಿಟ್ಠಲನ ದಾಸರ ಪ್ರೇಮಾ ॥ 

 ಲಘುಟಿಪ್ಪಣಿ : 

 ಧ್ರುವತಾಳದ ನುಡಿ : 

 ಯಂತ್ರೋದ್ಧಾರ = ಯಂತ್ರದಲ್ಲಿ ಆಹ್ವಾನಿಸಿ ಉದ್ಧರಿಸಲ್ಪಟ್ಟು - ಸ್ಥಾಪಿಸಲ್ಪಟ್ಟು ;
 ಮಂತ್ರಧಾರಕ = ಹಂಸಮಂತ್ರವನ್ನು ಧರಿಸಿ ಜಪಿಸುವವ ;
 ಯಂತ್ರವಾಹಕ = ಶರೀರವನ್ನು ಹೊತ್ತಿರುವ ಬಿಂಬರೂಪೀ ಹರಿ ;
 ತಂತ್ರ = ಕಾರ್ಯ ;
 ಅಂತ್ರವಿಲ್ಲದ = ಅಂತ್ರ - ಅಂತರ = ತಡೆಯಿಲ್ಲದೆ ; 

 ಮಟ್ಟತಾಳದ ನುಡಿ : 

 ಧ್ಯಾಸನ = ಧ್ಯಾನ ; ಶ್ರೀವ್ಯಾಸರಾಯರು  ಈಗ ಯಂತ್ರೋದ್ಧಾರಕ ಪ್ರಾಣದೇವನಿರುವ ಬಂಡೆಯ ಬಳಿ , ಪ್ರಾತಃ ಆಹ್ನೀಕ ಮಾಡುತ್ತಿದ್ದರು. ಆ ಸಮಯದಲ್ಲಿ ಧ್ಯಾನದಲ್ಲಿ ಶ್ರೀಹರಿಯನ್ನು ಕಾಣಲು ಒಮ್ಮೆ ಹವಣಿಸಿದಾಗ , ಆ ಬಂಡೆಯಲ್ಲಿ ಶ್ರೀಪ್ರಾಣದೇವರು ಕಾಣಿಸಿಕೊಂಡು , ತನ್ನನ್ನು  ಆ ಬಂಡೆಯಲ್ಲಿ ಪ್ರತಿಷ್ಠಾಪಿಸಲು ಪೂಜಿಸಿ ಸೇವೆಗೈಯಲು ಸೂಚಿಸಿದರು.
 ಪುರುಷ (ವಿ.ಸ.ನಾ 14) = ಜೀವಾತ್ಮರ ಶರೀರಗಳಲ್ಲಿ ಹೃದಯವೆಂಬ ಪಟ್ಟಣದಲ್ಲಿ ನೆಲಸಿರುವವನು ;
 ಪುರುಷ (ವಿ.ಸ.ನಾ 406) = ' ಭಗ ' ಎನಿಸುವ ಸಮಗ್ರ ಐಶ್ವರ್ಯ ಮೊದಲಾದ ಷಡ್ಗುಣಗಳನ್ನು  ಹೊಂದಿರುವವನು ;
 ತ್ರಿಸಾಮಾ (ವಿ.ಸ.ನಾ 574)  = ಮೂರು ವೇದಗಳಲ್ಲೂ ' ಸಾರ ' ಸ್ವರೂಪೀ ಹಾಗೂ ಆನಂದ ರೂಪೀ ಎಂದು ತಿಳಿಯಲ್ಪಡುವವನು; 

 ತ್ರಿವಿಡಿತಾಳದ ನುಡಿ : 

 ಬೀಜಾಕಾರಮಂತ್ರವ = ಹಂಸಮಂತ್ರವ ;
 ವೀರ  (ವಿ.ಸ.ನಾ 401) = ಯಾರಿಗೆ ಮತ್ತೊಬ್ಬ ಪ್ರೇರಕನಿಲ್ಲವೋ ಅಂತಹವನು ;
(ವಿ.ಸ.ನಾ 643)  = ವಾಯುದೇವರನ್ನು ಪ್ರೇರಿಸುವವನು ;
(ವಿ.ಸ.ನಾ 658)  = ಲಕ್ಷ್ಮೀದೇವಿಯನ್ನು ವಿಶೇಷವಾಗಿ ಸಂತೋಷಪಡಿಸುವವನು; 

 ಅಟ್ಟತಾಳದ ನುಡಿ : 

 ಪದುಮಾಸನದಿಂದ ಕುಳಿತು = ಯಂತ್ರೋದ್ಧಾರಕ ಪ್ರಾಣದೇವರು ಈ ಭಂಗಿಯಲ್ಲಿ ಕುಳಿತು ಕಾರುಣ್ಯನಿಧಿಯಾದ ತಾನು ಇಪ್ಪತ್ತೊಂದು ಸಾವಿರದ ಆರುನೂರು ಹಂಸಮಂತ್ರ ಜಪಗಳನ್ನು ಈರೇಳು ಲೋಕದೊಳು ಸರ್ವ ಜೀವರೊಳಗಿದ್ದು ಈ ರೀತಿ ಮಾಳ್ಪೆನೆಂದೆಲ್ಲರಿಗೆ ತೋರುತ್ತಿದ್ದಾನೆ. (ಶ್ರೀಜಗನ್ನಾಥದಾಸರು) 

 ಆದಿತಾಳದ ನುಡಿ : 

 ಭೀತರಣ = ಭಯ ಪರಿಹಾರಕ ;
 ಯಾತರ್ಯಾತರರ್ಥಪೇಕ್ಷೆ ತೆರದಲೆ = (ಶ್ರೀಪ್ರಾಣಪತಿಯು) ತಾನೇ ಭಕ್ತರ ಅಪೇಕ್ಷೆಗಳನ್ನು ತಿಳಿದು ;
ಭಕ್ತರಿಗೆ ಯಾವ ಪ್ರಯೋಜನದ ಅಪೇಕ್ಷೆ ಪುಟ್ಟದಂತೆ ಮಾಡಿ , ತಾನಾಗಿ ತಾನು ಪೂರೈಸಿ ಅಂದರೆ ಭಕ್ತರಿಗೆ ಬಯಕೆ ಪುಟ್ಟುವುದಕ್ಕಿಂತ ಮುನ್ನವೇ ಅವರಿಗೆ ಅವಶ್ಯಕವಾದ ಅಪೇಕ್ಷೆಗಳನ್ನು ತಾನಾಗಿ ಪೂರೈಸಿ ;
 ಆನಂದ (ವಿ.ಸ.ನಾ 596) = ಆನಂದ ಸ್ವರೂಪಿಯಾಗಿರುವವನು ;
 ಭೂತಭೃತ್ (ವಿ.ಸ.ನಾ 06) = ಬ್ರಹ್ಮಾದಿ ಸಕಲ ಚೇತನರನ್ನು ಪೋಷಿಸುವನು ;
 ಈಶಾನಾ (ವಿ.ಸ.ನಾ 67) = ಲೋಕಪಾಲಕರಾದ ಬ್ರಹ್ಮ-ರುದ್ರಾದಿಗಳನ್ನೂ ಚೇಷ್ಟಿಸುವಂತೆ ಮಾಡುವವನು; 

 ವಿವರಣೆ : 
 ಹರಿದಾಸರತ್ನಂ ಶ್ರೀಗೋಪಾಲದಾಸರು
**********



above Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 
ಹಂಪಿ ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಸುಳಾದಿ 

 ರಾಗ ಸಿಂಧುಭೈರವಿ 

 ಧ್ರುವತಾಳ 

ಯಂತ್ರೋದ್ಧಾರಕ ಹನುಮಾ ಸುರಸಾರ್ವಭೌಮಾ 
ಯಂತ್ರ ಧಾರಕ ಎನಗೆ ಮನಸಿನೊಳಗೆ 
ಯಂತ್ರವಾಹಕನ ಪೂರ್ಣದಯದಿಂದ ಸಕ - 
ಲಂತರಿಯಾಮಿಯಾಗಿ ಚರಾಚರದಲ್ಲೀ 
ತಂತ್ರವನು ನಡಿಸುವ ಮಂತ್ರಿ ಈತನು ಕಾಣೊ ಸ್ವಾ - 
ತಂತ್ರಪುರುಷ ವಿಜಯವಿಠಲನ್ನ ನಿಜ ಭಕ್ತ 
ಅಂತ್ರವಿಲ್ಲದ ತನ್ನ ಸ್ತುತಿಪರನ್ನ ಪೊರೆವ ॥ 1 ॥

 ಮಟ್ಟತಾಳ 

ವ್ಯಾಸರಾಯರು ತಮ್ಮ ಮೀಸಲ ಮನದಲ್ಲಿ ನಿಜ - 
ಧ್ಯಾಸನ ಧ್ಯಾನದಲಿ ಶ್ರೀಶನ ಪೂಜಿಸಲು 
ಆ ಸಮಯದೊಳು ನೀ ಸುಳಿದು ನಿಂದು 
ಈ ಶಿಲೆಯೊಳಗೆ ಪ್ರಕಾಶಮಾನವಾಗೆ 
ತ್ರಿಸಾಮಾ ವಿಜಯವಿಠ್ಠಲನ ಸೇವೆ ಹಾ - 
ರೈಸಿ ಇಲ್ಲೆ ಮೆರೆದೆ ದಾಸರನ ಪೊರೆದೆ ॥ 2 ॥

 ತ್ರಿವಿಡಿತಾಳ 

ಮೂರುಕೋಟಿ ಬೀಜಾಕಾರಾ ಮಂತ್ರವ ಜಪಿಸಿ 
ಧಾರಿಯನು ಎರದು ನಿನ್ನಯ ಸುಂದರ 
ಮೂರುತಿಯನು ನಿರ್ಮಾಣವನು ಮಾಡಿದರು 
ಆರುಕೋಣಿ ವಲಯಾಕಾರಾ ವಾನರಬದ್ಧ 
ಚಾರು ಶೋಭಿತ ತುಂಗಾತೀರದಲ್ಲಿ ವಾಸ 
ವೀರಾ ವಿಜಯವಿಠಲನ್ನ 
ಕಾರುಣ್ಯದಲಿಗನುಗುಣ್ಯವಾಗಿ ನಿಂದೆ ॥ 3 ॥

 ಅಟ್ಟತಾಳ 

ಒಂದು ಕೋಟಿ ಬೀಜ ಮಂತ್ರ 
ದಿಂದ ಸುತ್ತ ಯಂತ್ರವ ಬರಿಸಿ 
ಅಂದು ಪ್ರಾಣ ಪ್ರತಿಷ್ಠೆಯ ಮಾಡಿ 
ನಿಂದಿರಿಸಿದರು ನಿನ್ನ ಮಂದಹಾಸದಿ ವ್ಯಾಸಮುನಿಗಳು 
ಒಂದು ಕರದಲಿ ಜಪದಮಾಲೆ 
ಒಂದು ಕರಾ ನಾಭಿ ಕೆಳಗೆ 
ಚಂದದಿಂದ ಪದುಮಾಸನ 
ದಿಂದ ಕುಳಿತು ನಿತ್ಯ ನಿತ್ಯಾ - 
ನಂದ ವಿಜಯವಿಠಲನ್ನ 
ವಂದಿಸಿ ವರಗಳ ಕೊಡುತ ಬಂದ ನರರ ಪಾಲಿಸುತ್ತ ॥ 4 ॥

 ಆದಿತಾಳ 

ಭೂತ ಪ್ರೇತ ಪಿಶಾಚ ಪೀಡೆ 
ವಾತ ಶೀತ ಜ್ವರ ಮಿಕ್ಕಾದ 
ಯಾತನೆ ನಾನಾ ಕಠಿಣ ಭೀತಿ ಮತ್ತೆ 
ಯಾತರ್ಯಾತರ್ಥಪೇಕ್ಷಿತ ತೆರದಲೆ 
ಆತುರದಿಂದಲೆ ಕೊಟ್ಟು ಪಾತಕವ ಹರಿಸಿ 
ಭೂತಭೃತೆ ವಿಜಯವಿಠ್ಠಲನ ದೂತರೊಳು ಶ್ರೇಷ್ಠನೀತಾ ॥ 5 ॥

 ಜತೆ 

ವ್ಯಾಸಮುನಿ ಪೂಜಿಪ ಯಂತ್ರೋದ್ಧಾರಕ ಹನುಮಾ 

ಈಶಾನಾ ವಿಜಯವಿಠ್ಠಲನ ದಾಸರ ಪ್ರೇಮಾ ॥
*************


ರಾಗ ಸಿಂಧುಭೈರವಿ 

 ಧ್ರುವತಾಳ 

ಯಂತ್ರೋದ್ಧಾರಕ ಹನುಮಾ ಸುರಸಾರ್ವಭೌಮಾ |
ಯಂತ್ರ ಧಾರಕ ಎನಗೆ ಮನಸಿನೊಳಗೆ |
ಯಂತ್ರವಾಹಕನ ಪೂರ್ಣದಯದಿಂದ ಸಕ - |
ಲಂತರಿಯಾಮಿಯಾಗಿ ಚರಾಚರದಲ್ಲೀ |
ತಂತ್ರವನು ನಡಿಸುವ ಮಂತ್ರಿ ಈತನು ಕಾಣೊ ಸ್ವಾ - |
ತಂತ್ರ ಪುರುಷ ವಿಜಯವಿಠಲನ್ನ ನಿಜ ಭಕ್ತ |
ಅಂತ್ರವಿಲ್ಲದ ತನ್ನ ಸ್ತುತಿಪರನ್ನ ಪೊರೆವ ॥ 1 ॥

 ಮಟ್ಟತಾಳ 

ವ್ಯಾಸರಾಯರು ತಮ್ಮ ಮೀಸಲ ಮನದಲ್ಲಿ ನಿಜ - |
ಧ್ಯಾಸನ ಧ್ಯಾನದಲಿ ಶ್ರೀಶನ ಪೂಜಿಸಲು |
ಆ ಸಮಯದೊಳು ನೀ ಸುಳಿದು ನಿಂದು |
ಈ ಶಿಲೆಯೊಳಗೆ ಪ್ರಕಾಶಮಾನವಾಗೆ |
ತ್ರಿಸಾಮಾ ವಿಜಯವಿಠ್ಠಲನ ಸೇವೆ ಹಾ - |
ರೈಸಿ ಇಲ್ಲೆ ಮೆರೆದೆ ದಾಸರನ ಪೊರೆದೆ ॥ 2 ॥

 ತ್ರಿವಿಡಿತಾಳ 

ಮೂರುಕೋಟಿ ಬೀಜಾಕಾರಾ ಮಂತ್ರವ ಜಪಿಸಿ |
ಧಾರಿಯನು ಎರದು ನಿನ್ನಯ ಸುಂದರ |
ಮೂರುತಿಯನು ನಿರ್ಮಾಣವನು ಮಾಡಿದರು |
ಆರುಕೋಣಿ ವಲಯಾಕಾರಾ ವಾನರಬದ್ಧ |
ಚಾರು ಶೋಭಿತ ತುಂಗಾತೀರದಲ್ಲಿ ವಾಸ |
ವೀರಾ ವಿಜಯವಿಠಲನ್ನ |
ಕಾರುಣ್ಯದಲಿಗನುಗುಣ್ಯವಾಗಿ ನಿಂದೆ ॥ 3 ॥

 ಅಟ್ಟತಾಳ 

ಒಂದು ಕೋಟಿ ಬೀಜ ಮಂತ್ರ ।
ದಿಂದ ಸುತ್ತ ಯಂತ್ರವ ಬರಿಸಿ |
ಅಂದು ಪ್ರಾಣ ಪ್ರತಿಷ್ಠೆಯ ಮಾಡಿ |
ನಿಂದಿರಿಸಿದರು ನಿನ್ನ ಮಂದಹಾಸದಿ ವ್ಯಾಸಮುನಿಗಳು |
ಒಂದು ಕರದಲಿ ಜಪದಮಾಲೆ |
ಒಂದು ಕರಾ ನಾಭಿ ಕೆಳಗೆ |
ಚಂದದಿಂದ ಪದುಮಾಸನ ।
ದಿಂದ ಕುಳಿತು ನಿತ್ಯ ನಿತ್ಯಾ - |
ನಂದ ವಿಜಯವಿಠಲನ್ನ |
ವಂದಿಸಿ ವರಗಳ ಕೊಡುತ ಬಂದ ನರರ ಪಾಲಿಸುತ್ತ ॥ 4 ॥

 ಆದಿತಾಳ 

ಭೂತ ಪ್ರೇತ ಪಿಶಾಚ ಪೀಡೆ |
ವಾತ ಶೀತ ಜ್ವರ ಮಿಕ್ಕಾದ |
ಯಾತನೆ ನಾನಾ ಕಠಿಣ ಭೀತಿ ಮತ್ತೆ |
ಯಾತರ್ಯಾತರ್ಥಪೇಕ್ಷಿತ ತೆರದಲೆ |
ಆತುರದಿಂದಲೆ ಕೊಟ್ಟು ಪಾತಕವ ಹರಿಸಿ |
ಭೂತಭೃತೆ ವಿಜಯವಿಠ್ಠಲನ ದೂತರೊಳು ಶ್ರೇಷ್ಠನೀತಾ ॥ 5 ॥

 ಜತೆ 

ವ್ಯಾಸಮುನಿ ಪೂಜಿಪ ಯಂತ್ರೋದ್ಧಾರಕ ಹನುಮಾ |
ಈಶಾನಾ ವಿಜಯವಿಠ್ಠಲನ ದಾಸರ ಪ್ರೇಮಾ ॥
**********



ಶ್ರೀ ವಿಜಯದಾಸಾರ್ಯ ವಿರಚಿತ 
 ಹಂಪಿ ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ಸುಳಾದಿ 

ಧ್ರುವತಾಳ
ಯಂತ್ರೋದ್ಧಾರಕ ಹನುಮಾ ಸುರಸಾರ್ವಭೌಮಾ |
ಯಂತ್ರ ಧಾರಕ ಎನಗೆ ಮನಸಿನೊಳಗೆ |
ಯಂತ್ರ ವಾಹನನ ಪೂರ್ಣದಯದಿಂದ ಸಕ |
ಲಾಂತರಿಯಾಮಿಯಾಗಿ ಚರಾಚರದಿಲ್ಲೀ |
ತಂತ್ರವನು ನಡಿಸುವ ಮಂತ್ರಿ ಈತನು ಕಾಣೊ ಸ್ವಾ |
ತಂತ್ರ ಪುರುಷ ವಿಜಯವಿಠಲನ್ನ ನಿಜ ಭಕ್ತ |
ಅಂತ್ರವಿಲ್ಲದ ತನ್ನ ಸ್ತುತಿಪರನ್ನ ಪೊರೆವ ||1||

ಮಟ್ಟತಾಳ
ವ್ಯಾಸರಾಯರು ತಮ್ಮ ಮೀಸಲ ಮನದಲ್ಲಿ ನಿಜ |
ದ್ಯಾಸನ ಧ್ಯಾನದಲಿ ಶ್ರೀಶನ ಪೂಜಿಸಲು |
ಆ ಸಮಯದೊಳು ಸುಳಿದು ನಿಂದು |
ಈ ಶಿಲೆಯೊಳಗೆ ಪ್ರಕಾಶ ಮಾನವಾಗೆ |
ತ್ರಿಸಾಮಾ ವಿಜಯವಿಠಲವ ಸೇವೆ ಹಾ |
ರೈಸಿ ಇಲ್ಲೆ ಮೆರದೆ ದಾಸರನ ಪೊರದೆ ||2||

ತ್ರಿವಿಡಿತಾಳ
ಮೂರುಕೋಟಿ ಬೀಜಾಕಾರಾ ಮಂತ್ರವ ಜಪಿಸಿ |
ಧಾರಿಯನು ಎದು ನಿನ್ನಯ ಸುಂದರ |
ಮೂರುತಿಯನು ನಿರ್ಮಾಣವನು ಮಾಡಿದರು |
ಆರುಕ್ಷೋಣಿ ವಲಯಾ ಕಾರಾ ವಾನರ ಬದ್ಧ |
ಚಾರು ಶೋಭಿತ ತುಂಗಾತೀರದಲ್ಲಿ ವಾಸ |
ವೀರಾ ವಿಜಯವಿಠಲನ್ನ |
ಕಾರುಣ್ಯದಲೀ ಗನುಗುಣ್ಯವಾಗಿ ನಿಂದೆ ||3||

ಅಟ್ಟತಾಳ
ಒಂದು ಕೋಟಿ ಬೀಜ ಮಂತ್ರ |
ದಿಂದ ಸುತ್ತ ಯಂತ್ರವ ಬರಿಸಿ |
ಅಂದು ಪ್ರಾಣ ಪ್ರತಿಷ್ಠೆಯ ಮಾಡಿ |
ನಿಂದಿರಿಸಿದರು ನಿನ್ನ ಮಂದಹಾಸದಿ ವ್ಯಾಸ ಮುನಿಗಳು |
ಒಂದು ಕರದಲಿ ಜಪಮಾಲೆ |
ಒಂದು ಕರಾ ನಾಭಿ ಕೆಳಗೆ |
ಚಂದದಿಂದ ಪದು ಮಾಸನ |
ದಿಂದ ಕುಳಿತು ನಿತ್ಯ ನಿತ್ಯಾ |
ನಂದ ವಿಜಯವಿಠಲನ್ನ |
ವಂದಿಸಿ ವರಗಳ ಕೊಡುತ |
ಬಂದ ನರರ ಪಾಲಿಸುತ್ತ ||4||

ಆದಿತಾಳ
ಭೂತ ಪ್ರೇತ ಪಿಶಾಚ ಪೀಡೆ |
ವಾತ ಶೀತ ಜ್ವರ ಮಿಕ್ಕಾದ |
ಯಾತನೆ ನಾನಾ ಕಠಿಣ ಭೀತಿ ಮತ್ತೆ |
ಯಾತರ್ಯಾತರರ್ಧಪೇಕ್ಷಿತ ತೆರದಲೆ |
ಆತುರದಿಂದಲೆ ಕೊಟ್ಟು ಪಾತಕವ ಹರಿಸಿ |
ಭೂತಭೃತೆ ವಿಜಯವಿಠಲನ |
ದೂತರೊಳು ಶ್ರೇಷ್ಠನೀತಾ ||5||

ಜತೆ
ವ್ಯಾಸಮುನಿ ಪೂಜಿಪ ಯಂತ್ರೋದ್ಧಾರಕ ಹನುಮಾ |
ಈಶಾನಾ ವಿಜಯವಿಠಲನ ದಾಸರ ಪ್ರೇಮಾ ||6||
************